5000mAh ಬ್ಯಾಟರಿ 50MP ಕ್ಯಾಮೆರಾದ Nokia G42 5G ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕ ಕಂಫಾರ್ಮ್!
Nokia G42 5G ಇದೇ ಸೆಪ್ಟೆಂಬರ್ 11ಕ್ಕೆ ಭಾರತದಲ್ಲಿ ಅಮೆಜಾನ್ ಮೂಲಕ ಬಿಡುಗಡೆಯಾಗಲಿದೆ
ಭಾರತದ ಅತಿ ಭರವಸೆಯ ಬ್ರಾಂಡ್ Nokia G42 5G ಅನ್ನು ಇತ್ತೀಚಿನ ಮಧ್ಯಮ ಶ್ರೇಣಿಯ ಕೊಡುಗೆಯಾಗಿ ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ
Nokia G42 5G ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿದೆ
ಭಾರತದ ಅತಿ ಭರವಸೆಯ ಬ್ರಾಂಡ್ ನೋಕಿಯಾ ಕಳೆದ ಕೆಲವು ದಿನಗಳಿಂದ ಪರೀಕ್ಷಿಸುತ್ತಿರುವ ನೋಕಿಯಾದ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕದೊಂದಿಗೆ ಕಂಪನಿಯು ರೆಂಡರ್‌ಗಳನ್ನು ಬಿಡುಗಡೆ ಮಾಡಿದೆ. ನೋಕಿಯಾದ ಮುಂಬರುವ ಫೋನ್ ಅನ್ನು Nokia G42 5G ಹೆಸರಿನೊಂದಿಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ನಿನ್ನೆಯವರೆಗೂ ಈ Nokia Upcoming 5G ಫೋನ್‌ನ ಹೆಸರನ್ನು ಘೋಷಿಸದ ನೋಕಿಯಾ ಇದೀಗ ಹೆಸರಿನೊಂದಿಗೆ ಅದರ ಕೆಲವು ವಿಶೇಷ ವಿವರಗಳನ್ನು ಸಹ ಬಹಿರಂಗಪಡಿಸಿದೆ. ಕಂಪನಿ ನೀಡಿರುವ ಟೀಸರ್ ಪ್ರಕಾರ Nokia G42 5G ಇದೇ ಸೆಪ್ಟೆಂಬರ್ 11ಕ್ಕೆ ಭಾರತದಲ್ಲಿ ಅಮೆಜಾನ್ ಮೂಲಕ ಬಿಡುಗಡೆಯಾಗಲಿದೆ.
Nokia G42 5G India launch
ಭಾರತದ ಅತಿ ಭರವಸೆಯ ಬ್ರಾಂಡ್ Nokia G42 5G ಅನ್ನು ಇತ್ತೀಚಿನ ಮಧ್ಯಮ ಶ್ರೇಣಿಯ ಕೊಡುಗೆಯಾಗಿ ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ. ಕಂಪನಿಯು ಫೋನ್‌ನ ದುರಸ್ತಿಗೆ ಗಮನಹರಿಸುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ 5 ವರ್ಷಗಳವರೆಗೆ ಬ್ಯಾಟರಿ, ಡಿಸ್‌ಪ್ಲೇ ಮತ್ತು ಚಾರ್ಜಿಂಗ್ ಪೋರ್ಟ್‌ಗಳು ಸೇರಿದಂತೆ ದುರಸ್ತಿ ಮಾರ್ಗದರ್ಶಿಗಳು ಮತ್ತು OEM ಭಾಗಗಳನ್ನು ನೀಡಲು iFixit ಜೊತೆ ಪಾಲುದಾರಿಕೆ ಹೊಂದಿದೆ. ಇದು ಕಂಪನಿಯ ಮೊದಲ ಬಳಕೆದಾರರೇ ರಿಪೇರಿ ಮಾಡಬಹುದಾದ 5G ಫೋನ್ ಆಗಿದೆ. ಹ್ಯಾಂಡ್‌ಸೆಟ್ ಸ್ನಾಪ್‌ಡ್ರಾಗನ್ 480+ 5G ಪ್ರೊಸೆಸರ್ ಹೊಂದುವ ನಿರೀಕ್ಷೆ.
Nokia G42 5G ನಿರೀಕ್ಷಿತ ಕ್ಯಾಮೆರಾ
ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ ಮಾತನಾಡುವುದಾದರೆ Nokia G42 5G ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುವ ನಿರೀಕ್ಷೆಗಳಿವೆ. ಅಲ್ಲದೆ ಇದರ 2MP ಮೆಗಾಪಿಕ್ಸೆಲ್ ಕ್ಯಾಮರಾ, ಮತ್ತು 2-ಮೆಗಾಪಿಕ್ಸೆಲ್ ಕ್ಯಾಮರಾ. ಇದು ಸೆಲ್ಫಿಗಳಿಗಾಗಿ 8-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
You guessed it. The biggest drop of the season is Nokia G42 5G. Out soon. We’ll give you a few days to know all about it before you move fast and get your hands on it.
Click here to get notified: https://t.co/5odW3C5OHB#MoveFast #StayTuned #NokiaG42_5G #Nokiaphones… pic.twitter.com/FC47OVCrUF
— Nokia Mobile India (@NokiamobileIN) September 6, 2023
Nokia G42 5G ನಿರೀಕ್ಷಿತ ವಿಶೇಷಣಗಳು
Nokia G42 5G ಆಂಡ್ರಾಯ್ಡ್ 13 ಅನ್ನು ಆಧರಿಸಿದ್ದು 128GB ಇಂಟರ್ನಲ್ ಸ್ಟೋರೇಜ್ ಅನ್ನು ಪ್ಯಾಕ್ ಮಾಡುತ್ತದೆ. ಇದು ಲ್ಯಾವೆಂಡರ್ ಮತ್ತು ಮೆಟಿಯರ್ ಗ್ರೇ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. USB ಟೈಪ್-C ಅನ್ನು ಎರಡೂ SIM ಕಾರ್ಡ್‌ಗಳಲ್ಲಿ ಸಕ್ರಿಯ 4G ಯೊಂದಿಗೆ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ. ಫಿಂಗರ್‌ಪ್ರಿಂಟ್ ಸೆನ್ಸರ್ ಜೊತೆಗೆ ಒಳಗೊಂಡಿರುತ್ತದೆ ಎಂದು ವದಂತಿಗಳಿವೆ. ಮುಖ್ಯವಾಗಿ ಇದರಲ್ಲಿ ನಿಮಗೆ Nokia G42 5G ಫೇಸ್ ಅನ್‌ಲಾಕ್ ಅನ್ನು ಸಹ ಬೆಂಬಲಿಸುವ ನಿರೀಕ್ಷೆಗಳಿವೆ. ಕೊನೆಯದಾಗಿ 5000mAh ಬ್ಯಾಟರಿಯೊಂದಿಗೆ 30W ಫಾಸ್ಟ್ ಚಾರ್ಜರ್ ಸಹ ಹೊಂದಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile