ಭಾರತದಲ್ಲಿ ನೋಕಿಯಾ ತನ್ನ ಲೇಟೆಸ್ಟ್ 4G ಫೀಚರ್ ಫೋನ್ ಅನ್ನು ಕೈಗೆಟಕುವ ಬೆಲೆಗೆ ಸ್ಮಾರ್ಟ್‌ಫೋನ್‌ಗಳ ಫೀಚರ್ ಹೊಂದಿರುವ ಹೊಸ Nokia 3210 4G ಈಗ ಅಧಿಕೃತವಾಗಿ ಬಿಡುಗಡೆಯಾಗಿದೆ. ಇದರ ವಿಶೇವೆಂದರೆ ಈ 4G ಫೀಚರ್ ಫೋನ್‌ನಿಂದ ನೀವು WhatsApp, UPI ಆನ್‌ಲೈನ್ ಪಾವತಿ ಮತ್ತು YouTube ಅಪ್ಲಿಕೇಶನ್‌ನ ಸ್ಟ್ರೀಮಿಂಗ್ ಫೀಚರ್ಗಳೊಂದಿಗೆ ಫೋನ್ ರೆಟ್ರೋ ಲುಕ್‌ನಲ್ಲಿ ಬರಲಿದ್ದು ಮತ್ತೆ ಕಾಲಿಟ್ಟಿದೆ. ನೀವು ಕೈಗೆಟಕುವ ಬೆಲೆಗೆ ಅಂದ್ರೆ ಕೇವಲ ₹3999 ರೂಗಳಿಗೆ ಸ್ಮಾರ್ಟ್‌ಫೋನ್ ಒಳಗೊಂಡಿರುವ ಎಲ್ಲ ಫೀಚರ್ಗಳನ್ನು ಈ Nokia 3210 4G ಫೀಚರ್ ಫೋನ್ ಮೂಲಕ ಪಡೆಯಬಹುದು.
Also Read: Reliance Jio ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾದೊಂದಿಗೆ OTT ನೀಡುವ ಹೊಸ AirFiber ಪ್ಲಾನ್ ಬಿಡುಗಡೆ!
ಈ ಫೀಚರ್ ಫೋನ್ ಭಾರತದಲ್ಲಿ ಬರೋಬ್ಬರಿ 25 ವರ್ಷಗಳ ನಂತರ ಮತ್ತೆ ಹೊಸ ಬಟ್ಟೆಯನ್ನು ಧರಿಸಿಕೊಂಡು ಹೊಸ ಫೀಚರ್ಗಳೊಂದಿಗೆ ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಮತ್ತೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಮೊದಲು ಈ Nokia 3210 ಫೋನ್ ಅನ್ನು ಮಾರ್ಚ್ 1999 ಇಸವಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು ಆ ಸಮಯದಲ್ಲಿ ಈ ಫೋನ್ ಜನರ ಮೊದಲ ಆಯ್ಕೆಯಾಗಿದೆ. ಹೀಗಿರುವಾಗ ನೋಕಿಯಾದ ಈಗ ಮತ್ತೆ ತಮ್ಮ ಕಾಲದ ಬಳಕೆದಾರರನ್ನು ತನ್ನತ್ತ ಸೆಳೆಯಲು ಕಂಪನಿ ಪ್ರಯತ್ನಿಸಿದೆ. ಅಲ್ಲದೆ ಕಂಪನಿ ಇಂದಿನ ದಿನಗಳಲ್ಲಿ ಅಗತ್ಯಕ್ಕಿಂತ ಅಧಿಕವಾಗಿ ಸ್ಮಾರ್ಟ್ಫೋನ್ ಬಳಸುವ ಚಟವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಬಹುದು.
ಭಾರತದಲ್ಲಿ ಈಗಷ್ಟೇ ಬಿಡುಗಡೆಯಾಗಿರುವ Nokia 3210 4G ಫೀಚರ್ ಫೋನ್ ಒಂದೇ ರೂಪಾಂತರದಲ್ಲಿ ಲೇಟೆಸ್ಟ್ ಫೀಚರ್ಗಳೊಂದಿಗೆ ಬಿಡುಗಡೆಯಾಗಿದ್ದು 64MB RAM ಮತ್ತು 128MB ಸ್ಟೋರೇಜ್ನೊಂದಿಗೆ ಬರುತ್ತದೆ. ಅಲ್ಲದೆ ನೀವು ಮೈಕ್ರೋ SD ಕಾರ್ಡ್ ಬಳಸಿಕೊಂಡು ಸುಮಾರು 32GB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದು. ಇದರೊಂದಿಗೆ ಇದರ ಬೆಳೆಯನ್ನು ಕೇವಲ ₹3999 ರೂಗಳಿಗೆ ನಿಗದಿಪಡಿಸಿದೆ. ಬಳಕೆದಾರರು ಈ Nokia 3210 4G ಫೀಚರ್ ಫೋನ್ ಅನ್ನು ಮ್ಯಾಟ್ ಗೋಲ್ಡ್, ಮ್ಯಾಟ್ ಬ್ಲೂ ಮತ್ತು ಮ್ಯಾಟ್ ಬ್ಲಾಕ್ ಬಣ್ಣಗಳಲ್ಲಿ Amazon India ಮತ್ತು HMD ಇ-ಸ್ಟೋರ್ ವೆಬ್‌ಸೈಟ್‌ಗಳ ಮೂಲಕ ಖರೀದಿಸಬಹುದು.
ಈಗ ಹೊಸದಾಗಿ ಬಿಡುಗಡೆಯಾಗಿರುವ Nokia 3210 4G ಫೋನ್ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಹೊಂದಿದೆ. ಫೋನ್ 64MB RAM ಮತ್ತು 128MB ಸ್ಟೋರೇಜ್ನೊಂದಿಗೆ ಬರುತ್ತದೆ. ಈಗಾಗಲೇ ಮೇಲೆ ತಿಳಿಸಿರುವಂತೆ 32GB ಮೈಕ್ರೋ SD ಕಾರ್ಡ್ ಅನ್ನು ಬೆಂಬಲಿಸಲಾಗುತ್ತದೆ. ಈ 4G ಫೀಚರ್ ಫೋನ್ S30+ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ WhatsApp, UPI ಆನ್‌ಲೈನ್ ಪಾವತಿ ಮತ್ತು YouTube ಅಪ್ಲಿಕೇಶನ್‌ನ ಸ್ಟ್ರೀಮಿಂಗ್ ಫೀಚರ್ಗಳೊಂದಿಗೆ Nokia 3210 4G ಫೋನ್ ರೆಟ್ರೋ ಲುಕ್‌ನಲ್ಲಿ ಬರಲಿದ್ದು ನ್ಯೂಸ್ ಮತ್ತು ಜನಪ್ರಿಯ ಕ್ಲಾಸಿಕ್ ಸ್ನೇಕ್ ಆಟಗಳಂತಹ ಅಪ್ಲಿಕೇಶನ್‌ಗಳನ್ನು ಫೋನ್‌ನಲ್ಲಿ ಮೊದಲೆ ತುಂಬಲಾಗಿದೆ.
ಫೋನ್ 2MP ಹಿಂಬದಿಯ ಕ್ಯಾಮೆರಾವನ್ನು LED ಫ್ಲ್ಯಾಷ್ ಲೈಟ್ ಸಹ ಬೆಂಬಲಿತವಾಗಿದೆ. Nokia 3210 4G ಫೀಚರ್ ಫೋನ್ 1450mA ಬ್ಯಾಟರಿಯನ್ನು ಹೊಂದಿದೆ. ಇದರ ಸಂಪ್ರಾದಾಯವನ್ನು ಅನುಸರಿಸಿ ನಿಮ್ಮ ಒಂದೇ ಚಾರ್ಜ್‌ನಲ್ಲಿ ಸುಮಾರು 8 ರಿಂದ 9 ಗಂಟೆಗಳ ಕಾಲ ಫೋನ್ ಅನ್ನು ಬಳಸಲು ಅನುವು ಮಾಡಿಕೊಡುತ್ತದೆ. ಈ Nokia 3210 4G ಫೋನ್ ಲೇಟೆಸ್ಟ್ USB ಟೈಪ್ ಸಿ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಬರುತ್ತದೆ. ಅಲ್ಲದೆ 3.5mm ಆಡಿಯೋ ಜ್ಯಾಕ್, MP3 ಪ್ಲೇಯರ್ ಮತ್ತು FM ರೇಡಿಯೊವನ್ನು ಫೋನ್‌ನಲ್ಲಿ ಬೆಂಬಲಿಸಲಾಗುತ್ತದೆ. ಅಲ್ಲದೆ ಫೋನ್ ಡ್ಯುಯಲ್ ಸಿಮ್, 4G VoLTE, ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತದೆ. ಫೋನ್‌ನ ತೂಕ ಕೇವಲ 62 ಗ್ರಾಂಗಳಾಗಿದೆ.