ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಲೇ ಇರುತ್ತವೆ. ಅಲ್ಲದೆ ಒಂದಕ್ಕಿಂತ ಒಂದು ಉತ್ತಮವಾದ ಫೀಚರ್ಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿರುತ್ತವೆ. ಈಗ ಮೊಟೊರೊಲಾದ ಬಾರಿಯಾಗಿದ್ದು ಈಗ ತನ್ನ ಲೇಟೆಸ್ಟ್ ಮುಂಬರಲಿರುವ Motorola Edge 50 Ultra ಸ್ಮಾರ್ಟ್‌ಫೋನ್ 50MP ಸೆಲ್ಫಿ ಕ್ಯಾಮೆರಾದೊಂದಿಗೆ 6.7 ಇಂಚಿನ OLED ಡಿಸ್ಪ್ಲೇ ಮತ್ತು 16GB RAM ಸೇರಿ ಒಂದಿಷ್ಟು ಮಾಹಿತಿಗಳನ್ನು ಬಿಡುಗಡೆಗೂ ಮುಂಚೆಯೇ ಕಂಪನಿ ಅನಾವರಣಗೊಳಿಸಿದೆ. Motorola Edge 50 Ultra ಸ್ಮಾರ್ಟ್‌ಫೋನ್ ಇದೇ 18ನೇ ಜೂನ್ 2024 ರಂದು ಮಧ್ಯಾಹ್ನ 12:00 ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ.
ಈ ಸ್ಮಾರ್ಟ್ಫೋನ್ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು ಈಗ Motorola Edge 50 Ultra ಭಾರತದಲ್ಲಿ ಕಾಲಿಡಲು ಸಜ್ಜಾಗಿದೆ. ಈ ಸ್ಮಾರ್ಟ್ಫೋನ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಅವೆಂದರೆ 8GB RAM ಮತ್ತು 512GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಸುಮಾರು 40000 ರೂಗಳಿಗೆ ಬರುವ ನಿರೀಕ್ಷೆಗಳಿವೆ.
Also Read: ನಿಮಗೆ ಬಂದ WhatsApp ಮೆಸೇಜ್‌ಗಳನ್ನು ಓದಕ್ಕೂ ಮುಂಚೆ ಡಿಲೀಟ್ ಆದ್ರೆ ಈ ರೀತಿ ಮತ್ತೆ ಪಡೆಯಬಹುದು!
ಇದರ ಮತ್ತೊಂದು 16GB RAM ಮತ್ತು 1024GB ಸ್ಟೋರೇಜ್ ರೂಪಾಂತರವನ್ನು ಸುಮಾರು 44,999 ರೂಗಳಿಗೆ ಬರುವ ನಿರೀಕ್ಷೆಗಳಿವೆ. ಮತ್ತೊಂದು ವಿಶೇಷತೆ ಅಂದ್ರೆ ಸಾಮಾನ್ಯವಾಗಿ ಮೊಟೊರೊಲಾ ತನ್ನ ಅಲ್ಟ್ರಾ ಸರಣಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡೋದಿಲ್ಲ ಆದ್ದರಿಂದ ಈ Motorola Edge 50 Ultra ಸ್ಮಾರ್ಟ್‌ಫೋನ್ ವಿಶೇಷ 5G ಸ್ಮಾರ್ಟ್‌ಫೋನ್ ಅಂದ್ರೆ ತಪ್ಪಿಲ್ಲ.
ಭಾರತದಲ್ಲಿ ಈ ಮುಂಬರಲಿರುವ Motorola Edge 50 Ultra ಸ್ಮಾರ್ಟ್ಫೋನ್ ಮಾದರಿಯು 6.7 ಇಂಚಿನ OLED ಡಿಸ್ಪ್ಲೇಯನ್ನು 144Hz ವರೆಗಿನ ರಿಫ್ರೆಶ್ ದರದೊಂದಿಗೆ ಪ್ಯಾಕ್ ಮಾಡುತ್ತದೆ. ಇದಲ್ಲದೆ ಇದು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಇದೆ ವರ್ಷ ಜಾಗತಿಕವಾಗಿ ಬಿಡುಗಡೆಯಾದ ಈ ಪ್ರಮುಖ ಸಾಧನದಿಂದ ನಿರೀಕ್ಷಿತ ಮಾನದಂಡಗಳನ್ನು ಪೂರೈಸುತ್ತದೆ.
ಫೋಟೋಗ್ರಾಫಿಗಾಗಿ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದ್ದು ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ ಬರುತ್ತದೆ. ಎರಡನೆಯದಾಗಿ ಇದರ 64MP ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು ಮ್ಯಾಕ್ರೋ ಲೆನ್ಸ್‌ನಂತೆ ದ್ವಿಗುಣಗೊಳ್ಳುವ 50MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್‌ನೊಂದಿಗೆ ಇರುತ್ತದೆ. ಅಲ್ಲದೆ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಕ್ಯಾಮೆರಾ ಹೊಂದಿರುವ ನಿರೀಕ್ಷೆಗಳಿವೆ.
ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಅದರ Snapdragon 8s Gen 3 ಚಿಪ್ ಅನ್ನು 16GB LPDDR5X RAM ಮತ್ತು 1TB UFS 4.0 ಸ್ಟೋರೇಜ್ ಪರಿಹಾರದಿಂದ ಬೆಂಬಲಿಸಲಾಗುತ್ತದೆ. ಅಲ್ಲದೆ ಉತ್ತಮ ಸೌಂಡ್ ಅನುಭವಕ್ಕಾಗಿ ಇದರಲ್ಲಿ Dolby Atmos ಅನ್ನು ಸಹ ನೀಡಲಾಗಿದೆ. ಇದು 125W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಇದರ ಹುಡ್ ಅಡಿಯಲ್ಲಿ ಸ್ಮಾರ್ಟ್ಫೋನ್ ಸುಮಾರು 4500mAh ಬ್ಯಾಟರಿಯೊಂದಿಗೆ ಅಲ್ಲದೆ 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಗಳಿವೆ.