ಮೊಟೊರೊಲಾ ಇಂದು ಭಾರತದಲ್ಲಿ ತನ್ನ ಲೇಟೆಸ್ಟ್ Motorola G45 5G ಸ್ಮಾರ್ಟ್‌ಫೋನ್ 10 ಸಾವಿರ ಬಜೆಟ್‌ನಲ್ಲಿ ಸೂಪರ್ ಫೀಚರ್‌ಗಳೊಂದಿಗೆ ಬಂದಿದೆ. ಈ ಫೋನ್‌ನ ವೈಶಿಷ್ಟ್ಯಗಳನ್ನು ನೀವು ನೋಡಿದಾಗ ನೀವು ಇದನ್ನು ಹೇಳುತ್ತೀರಿ. ಬಜೆಟ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಕೆಲವು ಸಮಯದಿಂದ G ಸಿರೀಸ್ ನಿಂದ ಹೊಸ ಸ್ಮಾರ್ಟ್‌ಫೋನ್ಗಳನ್ನು ಬಿಡುಗಡೆ ಮಾಡುತ್ತಿರುವ ಮೊಟೊರೊಲಾ ಇದೀಗ ಈ Motorola G45 5G ಸ್ಮಾರ್ಟ್‌ಫೋನ್ ಅತ್ಯಂತ ಆಕ್ರಮಣಕಾರಿ ಬೆಲೆಗೆ ಬಿಡುಗಡೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಲೇಟೆಸ್ಟ್ ಮತ್ತು ಹೆಚ್ಚು ಜನಪ್ರಿಯವಾಗಿರುವ ಫೀಚರ್ಗಳೊಂದಿಗೆ ಜನಸಾಮಾನ್ಯರ ಕೈಗೆಟುಕುವ ಬೆಲೆಗೆ ಬಿಡುಗಡೆಯಾಗಿದೆ.
ಮೊಟೊರೊಲಾದ ಈ Moto G45 5G ಸ್ಮಾರ್ಟ್‌ಫೋನ್ ಮೂಲ ರೂಪಾಂತರವು 4GB RAM ಮತ್ತು 128GB ಸ್ಟೋರೇಜ್ ರೂಪಾಂತರವು ಕೇವಲ 10,999 ರೂಗಳಿಗೆ ಬಂದ್ರೆ ಇದರ ಕ್ರಮವಾಗಿ ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವು ಕೇವಲ 12,999 ರೂಗಳಿಂದ ಶುರುವಾಗುತ್ತದೆ. ಅಲ್ಲದೆ ಈ Motorola G45 5G ಸ್ಮಾರ್ಟ್‌ಫೋನ್ Axis ಮತ್ತು IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಮತ್ತು EMI ಆಯ್ಕೆಗಳೊಂದಿಗೆ ಈ ಫೋನ್ ಅನ್ನು ಖರೀದಿಸುವ ಬಳಕೆದಾರರು ರೂ. 1,000 ರಿಯಾಯಿತಿ ಲಭ್ಯವಿದೆ. ಇಂದಿನ ಬಿಡುಗಡೆಯಾ ಕೊಡುಗೆಯಾಗಿ ಬ್ಯಾಂಕ್ ಆಫರ್ ಹೊಂದಿರುವ ಈ ಸ್ಮಾರ್ಟ್ ಫೋನ್ ರೂ. 9,999 ಆರಂಭಿಕ ಬೆಲೆಗೆ ಖರೀದಿಸಲು ಲಭ್ಯವಿರುತ್ತದೆ. ಈ ಸ್ಮಾರ್ಟ್ಫೋನ್ 28ನೇ ಆಗಸ್ಟ್ 2024 ರಿಂದ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.
Motorola G45 5G ಸ್ಮಾರ್ಟ್ಫೋನ್ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ 6.67 ಇಂಚಿನ IPS LCD ಪರದೆಯೊಂದಿಗೆ ಬರುತ್ತದೆ. ಫೋನ್ 50MP + 8MP ಡ್ಯುಯಲ್ ಹಿಂಬದಿಯ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ ಕ್ಯಾಮೆರಾವು 30fps ನಲ್ಲಿ FHD ವೀಡಿಯೊಗಳು ಮತ್ತು ಉತ್ತಮ ಫೋಟೋಗಳನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ. Motorola G45 5G ಪ್ರೀಮಿಯಂ ವೆಜಿಟೇರಿಯನ್ ಸ್ಕಿನ್ ವಿನ್ಯಾಸ ಮತ್ತು ಬಣ್ಣದ ಆಯ್ಕೆಗಳಲ್ಲಿ ಈ ಫೋನ್ ಅನ್ನು ನೀಡಲಾಗಿದೆ.
ಇದನ್ನೂ ಓದಿ: ಈಗ ಮತ್ತೇ 3 ಹೊಸ ಬಣ್ಣಗಳಲ್ಲಿ ಬಿಡುಗಡೆಯಾದ ಆಪಲ್‌ನ Beats Studio Pro Kim Special Edition ಆದರೆ ಬೆಲೆ ಎಷ್ಟು?
ಈ ಹೊಸ Motorola G45 5G ಸ್ಮಾರ್ಟ್‌ಫೋನ್ Snapdragon 6s Gen 3 ಚಿಪ್ ಸೆಟ್‌ನಿಂದ ಚಾಲಿತವಾಗಿದೆ ಮತ್ತು 4GB ಮತ್ತು 8GB RAM ಜೊತೆಗೆ 64GB RAM ಬೂಸ್ಟ್ ಜೊತೆಗೆ 128GB ಇಂಟರ್ನಲ್ ಸ್ಟೋರೇಜ್ ಅನ್ನು ಜೋಡಿಸಲಾಗಿದೆ. ಈ ಮೊಟೊರೊಲಾ ಸ್ಮಾರ್ಟ್‌ಫೋನ್ ಡಾಲ್ಬಿ ಅಟ್ಮಾಸ್ ಮತ್ತು ಹೈ-ರೆಸ್ ಆಡಿಯೊ ಬೆಂಬಲದೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಈ ಫೋನ್ ಸ್ಮಾರ್ಟ್ ಕನೆಕ್ಟ್, IP52 ರೇಟಿಂಗ್, ಗೊರಿಲ್ಲಾ ಗ್ಲಾಸ್ 3 ರಕ್ಷಣೆಯಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಈ ಫೋನ್ 5000mAh ದೊಡ್ಡ ಬ್ಯಾಟರಿ ಮತ್ತು 20W ಟರ್ಬೊ ಪವರ್ ಫಾಸ್ಟ್ ಚಾರ್ಜ್ ಬೆಂಬಲವನ್ನು ಹೊಂದಿದೆ.