ಭಾರತದಲ್ಲಿ ಮುಂಬರಲಿರುವ ಮೋಟೊರೋಲದ ಹೊಸ Motorola Razr 50 Series ಬಿಡುಗಡೆಯಾಗಲು ಅಧಿಕೃತ ದಿನಾಂಕವನ್ನು ಪ್ರಕಟಿಸಿದೆ. ಈ ಸರಣಿಯಲ್ಲಿ ಕಂಪನಿ ಪ್ರಸ್ತುತ ಕ್ಲಾಮ್‌ಶೆಲ್ ಸ್ಮಾರ್ಟ್‌ಫೋನ್‌ಗಳಾದ Motorola Razr 50 ಮತ್ತು Motorola S50 Neo ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸ್ಮಾರ್ಟ್ಫೋನ್ ದೀರ್ಘಕಾಲದವರೆಗೆ ಈಗಾಗಲೇ ಇಂಟರ್ನೆಟ್ ದುನಿಯಾದಲ್ಲಿ ಮಾತುಕತೆ ನಡೆಸುತ್ತಿವೆ. ಈಗ ಮೊಟೊರೊಲಾದ ಈ ಮುಂಬರಲಿರುವ 5G ಸ್ಮಾರ್ಟ್ಫೋನ್ಗಳು ಬಿಡುಗಡೆ ದಿನಾಂಕವನ್ನು ಅಂತಿಮವಾಗಿ ಬಹಿರಂಗಪಡಿಸಲಾಗಿದೆ. ಈ ಸಾಮರ್ಟ್ಫೋನ್ಗಳನ್ನು ಮೊದಲು ತನ್ನ ತಾಯ್ನಾಡಾದ ಚೀನಾದಲ್ಲಿ ಬಿಡುಗಡೆ ಮಾಡಲಿದೆ. ಇದರ ನಂತರ ಭಾರತಕ್ಕೆ ಕಾಲಿಡುವ ನಿರೀಕ್ಷೆಗಳಿವೆ.
Also Read: ಫೋನ್‌ನಲ್ಲಿ ಈ ಕಾರಣಗಳಿಂದ Network Problem ಹೆಚ್ಚುವ ಸಾಧ್ಯತೆ! ನಿಮಿಷಗಳಲ್ಲಿ ಸರಿಪಡಿಸುವುದು ಹೇಗೆ?
ಮುಂಬರಲಿರುವ ಮೋಟೋ ಸರಣಿಯಲ್ಲಿ ನಿಮಗೆ Motorola Razr 50 ಮತ್ತು Motorola S50 Neo ಸ್ಮಾರ್ಟ್ಫೋನ್ 25ನೇ ಜೂನ್ 2024 ರಂದು ಪ್ರಾರಂಭಗೊಳ್ಳಲಿದೆ. ಅಧಿಕೃತ ಪ್ರಕಟಣೆಯನ್ನು ಕಂಪನಿಯು Weibo ಪೋಸ್ಟ್ ಮೂಲಕ ಮಾಡಿದೆ. ಈ ಬಿಡುಗಡೆಯ ಕಾರ್ಯಕ್ರಮವು 11:30 AM IST ಕ್ಕೆ ಪ್ರಾರಂಭವಾಗುವುದಾಗಿ ತಿಳಿಸಿದೆ. ಸ್ಮಾರ್ಟ್ಫೋನ್ ಪ್ರಸ್ತುತ ಚೀನಾದಲ್ಲಿ ಬಿಡುಗಡೆಯಾಗುತ್ತಿವೆ. ಮತ್ತು ಭಾರತದ ಬಿಡುಗಡೆ ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲ. ಈ ಮುಂಬರುವ Motorola Razr 50 ಸರಣಿಯು ಬಳಕೆದಾರರಿಗಾಗಿ ಏನನ್ನು ಹೊಂದಿದೆ ಎಂಬುದರ ಕುರಿತು ಅಧಿಕೃತವಾಗಿ ಇನ್ನೂ ಏನನ್ನು ತಿಳಿಸಿಲ್ಲ.
ಸೋರಿಕೆಗಳು ಮತ್ತು ವದಂತಿಗಳ ಪ್ರಕಾರ Motorola Razr 50 ಫೋನ್ 6.9 ಇಂಚಿನ pOLED ಪ್ರೈಮರಿ ಡಿಸ್ಪ್ಲೇ ಮತ್ತು 3.6 ಇಂಚಿನ OLED ಕವರ್ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಎರಡೂ ಡಿಸ್ಪ್ಲೇಗಳು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತವೆ. ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್ ಜೊತೆಗೆ 8GB RAM ನಿಂದ ಚಾಲಿತವಾಗಲಿದೆ. ಶಾಶ್ವತವಾದ ಕಾರ್ಯಕ್ಷಮತೆಗಾಗಿ Motorola Razr 50 ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4200mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಎಂದು ನಿರೀಕ್ಷಿಸಲಾಗಿದೆ.
ಮತ್ತೊಂದೆಡೆ Motorola Razr 50 Ultra ಫೋನ್ 6.9 ಇಂಚಿನ ಮುಖ್ಯ OLED ಡಿಸ್ಪ್ಲೇ ಮತ್ತು 2 ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದುವ ನಿರೀಕ್ಷೆಯಿದೆ. ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿರಬಹುದು ಮತ್ತು ಇದು 68W ಚಾರ್ಜಿಂಗ್ ಬೆಂಬಲದೊಂದಿಗೆ 4000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಎಂದು ನಿರೀಕ್ಷಿಸಲಾಗಿದೆ. ಸಾಧನಗಳ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು ಸೋರಿಕೆಗಳು ಮತ್ತು ವದಂತಿಗಳನ್ನು ಆಧರಿಸಿವೆ ಎಂಬುದನ್ನು ಗಮನಿಸಿ ಆದ್ದರಿಂದ ಅದನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ತೆಗೆದುಕೊಳ್ಳಿ ಏಕೆಂದರೆ ಅವುಗಳು ಘೋಷಿಸಲ್ಪಡುವ ನಿರೀಕ್ಷೆಯ ನೋಟವನ್ನು ಮಾತ್ರ ನೀಡುತ್ತವೆ. ಕೆಲವೇ ದಿನಗಳಲ್ಲಿ Motorola ತನ್ನ ಹೊಸ ತಲೆಮಾರಿನ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್‌ಗಳೊಂದಿಗೆ ಸುಧಾರಣೆಗಳೊಂದಿಗೆ ಬಹಿರಂಗಪಡಿಸಲಿದೆ.