Nokia G42 5G: 5000mAh ಬ್ಯಾಟರಿ 50MP ಕ್ಯಾಮೆರಾದೊಂದಿಗೆ ಬಿಡುಗಡೆ! Latest ಬೆಲೆ ಎಷ್ಟು । Tech News
Nokia G42 5G ಇದೊಂದು ಭರವಸೆ ನೀಡಿದಂತೆ ಭಾರತದಲ್ಲಿ ನೋಕಿಯಾ ಈ ಹೊಸ G ಸರಣಿಯಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಆಗಿದೆ.
Nokia G42 5G ಫೋನ್ 6.56 ಇಂಚಿನ HD+ ಡಿಸ್ಪ್ಲೇಯೊಂದಿಗೆ 90Hz ಡಿಸ್ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನೊಂದಿಗೆ ಚಾಲಿತವಾಗಿದೆ.
Nokia G42 5G ಹೆಚ್ಚುವರಿ ವರ್ಚುವಲ್ RAM ಜೊತೆಗೆ 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಮುಂಭಾಗದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Nokia G42 5G ಫೋನ್ 6GB ಯ RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್ ಜೊತೆಗೆ ಜೋಡಿಸಲಾಗಿದೆ
ಭಾರತದಲ್ಲಿ ಅತಿ ಹೆಚ್ಚು ಭರವಸೆಯ ಸ್ಮಾರ್ಟ್ಫೋನ್ ಬ್ರಾಂಡ್ ನೋಕಿಯಾ ತನ್ನ ಹೊಚ್ಚ ಹೊಸ 5G ಸ್ಮಾರ್ಟ್ಫೋನ್ ಅನ್ನು ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. HMD ಗ್ಲೋಬಲ್ ಇದನ್ನು Nokia G42 5G ಎಂದು ಹೆಸರಿಸಿದ್ದು ಇದೊಂದು ಭರವಸೆ ನೀಡಿದಂತೆ ಭಾರತದಲ್ಲಿ ನೋಕಿಯಾ ಈ ಹೊಸ G ಸರಣಿಯಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಆಗಿದೆ. ಈ Nokia G42 5G ಫೋನ್ 6.56 ಇಂಚಿನ HD+ ಡಿಸ್ಪ್ಲೇಯೊಂದಿಗೆ 90Hz ಡಿಸ್ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನೊಂದಿಗೆ ಚಾಲಿತವಾಗಿದೆ.
Nokia G42 5G ಹೆಚ್ಚುವರಿ ವರ್ಚುವಲ್ RAM ಜೊತೆಗೆ 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಮುಂಭಾಗದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ನೋಕಿಯಾ Nokia G42 5G ಆಂಡ್ರಾಯ್ಡ್ 13 ಅನ್ನು ಹೊಂದಿದೆ. ಅಲ್ಲದೆ ಎರಡು ವರ್ಷಗಳ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಜೊತೆಗೆ 3 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಅನ್ನು ಸಹ ಕಂಪನಿ ಖಾತರಿಪಡಿಸುತ್ತದೆ. ನೋಕಿಯಾದ Nokia G42 5G ಸ್ಮಾರ್ಟ್ಫೋನ್ 5000mAh ಬ್ಯಾಟರಿ 50MP ಕ್ಯಾಮೆರಾದದೊಂದಿಗೆ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನು ನೀಡಲು ಸಜ್ಜಾಗಿದೆ.
Nokia G42 5G ವಿಶೇಷಣಗಳು
ಭಾರತದಲ್ಲಿ ಇಂದು ಬಿಡುಗಡೆಯಾಗಿರುವ ಈ Nokia G42 5G ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ 6.56 ಇಂಚಿನ HD+ LCD ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 560nits ಗರಿಷ್ಠ ಹೊಳಪನ್ನು ಹೊಂದಿದೆ. ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಸಹ ಹೊಂದಿದೆ. 5G ಸ್ಮಾರ್ಟ್‌ಫೋನ್ ಹುಡ್ ಅಡಿಯಲ್ಲಿ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದರಲ್ಲಿ 6GB ಯ RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್ ಜೊತೆಗೆ ಜೋಡಿಸಲಾಗಿದೆ. ಲಭ್ಯವಿರುವ RAM ಅನ್ನು ವಾಸ್ತವಿಕವಾಗಿ 11GB ವರೆಗೆ ವಿಸ್ತರಿಸಬಹುದು.
Are you ready to #MoveFast with the incredible Nokia G42 5G! Powered by Snapdragon 480+ 5G, 11GB RAM, 50MP triple rear AI camera, 3-day battery life… all this, and so much more…
Launching at just ₹12,599. Sale starts on 15th September, 12PM on Amazon Specials.
Click here… pic.twitter.com/rqhbVSKQex
— Nokia Mobile India (@NokiamobileIN) September 11, 2023
Nokia G42 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು ಎರಡನೇಯ 2MP ಮೆಗಾಪಿಕ್ಸೆಲ್ ಸೆನ್ಸರ್ ಒಳಗೊಂಡಿದೆ. ಇದರ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. Nokia G42 5G ಕನೆಕ್ಟಿವಿಟಿಯ ಬಗ್ಗೆ ಮಾತನಾಡುವುದಾದರೆ ಇದರಲ್ಲಿ 5G, GPS, USB ಟೈಪ್-C ಪೋರ್ಟ್, ಬ್ಲೂಟೂತ್ 5.1 ಒಳಗೊಂಡಿವೆ. ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52-ರೇಟೆಡ್ ಬಿಲ್ಡ್ ಅನ್ನು ಸಹ ಹೊಂದಿದೆ.
Nokia G42 5G ಬೆಲೆ ಮತ್ತು ಲಭ್ಯತೆ
Nokia G42 5G ಬೆಲೆ ಮತ್ತ್ಯು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಇದು ಕೇವಲ ಒಂದೇ ಒಂದು ವೇರಿಯೆಂಟ್ ಅಂದ್ರೆ 6GB RAM + 128GB ಸ್ಟೋರೇಜ್ ಮಾದರಿಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದರ ಬೆಲೆ 12,599 ರೂಗಳಾಗಿದೆ. ಈ ಸ್ಮಾರ್ಟ್ಫೋನ್ ನಿಮಗೆ ಸೋ ಗ್ರೇ ಮತ್ತು ಸೋ ಪರ್ಪಲ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಅಮೆಜಾನ್ ಮೂಲಕ ಸೆಪ್ಟೆಂಬರ್ 15 ರಿಂದ ಮಾರಾಟವಾಗಲಿದೆ. ಬಳಕೆದಾರರೇ ರಿಪೇರಿ ಮಾಡಬಹುದಾದ ಮಾದರಿಯ ವಿನ್ಯಾಸದೊಂದಿಗೆ ಬಿಡುಗಡೆಯಾಗಿದೆ.
ಇದನ್ನೂ ಓದಿ: ಆಕಸ್ಮಿಕವಾಗಿ ನಿಮ್ಮ ಫೋಟೋ / ವಿಡಿಯೋ ಡಿಲೀಟ್ ಆದ್ರೆ ಚಿಂತಿಸಬೇಡಿ! ಇಲ್ಲಿದೆ ಪೂರ್ತಿ ಪರಿಹಾರ!
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile