ವಿಶ್ವದ ಜನಪ್ರಿಯ ಅತಿ ಭರವಸೆ ಮತ್ತು ಹಳೆಯ ಸ್ಮಾರ್ಟ್ಫೋನ್ ಬ್ರಾಂಡ್ ಮೋಟೋರೋಲಾ (Motorola) ಮುಂದಿನ ಕೆಲವು ದಿನಗಳಲ್ಲಿ ತನ್ನ ಮುಂಬರಲಿರುವ ಹೊಚ್ಚ ಹೊಸ Moto Razr 40 ಸೀರಿಸ್ ಸ್ಮಾರ್ಟ್ಫೋನ್ ಅನ್ನು ಚೀನಾದ ನಂತರ ಈಗ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಅಂದ್ರೆ ಈ ಸ್ಮಾರ್ಟ್ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದ್ದು ಈಗ ಭಾರತದ ಸರದಿಯಾಗಿದೆ. ಕಂಪನಿ ಈ ಸರಣಿಯಲ್ಲಿ ಒಟ್ಟಾರೆಯಾಗಿ 2 ಸ್ಮಾರ್ಟ್ಫೋನ್ ಅಂದ್ರೆ Moto Razr 40 ಮತ್ತು Moto Razr 40 Ultra ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದರ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು ಬೇಜಾರಾಗುವ ಅಂಶವೆಂದರೆ ಕಂಪನಿ ಬಿಡುಗಡೆಯ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.
https://twitter.com/motorolaindia/status/1664987760485101568?ref_src=twsrc%5Etfw
ಮೋಟೋರೋಲಾ ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೆಚ್ಚಾಗಿ ಎನೂ ಹಂಚಿಕೊಳ್ಳದೆಯೇ ಕೇವಲ Moto Razr 40 ಸರಣಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಟ್ವಿಟ್ಟರ್ ಖಾತೆಯಲ್ಲಿ ದೃಢಪಡಿಸಿದೆ. ಇದರೊಂದಿಗೆ ಕಂಪನಿ ಈ ಸ್ಮಾರ್ಟ್ಫೋನ್ ಭಾರತದಲ್ಲಿ ಈಗಾಗಲೇ ಅಮೆಜಾನ್ ಜೊತೆ ಕೈಜೋಡಿಸಿದ್ದು ಬಿಡುಗಡೆಯ ನಂತರ ಅಮೆಜಾನ್ ಇಂಡಿಯಾ ಸೈಟ್ ಮೂಲಕ ಖರೀದಿಗೆ ಲ್ಯಾಬ್ ಲಭ್ಯವಾಗಲಿದೆ.
ಮುಂಬರಲಿರುವ ಸ್ಮಾರ್ಟ್ಫೋನ್ ಮೊಟೊರೊಲಾ ಕಂಪನಿಯ Moto Razr 40 ಮತ್ತು Moto Razr 40 Ultra ಬೆಲೆಯ ಬಗ್ಗೆ ನೋಡುವುದಾದರೆ ಸದ್ಯಕ್ಕೆ ಭಾರತದ ಬೆಲೆಯನ್ನು ಇನ್ನೂ ನೀಡಲ್ಲ. ಆದರೆ ಈ ಲೇಖನದಲ್ಲಿ ಈಗಾಗಲೇ ಚೋಣದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್ಫೋನ್ಗಳ ಬೆಲೆಯನ್ನು ನೀಡಲಾಗಿದ್ದು ಭಾರತದಲ್ಲಿ ಇದರ ಸುತ್ತಮುತ್ತಲಿನ ಶ್ರೇಣಿಯನ್ನು ನೀವು ಊಹಿಸಬಹುದು.
Moto Razr 40 ಫೋನ್ 8GB+128GB ಸ್ಟೋರೇಜ್ CNY 3,999 (ಸುಮಾರು ರೂ 46,400) ಆಗಿದೆ.
Moto Razr 40 Ultra ಫೋನ್ 8GB+256GB ಸ್ಟೋರೇಜ್ CNY 5,699 (ಸುಮಾರು ರೂ 66,100) ಆಗಿದೆ.