ಭಾರತದಲ್ಲಿ ಅನಾವರಣಗೊಳ್ಳಲಿರುವ ಹೊಸ ಮತ್ತು ಮುಂಬರಲಿರುವ 48MP ಕ್ಯಾಮೆರಾದ ಫೋನ್ಗಳು

ಭಾರತದಲ್ಲಿ ಅನಾವರಣಗೊಳ್ಳಲಿರುವ ಹೊಸ ಮತ್ತು ಮುಂಬರಲಿರುವ 48MP ಕ್ಯಾಮೆರಾದ ಫೋನ್ಗಳು
HIGHLIGHTS

ಸ್ಮಾರ್ಟ್ಫೋನ್ ತಯಾರಕರು ಈ 48MP ಫೀಚರ್ ಅನ್ನು ತಮ್ಮ ಮುಂಬರಲಿರುವ ಫೋನ್ಗಳಲ್ಲಿ ಹೆಚ್ಚುವರಿಯಾಗಿ ಬಳಸಲಿದ್ದಾರೆ.

ವಿಶ್ವದಲ್ಲಿ ಮೊಟ್ಟ ಮೊದಲಿಗೆ Sony ಮತ್ತು Samsung ಬ್ರ್ಯಾಂಡ್ಗಳು ತಮ್ಮ 48MP ಮೆಗಾಪಿಕ್ಸೆಲ್ ಸೆನ್ಸರ್ಗಳನ್ನು ಘೋಷಿಸಿದ ನಂತರ  ಸ್ಮಾರ್ಟ್ಫೋನ್ ಮಾರಾಟಗಾರರು ಹೆಚ್ಚು ಕಡಿಮೆ ತಮ್ಮ ಹೊಸದಾಗಿ ಹೊರ ಬರುತ್ತಿರುವ ಎಲ್ಲ ಬೆಲೆಯ ಬ್ರಾಕೆಟ್ಗಳಲ್ಲಿ ಇದನ್ನು  ಅಳವಡಿಸಿಕೊಂಡಿದ್ದಾರೆ. ಇದರ ಮುಖ್ಯವಾಗಿ Sony IMX 586 ಮತ್ತು Samsung GM1 ಸೆನ್ಸೋರ್ಗಳನ್ನು ಹೋಲುವಂತೆಯ ವಿನ್ಯಾಸವನ್ನು ಬಳಸುತ್ತದೆ. ಇದರರ್ಥ 2×2 ಪಿಕ್ಸೆಲ್ಗಳು ಒಂದೇ ಬಣ್ಣದ್ದಾಗಿವೆ. ಆದ್ದರಿಂದ ಇಲ್ಲಿ ಡಿಜಿಟ್ 48MP ಕ್ಯಾಮೆರಾಗಳೊಂದಿಗಿನ ಹೊಸ ಮತ್ತು ಮುಂಬರುವ ಸ್ಮಾರ್ಟ್ಫೋನ್ಗಳನ್ನು ನಿಮಗಾಗಿ ಪಟ್ಟಿ ಮಾಡಿದ್ದೇವೆ.

Honor View 20
ಇದರಲ್ಲಿ 48MP ಕ್ಯಾಮರಾದೊಂದಿಗೆ ಪ್ರಾರಂಭಿಸಲಾದ ಭಾರತದಲ್ಲಿನ ಮೊದಲ ಫೋನ್ Honor View 20 ಆಗಿದೆ. ಇದು ದೇಶದಲ್ಲಿ ಪಂಚ್ ಹೋಲ್ ಕ್ಯಾಮೆರಾ ವಿನ್ಯಾಸವನ್ನು ತರಲು ಸ್ಮಾರ್ಟ್ಫೋನ್ ಕೂಡಾ ಮೊದಲನೆಯದಾಗಿದೆ. ಇದು 6.4 ಇಂಚಿನ ಪೂರ್ಣ HD+ ಆಲ್ ವ್ಯೂ ಡಿಸ್ಪ್ಲೇಯೊಂದಿಗೆ ಬರುತ್ತದೆ.ಇದರ ಮೇಲ್ಭಾಗದ ಎಡ ಮೂಲೆಯಲ್ಲಿರುವ 4.5mm ವೃತ್ತಾಕಾರದ ಕಟೌಟ್ 25MP ಫ್ರಂಟ್ ಕ್ಯಾಮರಾವನ್ನು ಹೊಂದಿದೆ. ಇದರ ಹಿಂಭಾಗದಲ್ಲಿ 48MP ಯ ಸೋನಿ IMX586 CMOS ಪ್ರೈಮರಿ ಸೆನ್ಸರನ್ನು ಹೊಂದಿದೆ. ಇದರ ಸಕೆಂಡರಿ ಟೈಮ್ ಆಫ್-ಫ್ಲೈಟ್ (TOF) 3D ಸೆನ್ಸರನ್ನು ಸಹ ಆಳವಾದ ಮಾಹಿತಿಯನ್ನು ಸೆರೆಹಿಡಿಯಲು ಇದರಲ್ಲಿ ನೀಡಲಾಗಿದೆ.

Xiaomi's Redmi Note 7
ಇದರಲ್ಲಿ ನಿಮಗಿಗಾಗಲೇ ತಿಳಿದಿರುವಂತೆ 48MP ಕ್ಯಾಮೆರಾ ಸೆಟಪ್ ಹೊಂದಿದೆ. ಮತ್ತು ಈ ಕ್ಯಾಮೆರಾ ಸ್ಪೆಕ್ ನೊಂದಿಗೆ ಪ್ರಾರಂಭಿಸಲು ಅತಿ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್ಫೋನಲ್ಲಿ ISOCELL ಬ್ರೈಟ್ GM1 ಸೆನ್ಸರನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ 6.8 ಇಂಚಿನ IPS LCD ಡಿಸ್ಪ್ಲೇ ಮತ್ತು 19.5: 9 ಆಕಾರ ಅನುಪಾತದೊಂದಿಗೆ ಬರುತ್ತದೆ. ಅಂದ್ರೆ ಇದು  48MP + 5MP ಬ್ಯಾಕ್ ಕ್ಯಾಮೆರಾ ಸೆಟಪ್ ಮತ್ತು 13MP ಸೆಲ್ಫ್ಫಿ ಶೂಟರ್ ಅನ್ನು ಹೊಂದಿದೆ. ಇದು ಇದೇ 28ನೇ ಫೆಬ್ರವರಿ 2019 ರಂದು ಭಾರತದಲ್ಲಿ ಬಿಡುಗಡೆಯಲಿದೆ.

Oppo F11 Pro
ಭಾರತದಲ್ಲಿ ಒಪ್ಪೋವಿನ ಈ ಹೊಸ ಈ Oppo F11 Pro ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಇದು ಮುಖ್ಯವಾಗಿ ಕಡಿಮೆ ಬೆಳಕಿನ ಛಾಯಾಗ್ರಹಣಕ್ಕೆ ಸಹಾಯ ಮಾಡಲು ಇದರಲ್ಲಿ 48MP ಬ್ಯಾಕ್ ಕ್ಯಾಮೆರಾವನ್ನು ನೀಡಿದೆ. ಈ ಫೋನ್ ಪಾಪ್ ಅಪ್ ಸೆಲ್ಫಿ ಕ್ಯಾಮೆರಾವನ್ನು ಕೂಡಾ ಹೊಂದಿರುತ್ತದೆ. ಅಲ್ಲದೆ 6.5 ಇಂಚಿನ AMOLED ಡಿಸ್ಪ್ಲೇಯನ್ನು ಮತ್ತು ಮೀಡಿಯಾ ಟೆಕ್ ಹೆಲಿಯೊ P80 SoC ಅನ್ನು ಹೊಂದಿರುವ ನಿರೀಕ್ಷೆಯಿದೆ. ಇದರ ಚಿಪ್ಸೆಟ್ ಮಾಹಿತಿ ಇನ್ನು ಬಿಡುಗಡೆಯಾಗಲಿಲ್ಲ. ಆದರೆ ಇದು VOOC ಚಾರ್ಜಿಂಗ್ ಸಹಾಯದಿಂದ 4500mAh ಬ್ಯಾಟರಿಯಿಂದ ಚಾಲಿತಗೊಳ್ಳುವ ನಿರೀಕ್ಷಿಯಿದೆ. 

Vivo V15 Pro
ಇದರಲ್ಲಿ ಭಾರಿ ಪರಿಣಾಮಕಾರಿ ಪಿಕ್ಸೆಲ್ಗಳೊಂದಿಗೆ ಚಿತ್ರಗಳನ್ನು ಒದಗಿಸುವ 48MP ಪ್ರೈಮರಿ ಮತ್ತು ಟ್ರಿಪಲ್ ಸೆನ್ಸೂರ್ ಅನ್ನು ಒಳಗೊಂಡಿರುವಂತೆ Vivo V15 Pro ಅನ್ನು ವದಂತಿ ಮಾಡಲಾಗಿದೆ. ಇದರ ಹಿಂಬದಿಯ ಕ್ಯಾಮರಾ ಸೆಟಪ್ 8MP ಸಂವೇದಕ ಮತ್ತು 5MP ಸೆನ್ಸರ್ ಅನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಭಾರತದಲ್ಲಿ 20ನೇ ಫೆಬ್ರವರಿ ರಂದು ಈ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ. ಮತ್ತು 32MP ಪಾಪ್ ಅಪ್ ಸೆಲ್ಫಿಯ ಕ್ಯಾಮರಾವನ್ನು ನಡೆಸುವ ಮೊದಲ ಫೋನ್ನೂ ಕೂಡ ಇದೆ. ಇದು ಅಮೆಜಾನ್ ಭಾರತದಲ್ಲಿ ಅದು ಪ್ರಾರಂಭವಾದಾಗ ಫೋನ್ ಲಭ್ಯವಿರುತ್ತದೆ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo