Motorola Edge 60 Fusion Comming Soon in India
Motorola Edge 60 Fusion: ಭಾರತದಲ್ಲಿರುವ ಜನಪ್ರಿಯ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವ ಮೋಟೊರೋಲ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ Motorola Edge 60 Fusion ಸ್ಮಾರ್ಟ್ಫೋನ್ ಅತಿ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸ್ಮಾರ್ಟ್ಫೋನ್ ಬಗ್ಗೆ ಕಂಪನಿ ಈಗಾಗಲೇ ಫ್ಲಿಪ್ಕಾರ್ಟ್ ಮೂಲಕ ಇದರ ಮೈಕ್ರೋ ಸೈಟ್ ಪೇಜ್ ಅನ್ನು ಲೈವ್ ಮಾಡಿದೆ. ಪ್ರಸ್ತುತ ಕಂಪನಿ ಇದರ ಯಾವುದೇ ಅಧಿಕೃತ ಮಾಹಿತಿಗಳನ್ನು ಪ್ರಕಟಿಸಿಲ್ಲವಾದರೂ ಲುಕ್ ಮತ್ತು ಡಿಸೈನ್ ಆಧಾರದ ಮೇರೆಗೆ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ 3D ಕರ್ವ್ ಡಿಸ್ಪ್ಲೇಯನ್ನು ಸಪೋರ್ಟ್ ಮಾಡಲಿದೆ.
ಈ ಮುಂಬರಲಿರುವ Motorola Edge 60 Fusion ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಕಂಪನಿ ಇದನ್ನು ಮಾಧ್ಯಮ ಶ್ರೇಣಿಯಲ್ಲಿ ಪರಿಚಯಿಸಬಹುದು. ಅಂದ್ರೆ ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಸುಮಾರು ₹19,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಸುಮಾರು ₹21,999 ರೂಗಳಿಗೆ ನಿರೀಕ್ಷಿಸಬಹುದು. Motorola Edge 60 Fusion ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದ್ದು ಬ್ಯಾಂಕ್ ಕಾರ್ಡ್ ಆಫರ್ ಸಹ ಇದರಲ್ಲಿ ನಿರೀಕ್ಷಿಸಬಹುದು.
ಇದರ ಬಗ್ಗೆ ಈಗಾಗಲೇ ಟ್ವಿಟ್ಟರ್ ಮೂಲಕ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು ಈ ಫೋನ್ 2ನೇ ಏಪ್ರಿಲ್ 2025 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ಅದರ ಮೊದಲ ಮಾರಾಟ 9ನೇ ಏಪ್ರಿಲ್ 2025 ರಿಂದ ಪ್ರಾರಂಭವಾಗಲಿದೆ ಎಂದು ಸೂಚಿಸಿದ್ದಾರೆ. ಈ ಸೋರಿಕೆಗಳು ಮುಂಬರುವ ಸ್ಮಾರ್ಟ್ಫೋನ್ ಸಂಭಾವ್ಯ ಬಿಡುಗಡೆ ಸಮಯ ಮತ್ತು ಪ್ರಮುಖ ವಿಶೇಷಣಗಳ ಬಗ್ಗೆ ಒಂದು ನೋಟವನ್ನು ಒದಗಿಸುತ್ತವೆ.
ಈ Motorola Edge 60 Fusion ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾಹಿತಿ ಸೋರಿಕೆಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಚಿಪ್‌ಸೆಟ್, 50MP ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು 5,500mAh ಬ್ಯಾಟರಿಯ ಸುಳಿವು ನೀಡಿವೆ. ಮೋಟೋರೋಲಾ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಿಸದಿದ್ದರೂ ಫೋನ್ ಕಳೆದ ವರ್ಷದ Motorola Edge 50 Fusion ಉತ್ತರಾಧಿಕಾರಿ ಎಂದು ದೃಢಪಡಿಸಲಾಗಿದೆ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.