ಹಲವಾರು ಜನರ ನಿರೀಕ್ಷೆಯಂತೆ ಸ್ಯಾಮ್ಸಂಗ್ ಇದೀಗ ತನ್ನ Samsung Galaxy A30 ಸ್ಮಾರ್ಟ್ಫೋನ್ ಕೆಂಪು ಬಣ್ಣದ ರೂಪಾಂತರವನ್ನು ಯಾವುದೇ ಹೆಚ್ಚುವರಿಯ ಬೆಲೆಯಿಲ್ಲದೆ ಅದೇ ಬೆಲೆಗೆ ಬಿಡುಗಡೆಗೊಳಿಸಿದೆ. ಸ್ಯಾಮ್ಸಂಗ್ ಮೊದಲು ಭಾರತದಲ್ಲಿ ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ Samsung Galaxy A30 ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಿತು. ಅಂದ್ರೆ ಕಂಪನಿಯ ಘೋಷಣೆಯಾದ ನಂತರವೇ ಬ್ಲಾಕ್ ಮತ್ತು ಬ್ಲೂ ರೂಪಾಂತರಗಳನ್ನು ಮಾತ್ರ ಲಭ್ಯಗೊಳಿಸಿತು. ಆದರೆ ಇದೀಗ ಆ ಪಟ್ಟಿಗೆ ಕೆಂಪು ಬಣ್ಣದ ವೇರಿಯಂಟ್ ರೂಪಾಂತರವನ್ನು ಸಹ ಅಧಿಕೃತವಾಗಿ ಸೇರಿಸಲಾಗಿದೆ.
ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮತ್ತು ರಿಲಯನ್ಸ್ ಡಿಜಿಟಲ್ ವೆಬ್ಸೈಟ್ಗಳಲ್ಲಿ ಹೊಸ ಬಣ್ಣ ರೂಪಾಂತರವು ಈಗ 16,990 ರೂ. ಬಣ್ಣ ಹೊರತುಪಡಿಸಿ Samsung Galaxy A30 ರೂಪಾಂತರದ ಸ್ಪೆಕ್ಸ್ಗಳು ಅಸ್ತಿತ್ವದಲ್ಲಿರುವ ಬ್ಲೂ ಮತ್ತು ಬ್ಲ್ಯಾಕ್ ಬಣ್ಣ ರೂಪಾಂತರಗಳಿಗೆ ಹೋಲುವಂತಿರುತ್ತವೆ. Galaxy A ಸರಣಿ ಸ್ಮಾರ್ಟ್ಫೋನ್ಗಳನ್ನು ಆನ್ಲೈನ್ ಮತ್ತು ಆಫ್ಲೈನ್ ಚಾನೆಲ್ಗಳ ಮೂಲಕ ಮಾರಲಾಗುತ್ತದೆ. ಆದರೆ Samsung Galaxy A30 ಫೋನಿನ ಈ ಕೆಂಪು ರೂಪಾಂತರವು ಆಫ್ಲೈನ್ನಲ್ಲಿ ಲಭ್ಯವಿಲ್ಲ.
ನೀವು ಖರೀದಿಸಲು ಬಯಸಿದರೆ ಇಲ್ಲಿ Samsung Galaxy A30 ಕ್ಲಿಕ್ ಮಾಡಿ ಖರೀದಿಸಿ. Galaxy A30 ಫೋನಲ್ಲಿ 6.4 ಇಂಚಿನ ಪೂರ್ಣ ಎಚ್ಡಿ + ಇನ್ಫಿನಿಟಿ ಯು ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ ಮತ್ತು ಇದು 1.8GHz ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದು 16MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 5MP ಅಲ್ಟ್ರಾ ವೈಡ್ ಸೆನ್ಸರ್ ಅನ್ನು ಒಳಗೊಂಡಿರುವ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಫೋನ್ 16MP ಸೆನ್ಸಾರ್ ಅನ್ನು f / 2.0 ಅಪೆರ್ಚರೊಂದಿಗೆ ಬರುತ್ತದೆ.
ಈ ಫೋನ್ 4GB ಯ RAM ಮತ್ತು 64GB ಸ್ಟೋರೇಜ್ ಜೊತೆಗೆ 512GB ವರೆಗೆ ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದು. ಇದರಲ್ಲಿ 4000mAh ಬ್ಯಾಟರಿಯನ್ನು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಹೊಂದಿದೆ. ಮತ್ತು ಇದು ಆಂಡ್ರಾಯ್ಡ್ 9 ಪೈನಲ್ಲಿ ಚಲಿಸುತ್ತದೆ. ಇದು 158.5 X 74.7 x 7.7 ಮಿಮೀ ಅಳೆಯುತ್ತದೆ. ಡ್ಯುಯಲ್ 4G ವೋಲ್ಟೆ, ವೈ-ಫೈ 802.11 AC (2.4GHz + 5GHz), ಬ್ಲೂಟೂತ್ 5, ಜಿಪಿಎಸ್ + ಗ್ಲೋನಾಸ್, NFC, USB ಟೈಪ್ C ಜೊತೆಗೆ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.