ಭಾರತದಲ್ಲಿ ಇಂದು Motorola One Vision ಸ್ಮಾರ್ಟ್ಫೋನ್ 48MP ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ

Updated on 20-Jun-2019
HIGHLIGHTS

ಈ Motorola One Vision ಸ್ಮಾರ್ಟ್ಫೋನ್ ನೇರವಾಗಿ ಇತ್ತೀಚೆಗೆ ಬಿಡುಗಡೆಯಾದ Samsung Galaxy M40 ಫೋನಿನೊಂದಿಗೆ ಸ್ಪರ್ಧಿಸಲಿದೆ.

ಮೊಟೊರೊಲಾ ಈ ವರ್ಷ ಭಾರತದಲ್ಲಿ Moto G7 ಮತ್ತು Moto One ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಇಂದು ಅಂದ್ರೆ ಜೂನ್ 20 ರಂದು Motorola One Vision ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ನ ಕೆಲವು ವೈಶಿಷ್ಟ್ಯಗಳು ಈಗಾಗಲೇ ಸೋರಿಕೆಯಾಗಿವೆ. ಇತ್ತೀಚೆಗೆ ಈ ಸ್ಮಾರ್ಟ್ಫೋನ್ ಭಾರತದಲ್ಲಿ BIS ಸ್ಟ್ಯಾಂಡರ್ಡ್ ಪ್ರಮಾಣಪತ್ರವನ್ನು ಸಹ ಅಂಗೀಕರಿಸಿದೆ. Motorola One Vision ಅನ್ನು ಈ ವರ್ಷ ಹೆಚ್ಚಾಗಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್ಗಳಂತೆ ಪಂಚ್ ಹೋಲ್ ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 48MP ಮೆಗಾಪಿಕ್ಸೆಲ್‌ಗಳ ಪ್ರೈಮರಿ ಬ್ಯಾಕ್ ಕ್ಯಾಮೆರಾದೊಂದಿಗೆ ಬರಬವುದು. ಈ Motorola One Vision ಸ್ಮಾರ್ಟ್ಫೋನ್ ನೇರವಾಗಿ ಇತ್ತೀಚೆಗೆ ಬಿಡುಗಡೆಯಾದ Samsung Galaxy M40 ಫೋನಿನೊಂದಿಗೆ ಸ್ಪರ್ಧಿಸಲಿದೆ. 

ಈ ಸ್ಮಾರ್ಟ್ಫೋನ್ನ ವೈಶಿಷ್ಟ್ಯಗಳ ಬಗ್ಗೆ ಮಾತನಾಡಬೇಕೆಂದರೆ 6.3 ಇಂಚಿನ ಪೂರ್ಣ ಎಚ್ಡಿ ಪ್ಲಸ್ ಪ್ಯಾನಲನ್ನು ನೀಡಬಹುದು. ಇದಕ್ಕೆ ಇದು 21: 9 ಅಸ್ಪೆಟ್ ರೇಷುವಿನೊಂದಿಗೆ ಬರಲಿದೆ. ಫೋನ್‌ನ ಡಿಸ್ಪ್ಲೇಯಲ್ಲಿ ಪಂಚ್ ಹೋಲ್ ಕ್ಯಾಮೆರಾವನ್ನು ನೀಡಬಹುದು. ಸ್ಯಾಮ್‌ಸಂಗ್‌ನ ಎಕ್ಸಿನೋಸ್ 9609 ಎಸ್‌ಒಎಸ್ ಚಿಪ್‌ಸೆಟ್ ಪ್ರೊಸೆಸರ್ ಅನ್ನು ಫೋನ್‌ನಲ್ಲಿ ನೀಡಬಹುದು. ಫೋನ್ 4GB + 64GB ಸ್ಟೋರೇಜ್ ಮತ್ತು 4GB + 128GB ಆಯ್ಕೆಯೊಂದಿಗೆ ಬರುವ ನಿರೀಕ್ಷೆಯಿದೆ. ಅಲ್ಲದೆ ಮೈಕ್ರೊ SD ಕಾರ್ಡ್ ಮೂಲಕ ಫೋನ್‌ನ ಸ್ಟೋರೇಜ್ ಹೆಚ್ಚಿಸಬಹುದು. ಫೋನ್‌ನ ಕ್ಯಾಮೆರಾ ಫೀಚರ್ಗಳ ಕುರಿತು ಹೇಳಬೇಕೆಂದರೆ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಅನ್ನು ಅದರ ಹಿಂಭಾಗದಲ್ಲಿ ನೀಡಬಹುದು. 

ಇದರ ಪ್ರೈಮರಿ ಹಿಂಬದಿಯ ಕ್ಯಾಮೆರಾವನ್ನು 48 ಮೆಗಾಪಿಕ್ಸೆಲ್‌ಗಳ f/ 1.7 ಅಪೆರ್ಚರ್ ಜೊತೆಗೆ ನೀಡಿದರೆ ಮತ್ತೊಂದು 5MP ಮೆಗಾಪಿಕ್ಸೆಲ್  ಕ್ಯಾಮೆರಾವನ್ನು ನೀಡಬಹುದು. ಇದರ ಅಪೆರ್ಚರ್ f/ 2.2 ನೀಡಬಹುದು. ಫೋನ್‌ನ ಸೆಲ್ಫಿ ಕ್ಯಾಮೆರಾದ ಬಗ್ಗೆ ಮಾತನಾಡಿ ಇದಕ್ಕೆ 25MP  ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಬಹುದು. ಫೋನ್ ಸ್ಟಾಕ್ ಆಂಡ್ರಾಯ್ಡ್‌ನ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸಬಹುದು. ಫೋನ್‌ಗೆ ಶಕ್ತಿಯನ್ನು ನೀಡಲು ಇದಕ್ಕೆ 3500mAh ಬ್ಯಾಟರಿ ನೀಡಬಹುದು. ಅಲ್ಲದೆ ಟರ್ಬೊ ಫಾಸ್ಟ್ ಚಾರ್ಜಿಂಗ್ ಅನ್ನು Moto G7 ನಂತೆಯೇ ಮಾಡಬಹುದು. ಈ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ 25 ಸಾವಿರ ರೂಪಾಯಿ ದರದಲ್ಲಿ ಬಿಡುಗಡೆ ಮಾಡಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :