ಪೊಕೊ ಕಂಪನಿ POCO C65 ಸ್ಮಾರ್ಟ್ಫೋನ್ ಅನ್ನು 50MP ಪ್ರೈಮರಿ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿಯಂತಹ ಅನೇಕ ಇಂಟೆಸ್ಟಿಂಗ್ ಫೀಚರ್ಗಳೊಂದಿಗೆ ಜಾಗತಿಕವಾಗಿ ಬಿಡುಗಡೆಗೊಳಿಸಿದೆ. ಕಂಪನಿಯ ಈ ಫೋನ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ POCO C55 ಫೋನಿನ ಉತ್ತರಾಧಿಕಾರಿಯಾಗಿದ್ದು ಈ ಫೋನ್ ಮುಂಬರುವ Redmi 13C ಸ್ಮಾರ್ಟ್ಫೋನ್ ಮರುಬ್ರಾಂಡೆಡ್ ಆವೃತ್ತಿಯಾಗಲಿದೆ. ಈ ಸ್ಮಾರ್ಟ್ಫೋನ್ 4G ಆಗಿದೆ ಎನ್ನುವುದನ್ನು ಗಮನಿಸಬೇಕಿದೆ
Also Read: Aadhaar Update: ಆಧಾರ್‌ನಲ್ಲಿ ಎಷ್ಟು ಬಾರಿ ಹೆಸರು, ಹುಟ್ಟಿದ ದಿನಾಂಕ ಮತ್ತು ನಂಬರ್ ಚೇಂಜ್ ಮಾಡ್ಬಹುದು?
ಈ ಸ್ಮಾರ್ಟ್ಫೋನ್ ಬಿಡುಗಡೆಯೊಂದಿಗೆ ಅತ್ಯುತ್ತಮ ಲಾಂಚ್ ಆಫರ್‌ಗಳನ್ನು ಸಹ ಹೊಂದಿದ್ದು 6GB RAM ಮತ್ತು 128GB ಸ್ಟೋರೇಜ್ ಮಾದರಿಯ ಬೆಲೆ $109 ಅಂದ್ರೆ ಭಾರತದಲ್ಲಿ ಸುಮಾರು 9,065 ರೂಗಳಾಗಿದ್ದು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮಾದರಿಯ ಬೆಲೆ $129 ಅಂದರೆ ಸುಮಾರು 10,729 ರೂಗಳಾಗಿದೆ. ಈ ಸ್ಮಾರ್ಟ್ಫೋನ್ ಅನ್ನು ನೀವು ನೇರಳೆ, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಾಗಲಿದೆ. ಆದರೆ ಈ ಫೋನ್ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳಿಲ್ಲ.
6GB RAM ಮತ್ತು 128GB ಸ್ಟೋರೇಜ್ ಬೆಲೆ $129 (ಸುಮಾರು 10,729 ರೂಗಳು)
8GB RAM ಮತ್ತು 256GB ಸ್ಟೋರೇಜ್ ಬೆಲೆ $149 (ಸುಮಾರು 12,392 ರೂಗಳು)
ಈ ಫೋನ್ 6.74 ಇಂಚಿನ HD+ ಡಿಸ್ಪ್ಲೇ 1600×720 ರೆಸುಲ್ಯೂಷನ್ ಹೊಂದಿದೆ. ಇದರ ರಿಫ್ರೆಶ್ ದರ 90Hz ಮತ್ತು ಗರಿಷ್ಠ ಹೊಳಪು 600 nits ಆಗಿದೆ. ಇದು ವಾಟರ್‌ಡ್ರಾಪ್ ನಾಚ್‌ನೊಂದಿಗೆ ಬರುತ್ತದೆ. ಅದರ ಮೇಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಒದಗಿಸಲಾಗಿದೆ. ಸ್ಮಾರ್ಟ್ಫೋನ್ MediaTek Helio G85 ಪ್ರೊಸೆಸರ್ ಅನ್ನು ಫೋನ್‌ನಲ್ಲಿ ನೀಡಲಾಗಿದೆ. ಫೋನ್ 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ.
Also Read: Amazon ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ 4G ಫೋನ್‌ಗಳು ₹7000 ರೂಗಳೊಳಗೆ ಲಭ್ಯ | Best Offer
ಈ ಫೋನ್ ತನ್ನದೇಯಾದ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು ಅದು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಕನೆಕ್ಷನ್ ನೋಡುವುದಾದರೆ ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್, USB-C ಪೋರ್ಟ್, ವೈಫೈ, ಬ್ಲೂಟೂತ್, NFC ಸೇರಿದಂತೆ ಇತರ ಆಯ್ಕೆಗಳನ್ನು ಹೊಂದಿದೆ.