ಈ ವರ್ಷ ನೋಕಿಯಾದ ಹೆಚ್ಚು ನಿರೀಕ್ಷಿತವಾದ ಹೊಸ Nokia 9 PureView ಸ್ಮಾರ್ಟ್ಫೋನಿನ ಬಗ್ಗೆ ಹಲವಾರು ತಿಂಗಳುಗಳಿಂದ ಹೊಸ ಸೋರಿಕೆಗಳು ಮತ್ತು ಊಹಾಪೋಹಗಳ ನಂತರ ಈಗ ನಮ್ಮ ಕಣ್ಣುಗಳ ಮುಂದೆ ಬಂದು ನಿಂತಿದೆ. ನೆನ್ನೆ ಅಂದ್ರೆ ಭಾನುವಾರ HMD ಗ್ಲೋಬಲ್ MWC 2019 ಮೊಬೈಲ್ ಫೋನ್ ಕಾಂಗ್ರೆಸ್ ಅಂಗವಾಗಿ ಹೊರಭಾಗದಲ್ಲಿ ಬಾರ್ಸಿಲೋನಾದ ಪತ್ರಿಕಾಗೋಷ್ಠಿಯೊಂದರಲ್ಲಿ ವಿಶ್ವದ ಮೊಟ್ಟ ಮೊದಲ 5 ಕ್ಯಾಮೆರಾಗಳೊಂದಿಗಿನ ಸ್ಮಾರ್ಟ್ಫೋನ್ ಅನ್ನು ನೋಕಿಯಾ ಪರಿಚಯಿಸಿದೆ.
ಈ ಫೋನ್ ಗೂಗಲ್ನ ಆಂಡ್ರಾಯ್ಡ್ ಒನ್ ಪ್ರೋಗ್ರಾಂನ ಭಾಗವಾದ Nokia 9 PureView ಸ್ಮಾರ್ಟ್ಫೋನಿನ ಅತಿದೊಡ್ಡ ಹೈಲೈಟ್ ಅಂದ್ರೆ ಇದರಲ್ಲಿನ ಪೆಂಟಾ ಲೆನ್ಸ್ ಕ್ಯಾಮೆರಾ ಸೆಟಪ್. ಇದರ ಕ್ಯಾಮರಾ ಸೆಟಪ್ ಮೂರು ಮೊನೊಕ್ರೋಮ್ ಮತ್ತು ಎರಡು RGB ಲೆನ್ಸ್ಗಳನ್ನು ಹೊಂದಿದೆ. ಇದೇಲ್ಲ ಒಂದೇ f / 1.82 ಅಪೆರ್ಚರೊಂದಿಗೆ ಬರುತ್ತದೆ. ಈ ಫೋನ್ನ ಇತರ ಪ್ರಮುಖ ವಿಶೇಷಣಗಳೆಂದರೆ ಇದು 5.99 ಇಂಚಿನ 2K ಸ್ಕ್ರೀನ್ ಮತ್ತು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 SoC ಹಾಗು 6GB ಯ RAM ಒಳಗೊಂಡಿದೆ. ಅಲ್ಲದೆ ಈ ಫೋನ್ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತ ಸುಧಾರಿತ ಪ್ರೋ ಕ್ಯಾಮೆರಾ ಇಂಟರ್ಫೇಸ್ ಅನ್ನು ಸಹ ಒಳಗೊಂಡಿದೆ.
HMD ಗ್ಲೋಬಲ್ ಪ್ರಕಾರ Nokia 9 PureView ಸ್ಮಾರ್ಟ್ಫೋನ್ ಈಗಾಗಲೇ ಅಲ್ಲಿಯ ಮಾಹಿತಿಯ ಪ್ರಕಾರ $699 ಡಾಲರ್ (ಭಾರತದಲ್ಲಿ 49,700 ರೂಗಳು) ಬೆಲೆಯುಳ್ಳದ್ದಾಗಿರುತ್ತದೆ. ಮತ್ತು ವಿಶ್ವದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ತಕ್ಷಣವೇ ಪ್ರೀ-ಆರ್ಡರ್ಗಳಿಗೆ ಲಭ್ಯವಾಗುತ್ತದೆ. ಇದು ಮಾರ್ಚ್ 2019 ರಲ್ಲಿ ಮಾರಾಟಕ್ಕೆ ತೆರೆದಿರುತ್ತದೆ. ಆದರೆ ಭಾರತದಲ್ಲಿನ ನಿರ್ದಿಷ್ಟ ಬೆಲೆ ಮತ್ತು ಲಭ್ಯತೆ ವಿವರಗಳು ಇದೀಗ ನಿಗೂಢವಾಗಿ ಉಳಿದಿವೆ. ಅಲ್ಲದೆ ಕಂಪನಿ ಇದನ್ನು ಒಂದೇ ಒಂದು ಬಣ್ಣದ ವೇರಿಯಂಟ್ ಮಿಡ್ ನೈಟ್ ಬ್ಲೂ ಬಣ್ಣದಲ್ಲಿ ಮಾತ್ರ ಬರಲಿದೆ.
ಈ ಸ್ಮಾರ್ಟ್ಫೋನ್ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. 6GB ಯ RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಮತ್ತು 3320mAh ಬ್ಯಾಟರಿ ವಯರ್ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡುತ್ತದೆ. ಹೆಚ್ಚುವರಿಯಾಗಿ ಕಂಪನಿಯು ವೈ-ಫೈ 5, ಬ್ಲೂಟೂತ್ 5.0, ಮತ್ತು NFCಗಳಂತಹ ಸಂಪರ್ಕ ಆಯ್ಕೆಗಳನ್ನು ಒಳಗೊಂಡಿದೆ. ಈ Nokia 9 PureView ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ಪ್ರಮಾಣೀಕರಿಸಿದೆ. ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಪ್ಯಾಕ್ ಮಾಡುತ್ತದೆ. ಆದರೆ ಇದರಲ್ಲಿ Xiaomi Mi A2 ಯಂತೆ 3.5mm ಆಡಿಯೋ ಜ್ಯಾಕ್ ನೀಡಿಲ್ಲ.