Nokia 105 Classic: ನೋಕಿಯಾದಿಂದ UPI ಫೀಚರ್‌ನ ಭರ್ಜರಿ ಫೋನ್ 999 ರೂಗಳಿಗೆ ಬಿಡುಗಡೆ!

Nokia 105 Classic: ನೋಕಿಯಾದಿಂದ UPI ಫೀಚರ್‌ನ ಭರ್ಜರಿ ಫೋನ್ 999 ರೂಗಳಿಗೆ ಬಿಡುಗಡೆ!
HIGHLIGHTS

HMD ಗ್ಲೋಬಲ್ ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಫೀಚರ್ ಫೋನ್ Nokia 105 Classic

Nokia 105 Classic ಫೋನ್ ಕೇವಲ 1000 ರೂಗಳೊಳಗೆ ಅತ್ಯಾಕರ್ಷಕ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ.

ಇಂದು HMD ಗ್ಲೋಬಲ್ ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಫೀಚರ್ ಫೋನ್ Nokia 105 Classic ಅನ್ನು ಕೇವಲ 1000 ರೂಗಳೊಳಗೆ ಅತ್ಯಾಕರ್ಷಕ ಫೀಚರ್ಗಳೊಂದಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದರ ಬೆಲೆಯನ್ನು ಕಂಪನಿ ಕೇವಲ ರೂ. 999 ರೂಗಳಿಂದ ಶುರು ಮಾಡಿದೆ. ಫೋನ್ ಜನಪ್ರಿಯ ಮತ್ತು ಹೆಚ್ಚು ಬಳಕೆಯ UPI ಅಪ್ಲಿಕೇಶನ್‌ ಬೆಂಬಲಿಸುವ ಫೀಚರ್ನೊಂದಿಗೆ ಬರುತ್ತದೆ. ನೋಕಿಯಾ ಫೋನ್‌ಗಳ ಬಗ್ಗೆ ನಿಮಗೆ ತಿಳಿದಿರುವಂತೆ ಇವು ವಿಶ್ವಾಸಾರ್ಹತೆಯೊಂದಿಗೆ ಹೆಚ್ಚು ಅನುಕೂಲತೆಯ ಸಂಯೋಜನೆಯನ್ನು ನೀಡುತ್ತವೆ.

ಬಳಕೆದಾರರು ಸ್ಮಾರ್ಟ್‌ಫೋನ್ ಇಲ್ಲದೆಯೂ ಸಹ ಸುರಕ್ಷಿತವಾಗಿ ಮತ್ತು ಮನಬಂದಂತೆ UPI ಪೇಮೆಂಟ್ ವಹಿವಾಟುಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ನೋಕಿಯಾ ೧೦೫ ಕ್ಲಾಸಿಕ್ (Nokia 105 Classic) ಒಂದು ವರ್ಷದ ಪೂರ್ತಿ ಬದಲಿ (Replacement) ಸೇವೆಯೊಂದಿಗೆ ಬರುತ್ತದೆ. ಅಲ್ಲದೆ ವೈರ್‌ಲೆಸ್ ರೇಡಿಯೋ, ನಂಬಲಾಗದ ಬ್ಯಾಟರಿ ಬಾಳಿಕೆ, ಸರಳತೆ ಮತ್ತು ಪ್ರವೇಶಿಸಬಹುದಾದ ಬೆಲೆ ಒಳಗೊಂಡಿರುವ ನೋಕಿಯಾ ಫೋನ್‌ನಿಂದ ನಿರೀಕ್ಷಿತ ಭರವಸೆಯನ್ನು ಫೋನ್ ನೀಡುತ್ತದೆ.

Nokia 105 Classic

ಇದನ್ನೂ ಓದಿ: Motorola Flexible Phone: ಶೀಘ್ರದಲ್ಲೇ ಎಂಟ್ರಿ ನೀಡಲಿರುವ ಮೋಟೊರೋಲದ ಫೋಲ್ಡಬಲ್ ಕಾನ್ಸೆಪ್ಟ್ ಫೋನ್‌!

Nokia 105 Classic ಬೆಲೆ ಮತ್ತು ಲಭ್ಯತೆ

ನೋಕಿಯಾ 105 ಕ್ಲಾಸಿಕ್ ರೂ 999 ರ ಆರಂಭಿಕ ಬೆಲೆಯೊಂದಿಗೆ ಬರುತ್ತದೆ. ಮತ್ತು ಇದನ್ನು ಚಾರ್ಕೋಲ್ ಮತ್ತು ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. 2G ಫೀಚರ್ ಫೋನ್ ಭಾರತದಲ್ಲಿ ಇಂದಿನಿಂದ ಅಂದ್ರೆ 26ನೇ ಅಕ್ಟೋಬರ್ 2023 ಲಭ್ಯವಿದೆ. ಮತ್ತು ಇದು ನಾಲ್ಕು ರೂಪಾಂತರಗಳಲ್ಲಿ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ ಕ್ರಮವಾಗಿ ಚಾರ್ಜರ್ ಜೊತೆಗೆ ಮತ್ತು ರಹಿತವಾಗಿ ಬರುತ್ತದೆ. ಕಂಪನಿಯು ಫೋನ್‌ನೊಂದಿಗೆ ಒಂದು ವರ್ಷದ ಖಚಿತವಾದ ಬದಲಿ ಖಾತರಿಯನ್ನು ಸಹ ನೀಡುತ್ತದೆ.

ನೋಕಿಯಾ 105 ಕ್ಲಾಸಿಕ್ ಫೀಚರ್‌ಗಳು

ನೋಕಿಯಾ 105 ಕ್ಲಾಸಿಕ್ ಫೋನ್ ವಿನ್ಯಾಸವನ್ನು ಹೊಂದಿದೆ ಮತ್ತು 800mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. 2G ಫೀಚರ್ ಫೋನ್ ಫೀಚರ್ಗಳೊಂದಿಗೆ ಲೋಡ್ ಆಗುತ್ತದೆ. ಇದು ವೈರ್‌ಲೆಸ್ ಎಫ್‌ಎಂ ರೇಡಿಯೊವನ್ನು ನೀಡುತ್ತದೆ. ಹೆಡ್‌ಸೆಟ್ ಅಗತ್ಯವಿಲ್ಲದೇ ಬಳಕೆದಾರರು ತಮ್ಮ ನೆಚ್ಚಿನ ಸ್ಟೇಷನ್‌ಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ನೋಕಿಯಾ 105 ಕ್ಲಾಸಿಕ್ ಫೀಚರ್ ಫೋನ್ ಒಟ್ಟು ಎರಡು ವಿವಿಧ ಆಯ್ಕೆಗಳಲ್ಲಿ ಬರುತ್ತದೆ.

ಈ ನೋಕಿಯಾ ಫೀಚರ್ ಫೋನ್ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್. ಫೋನ್ ಅನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ಅದು ಬಾಳಿಕೆ ಬರುವಂತೆ ಮಾಡುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಅಲ್ಲದೆ Nokia ದ ಫೀಚರ್ ಫೋನ್ ಅಂತರ್ಗತ UPI ಅಪ್ಲಿಕೇಶನ್‌ನೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ ಸುರಕ್ಷಿತ ಮತ್ತು ಸುಗಮವಾದ UPI ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

Nokia 105 Classic
Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo