ಇಂದು HMD ಗ್ಲೋಬಲ್ ನೋಕಿಯಾ ಕಾರ್ಯಕ್ರಮವನ್ನು ಆಯೋಜಿಸಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಹೊಸ Nokia 6.2 ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸುವುದಾಗಿ ನಿರೀಕ್ಷಿಸಲಾಗಿದೆ. ನೋಕಿಯಾ ೬.೨ ಫೋನ್ ಮೂಲಭೂತವಾಗಿ Nokia X71 ಎಂದು ಹೆಸರಿನೊಂದಿಗೆ ಬರುವ ವದಂತಿಗಳಿವೆ. ಇದು ಮೊದಲು ಥೈವಾನೀ ಮಾರುಕಟ್ಟೆಯಲ್ಲಿ ಪ್ರಾರಂಭವಾಯಿತು. ಆದಾಗ್ಯೂ ಇದರ ಮೂಲಕ ಕೆಲವು ಟೀಸರ್ಗಳು ಹೊರಬಂದಾಗಿನಿಂದ ನೋಕಿಯಾ 6.2 ಫೋನ್ ನೋಕಿಯಾದ ಮುಂದಿನ X71 ಸರಣಿ ಆಗಿರಬಹುದೆಂದು ಇತರ ವದಂತಿಗಳು ಸೂಚಿಸಿವೆ. ಈ ಮುಂಬರಲಿರುವ ನೋಕಿಯಾ ಬ್ರಾಂಡ್ ಸ್ಮಾರ್ಟ್ಫೋನ್ ವಾಟರ್ಡ್ರಾಪ್ ನಾಚ್ ಡಿಸ್ಪ್ಲೇಯೊಂದಿಗೆ ಬರುವುದು ಖಚಿತವಾಗಿದೆ.
ಅಲ್ಲದೆ ಈ ಫೋನಲ್ಲಿ ಫೇಸ್ ಅನ್ಲಾಕ್ ಫೀಚರ್ ಜೊತೆಗೆ ಬರುವಂತೆ ಹೇಳಲಾಗುತ್ತಿದೆ. HMD ಯ ಈ ಹೊಸ ಸ್ಮಾರ್ಟ್ಫೋನ್ ಮೀಸಲಾದ ಗೂಗಲ್ ಅಸಿಸ್ಟೆಂಟ್ ಬಟನ್ ಜೊತೆಗೆ ಬರಲಿದೆ. ನೋಕಿಯಾ 6.2 ಭಾರತದಲ್ಲಿ ಬಿಡುಗಡೆಯ ಆರಂಭದಲ್ಲಿ ನೋಕಿಯಾ X71 ಎಂದು ಮರುನಾಮಕರಣಗೊಳ್ಳಬವುದು. ಈ ರೀತಿ ಕಂಪನಿ ತೈವಾನ್ನಲ್ಲಿ ಪ್ರಾರಂಭಿಸಲಾಯಿತು. ಆದಾಗ್ಯೂ ಈ ಫೋನಿನ ಡಿಸ್ಪ್ಲೇಯಲ್ಲಿ ಈಗ ಹೊಸ ಟ್ರಂಡಿಂಗ್ ವಿಭಾಗದಲ್ಲಿರುವ ಪಂಚ್ ಹೋಲ್ ಕ್ಯಾಮೆರಾ ಬದಲಾಗಿ ಈ ನೋಕಿಯಾ ಸ್ಮಾರ್ಟ್ಫೋನ್ ವಾಟರ್ಡ್ರಾಪ್ ನಾಚ್ನಲ್ಲಿ ನೀಡುವವುದಾಗಿ ಲೇವಡಿ ಮಾಡಲಾಗಿದ್ದು 3.5mm ಆಡಿಯೋ ಜಾಕ್ ಒಳಗೊಂಡಿರುತ್ತದೆ.
https://twitter.com/NokiaMobile/status/1136148414624804864?ref_src=twsrc%5Etfw
ಈ ನೋಕಿಯಾ 6.2 ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತನ್ನದೆಯಾದ ಸೆಂಟರ್ ಸ್ಟೇಜ್ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇವೆ. ಯಾಕೆಂದರೆ ಇತ್ತೀಚೆಗೆ ಬಿಡುಗಡೆಯಾದ ನೋಕಿಯಾ 4.2 ಮತ್ತು ನೋಕಿಯಾ 3.2 ಸ್ಮಾರ್ಟ್ಫೋನ್ಗಳಂತೆಯೇ ಇದರೊಳಗಿರುವ U ಆಕಾರದ ನಾಚ್ ಡಿಸ್ಪ್ಲೇಯಲ್ಲಿ ಬರುವ ತುದಿಯನ್ನು ಮಾಡಲಾಗಿದೆ. ಇದರರ್ಥ ನೋಕಿಯಾ 6.1 ಗೆ ಹೋಲಿಸಿದರೆ ಡಿಸ್ಪ್ಲೇ ನಿರ್ಣಾಯಕ ಅಪ್ಗ್ರೇಡ್ ಅನ್ನು ನೋಡುತ್ತದೆ. ಇದರ ಅಂಚಿನ ಕೋನಗಳು 2.5D ಕರ್ವ್ ಆಕಾರದೊಂದಿಗೆ ಆಗಮಿಸಬವುದು.
ವಾಟರ್ಡ್ರಾಪ್ ಒಳಗೆ ಫೇಸ್ ಅನ್ಲಾಕ್ ವೈಶಿಷ್ಟ್ಯದೊಂದಿಗೆ ನೇರವಾಗಿ ಔಟ್ ಆಫ್ ದಿ ಬಾಕ್ಸ್ ಹೊರಬರುತ್ತದೆ. ಈ ಹೊಸ ವೈಶಿಷ್ಟ್ಯಗಳು ಅಷ್ಟಾಗಿ ದೊಡ್ಡದಾದಂತೆ ತೋರುತ್ತಿಲ್ಲವಾದರೂ ನೋಕಿಯಾ 6.1 ಫೇಸ್ ಅನ್ಲಾಕ್ ವೈಶಿಷ್ಟ್ಯ ಒಂದು ಹೆಚ್ಚು ಸೆಕ್ಯೂರ್ ಮತ್ತು ಆಕ್ಯುರೆಟ್ ಆಗಿರುವುದು ನಾವು ನೀವೆಲ್ಲ ತಿಳಿದಿದ್ದೇವೆ. ಈ ಸ್ಮಾರ್ಟ್ಫೋನ್ OTA ನವೀಕರಣದ ನಂತರ ನೋಕಿಯಾ 6.1 ಫೇಸ್ ಅನ್ಲಾಕ್ ಅನ್ನು ಪಡೆಯಿತು. ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಸುದ್ದಿಗಳಿಗಾಗಿ ಡಿಜಿಟ್ ಕನ್ನಡ Instagram ಮತ್ತು Telegram ಅಪ್ಲಿಕೇಷನ್ಗಳಲ್ಲೂ ಲಭ್ಯ.