ಹೊಸ ರಿಯಾಯಿತಿ ಬೆಲೆ ಅಧಿಕೃತ ನೋಕಿಯಾ ಅಂಗಡಿಯನ್ನು ಪ್ರತಿಬಿಂಬಿಸಬೇಕಾಗಿದೆ. ಆದಾಗ್ಯೂ ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್ಕಾರ್ಟ್ ಈಗಾಗಲೇ ನೋಕಿಯಾ 3.1 ಪ್ಲಸ್ (Nokia 3.1 Plus) ಅನ್ನು ಹೊಸ ಬೆಲೆಯಲ್ಲಿ ಮಾರಾಟ ಮಾಡಲು ಪ್ರಾರಂಭಿಸಿವೆ. ಈ ಫೋನ್ ಆಂಡ್ರಾಯ್ಡ್ ಒನ್ ಫೋನಾಗಿದ್ದು 10,000 ರೂಪಾಯಿಗಳ ಅಡಿಯಲ್ಲಿ ಖರೀದಿಸಲು ಬಯಸುವ ಗ್ರಾಹಕರು ಉತ್ತಮ ಆಯ್ಕೆಯಾಗಿ ಪರಿಗಣಿಸಬಹುದು.
ಈ ಸಫೋನಿನ ಹೊಸ ಬೆಲೆ ಕಡಿತದೊಂದಿಗೆ Nokia 3.1 Plus ಈಗ ಆಂಡ್ರಾಯ್ಡ್ ಒನ್ ಪ್ರೋಗ್ರಾಂನ ಭಾಗವಾಗಿರುವ ಕಡಿಮೆ ವಿಭಾಗದ ನೋಕಿಯಾ ಸ್ಮಾರ್ಟ್ಫೋನ್ಗಳಲ್ಲಿ ಒಂದಾಗಿದೆ. ಇದು 6.0 ಇಂಚಿನ HD+ ಡಿಸ್ಪ್ಲೇನೊಂದಿಗೆ 1440 x 720 ಪಿಕ್ಸೆಲ್ ರೆಸೊಲ್ಯೂಷನ್ ಮತ್ತು 18: 9 ರ ಆಕಾರ ಅನುಪಾತವನ್ನು ಹೊಂದಿದೆ.
ಈ ಸ್ಮಾರ್ಟ್ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ P22 ಪ್ರೊಸೆಸರ್ನಿಂದ 3GB ಯ RAM ಮತ್ತು 32GB ಯ ಇಂಟರ್ನಲ್ ಸ್ಟೋರೇಜ್ ಮೆಮೊರಿಯೊಂದಿಗೆ ಚಾಲಿತವಾಗಿದೆ. ಇದರಲ್ಲಿ ನೀವು ಮೆಮೊರಿ ಮೈಕ್ರೋ ಎಸ್ಡಿ ಕಾರ್ಡ್ ಸ್ಲಾಟ್ನ ಮೂಲಕ 400GB ವರೆಗೆ ವಿಸ್ತರಿಸಬಹುದು.
ಇದು 13MP ಯ ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರನ್ನು f/ 2.0 ಅಪರ್ಚರ್ ಮತ್ತು 1.12-ಮೈಕ್ರಾನ್ ಪಿಕ್ಸೆಲ್ ಗಾತ್ರದೊಂದಿಗೆ ಡ್ಯುಯಲ್-ಕ್ಯಾಮೆರಾ ಸೆಟಪ್ ಹೊಂದಿದ್ದು, ಸೆಕೆಂಡರಿ ಸೆನ್ಸರ್ 5MP ಮೆಗಾಪಿಕ್ಸೆಲ್ ಲೆನ್ಸ್ನ f.24 ಅಪರ್ಚರ್ ಮತ್ತು 1.12-ಮೈಕ್ರಾನ್ ಪಿಕ್ಸೆಲ್ ಸೈಜನ್ನು ಹೊಂದಿದೆ. ಈ ಫೋನಿನ ಮುಂದೆ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ f/ 2.2 ಅಪರ್ಚರ್ ಮತ್ತು 1.12-ಮೈಕ್ರಾನ್ ಪಿಕ್ಸೆಲ್ ಸೈಜಲ್ಲಿ 8MP ಮೆಗಾಪಿಕ್ಸೆಲ್ ಶೂಟರನ್ನು ಹೊಂದಿದೆ.
ಈ ಫೋನ್ ಆಂಡ್ರಾಯ್ಡ್ 8.1 ಓರಿಯೊದಲ್ಲಿ ಫೋನ್ ರನ್ ಆಗುತ್ತದೆ ಮತ್ತು ಆಂಡ್ರಾಯ್ಡ್ ಒನ್ ಪ್ರೋಗ್ರಾಂನ ಒಂದು ಭಾಗವಾಗಿದೆ. ಇದು 3500mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಸಾಧನವು 4G ವೋಲ್ಟೆ, ಬ್ಲೂಟೂತ್ 4.1, ವೈಫೈ, ಜಿಪಿಎಸ್, ಗ್ಲೋನಾಸ್, ಮೈಕ್ರೋ ಯುಎಸ್ಬಿ, ಡ್ಯೂಯಲ್ ಸಿಮ್ ಮತ್ತು 3.5mm ಆಡಿಯೋ ಜಾಕ್ ನಂತಹ ಕನೆಕ್ಟಿವಿಟಿಯ ಆಯ್ಕೆಗಳನ್ನು ಹೊಂದಿದೆ.