ಇಂದಿನ ಫೋಲ್ಡ್ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಮೋಟೊರೋಲ (Motorola) ತನ್ನ ಲೇಟೆಸ್ಟ್ ಮತ್ತು ಹೆಚ್ಚಾಗಿ ಬೇಡಿಕೆಯಲ್ಲಿ ವೇಗವಾಗಿ ಹೆಚ್ಚುತ್ತಿರುವ ಲೇಟೆಸ್ಟ್ Motorola Razr 50 ಫೋಲ್ಡೇಬಲ್ ಸ್ಮಾರ್ಟ್ಫೋನ್ ಕಳೆದ ವಾರ ಅಂದ್ರೆ 9ನೇ ಸೆಪ್ಟೆಂಬರ್ ರಂದು ಬಿಡುಗಡೆಯಾಗಿತ್ತು ಆದರೆ ಇಂದಿನಿಂದ 20ನೇ ಸೆಪ್ಟೆಂಬರ್ ಮಧ್ಯಾಹ್ನ 12:00 ಗಂಟೆಯಿಂದ ಮೊದಲ ಮಾರಾಟ ಶುರುವಾಗಿದೆ. ಈ Motorola Razr 50 ಸ್ಮಾರ್ಟ್‌ಫೋನ್‌ನ ಮುಂಗಡ ಬುಕಿಂಗ್ ಕಳೆದ 10 ದಿನಗಳಿಂದ ನಡೆಯುತ್ತಿದ್ದು ಇಂದಿನಿಂದ ಇದರ ಮಾರಾಟ ಪ್ರಾರಂಭವಾಗಲಿದೆ. ಇದರ ವಿಶೇಷವೆಂದರೆ ಇತ್ತೀಚಿನ Motorola Razr 50 ಫೋನ್ ಬರೋಬ್ಬರಿ 15000 ರೂಗಳ ಭಾರಿ ಡಿಸ್ಕೌಂಟ್‌ನೊಂದಿಗೆ ಅಮೆಜಾನ್ ಮತ್ತು ಮೊಟೊರೊಲಾ ವೆಬ್‌ಸೈಟ್ ಮೂಲಕ ಮಾರಾಟವಾಗಲು ಸಜ್ಜಾಗಿದೆ.
Also Read: Samsung Galaxy M55s 5G ಹೊಸ ಫ್ಯೂಶನ್ ಡಿಸೈನ್ ಮತ್ತು ಫೀಚರ್‌ಗಳೊಂದಿಗೆ ಬಿಡುಗಡೆಗೆ ಡೇಟ್ ಫಿಕ್ಸ್!
ಪ್ರೀಮಿಯಂ Motorola Razr 50 ಫೋಲ್ಡೇಬಲ್ ಸ್ಮಾರ್ಟ್ಫೋನ್ ಲೇಟೆಸ್ಟ್ ಫೀಚರ್ಗಳೊಂದಿಗೆ ವಿಶೇಷ Moto AI Gemini ಅನ್ನು ಸಹ ಹೊಸ ಸ್ಮಾರ್ಟ್ಫೋನ್ ಮೂಲಕ ತರಲಾಗಿದೆ. Motorola Razr 50 ಫೋಲ್ಡೇಬಲ್ ಸ್ಮಾರ್ಟ್ಫೋನ್ ಕಂಪನಿಯು ಗೊರಿಲ್ಲಾ ಗ್ಲಾಸ್‌ನ ರಕ್ಷಣೆಯೊಂದಿಗೆ ವಿಭಾಗದಲ್ಲಿ ಅತಿದೊಡ್ಡ ಹೊರಗಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಸಾಧನವು IPX8 ಡಸ್ಟ್ ಮತ್ತು ವಾಟರ್ ಮೂಲಕ ನೀರಿನ ಪ್ರತಿರೋಧದ ರೇಟಿಂಗ್ ಅನ್ನು ನೀಡುತ್ತದೆ. ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಬಾರಿ ಮಡಚುವಿಕೆಯನ್ನು ತಡೆದುಕೊಳ್ಳುವ ಮತ್ತು ತೆರೆದುಕೊಳ್ಳಲು ದೃಢವಾದ ವಿನ್ಯಾಸದೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಕಂಪನಿಯ ವೆಬ್‌ಸೈಟ್‌ನ ಹೊರತಾಗಿ Motorola Razr 50 ಅನ್ನು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಿಂದ ಆರ್ಡರ್ ಮಾಡಬಹುದು ಮತ್ತು ಅದರ ಮಾರಾಟ ಪ್ರಾರಂಭವಾಗಿದೆ. 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಸಾಧನದ ಬೆಲೆ 64,999 ರೂಗಳಿಗೆ ಬಿಡುಗಡೆಯಾಗಿದ್ದು ಮೊದಲ ಮಾರಾಟದಲ್ಲಿ 5000 ರೂಗಳ ಸ್ಪೆಷಲ್ ಫೆಸ್ಟಿವಲ್ ಕೂಪನ್ ರಿಯಾಯಿತಿಯೊಂದಿಗೆ ಮತ್ತು ಆಯ್ದ ಬ್ಯಾಂಕ್ಗಳ 10,000 ರೂಗಳ ಡಿಸ್ಕೌಂಟ್‌ನೊಂದಿಗೆ ಈ Motorola Razr 50 ಫೋಲ್ಡೇಬಲ್ ಸ್ಮಾರ್ಟ್ಫೋನ್ ಅನ್ನು ಪಡೆಯಬಹುದು. ಈ ಸ್ಮಾರ್ಟ್ಫೋನ್ ಸ್ಪಿರಿಟ್ಸ್ ಆರೆಂಜ್, ಬೀಚ್ ಸ್ಯಾಂಡ್ ಮತ್ತು ಕೋಲಾ ಗ್ರೇ ಎಂಬ 3 ಹೊಸ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
Motorola Razr 50 ಫೋಲ್ಡೇಬಲ್ ಸ್ಮಾರ್ಟ್ಫೋನ್ 6.9 ಇಂಚಿನ ಫೋಲ್ಡಬಲ್ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು HDR10+ ಬೆಂಬಲ ಮತ್ತು 90Hz ಬೆಂಬಲದೊಂದಿಗೆ 3.6 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ. Motorola Razr 50 ಫೋಲ್ಡೇಬಲ್ ಸ್ಮಾರ್ಟ್ಫೋನ್ MediaTek Dimensity 7300X ಪ್ರೊಸೆಸರ್ ಹೊಂದಿರುವ ಫೋನ್ ಆಂಡ್ರಾಯ್ಡ್ 14 ಆಧಾರಿತ ಸಾಫ್ಟ್‌ವೇರ್ ಅನ್ನು ಪಡೆಯುತ್ತಿದೆ.
ಈ Motorola Razr 50 ಫೋಲ್ಡೇಬಲ್ ಸ್ಮಾರ್ಟ್ಫೋನ್ ಫೋಟೋಗ್ರಾಫಿಗಾಗಿ OIS ಬೆಂಬಲದೊಂದಿಗೆ 50MP ಪ್ರೈಮರಿ ಸೆನ್ಸರ್ ಮತ್ತು 13MP ಅಲ್ಟ್ರಾವೈಡ್ ಲೆನ್ಸ್‌ನೊಂದಿಗೆ ಡ್ಯುಯಲ್ ಕ್ಯಾಮೆರಾವನ್ನು ಒದಗಿಸಲಾಗಿದೆ. Motorola Razr 50 ಫೋಲ್ಡೇಬಲ್ ಸ್ಮಾರ್ಟ್ಫೋನ್ ಸೆಲ್ಫೀಗಳು ಮತ್ತು ವೀಡಿಯೊ ಕರೆಗಳಿಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೇ 4200mAh ಸಾಮರ್ಥ್ಯದ ಬ್ಯಾಟರಿಯು 30W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಒದಗಿಸಲಾಗಿದೆ. ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೋನ್‌ನಲ್ಲಿ ಲಭ್ಯವಿದೆ.
Disclosure: This article contains affiliate links