ಮೊಟೊರೊಲಾ ಎಡ್ಜ್ ಸರಣಿಯಲ್ಲಿನ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ಮೊಟೊರೊಲಾ Motorola Edge 50 Pro ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಖಚಿತಪಡಿಸಿದೆ. ಅಮೇರಿಕಾದ ಈ ಸ್ಮಾರ್ಟ್‌ಫೋನ್ ತಯಾರಕರು Motorola Edge 50 Pro ಬಗ್ಗೆ ಹಲವಾರು ಪ್ರಮುಖ ವಿಶೇಷಣಗಳನ್ನು ಬಿಡುಗಡೆಗೆ ಮುಂಚಿತವಾಗಿ ಬಹಿರಂಗಪಡಿಸಿದ್ದಾರ ಇದರಲ್ಲಿ ಕ್ಯಾಮೆರಾ, ಡಿಸ್‌ಪ್ಲೇ ಮತ್ತು ಇತರ ವೈಶಿಷ್ಟ್ಯಗಳ ವಿವರಗಳು ಸೇರಿವೆ. ಇದರ ಬಗ್ಗೆ ಒಂದಿಷ್ಟು ನಿರೀಕ್ಷಿತ ಮಾಹಿತಿಯನ್ನು ಈ ಕೆಳಗೆ ನೋಡಬಹುದು.
ಇದರ ಕ್ಯಾಮೆರಾದೊಂದಿಗೆ ಹಲವಾರು AI ವೈಶಿಷ್ಟ್ಯಗಳನ್ನು ಭರವಸೆ ನೀಡುತ್ತಿದೆ. ಇದರಲ್ಲಿ ಫೋಟೋ ವರ್ಧನೆ ಮತ್ತು ಅಡಾಪ್ಟಿವ್ ಸ್ಟೆಬಿಲೈಸೇಶನ್ ವೈಶಿಷ್ಟ್ಯದೊಂದಿಗೆ ಅಲುಗಾಡುವ ಕೈಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. Motorola ಹಂಚಿಕೊಂಡಿರುವ ಚಿತ್ರಗಳ ಪ್ರಕಾರ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ Motorola ಹೆಸರಿನೊಂದಿಗೆ 3 Pantone ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದು ಯಾವುದೇ Motorola ಫೋನ್‌ಗೆ ಹೋಲುತ್ತದೆ. ಸ್ಮಾರ್ಟ್‌ಫೋನ್ ಬಲಭಾಗದಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್‌ಗಳನ್ನು ಮತ್ತು ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ.
ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರ ಸೋರಿಕೆಯ ಪ್ರಕಾರ Motorola Edge 50 Pro ಸ್ಮಾರ್ಟ್ಫೋನ್ 6.7 ಇಂಚಿನ 1.5K ಪೋಲೆಡ್ ಕರ್ವ್ ಡಿಸ್‌ಪ್ಲೇಯನ್ನು 144Hz ರಿಫ್ರೆಶ್ ರೇಟ್ ಮತ್ತು 2,000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿರುತ್ತದೆ. ಈ ಸ್ಮಾರ್ಟ್ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ 5 ರಕ್ಷಣೆಯನ್ನು ಒಳಗೊಂಡಿರುವ ಸಾಧ್ಯತೆಯಿದೆ. ಸ್ಮಾರ್ಟ್ಫೋನ್ Qualcomm Snapdragon 8s Gen 3 ಪ್ರೊಸೆಸರ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ ಮತ್ತು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
Motorola Edge 50 Pro ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) 13MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 10MP ಟೆಲಿಫೋಟೋ ಲೆನ್ಸ್ ಬೆಂಬಲದೊಂದಿಗೆ 50MP AI ಪ್ರೈಮರಿ ಕ್ಯಾಮೆರಾ ಸೆನ್ಸರ್ ಒಳಗೊಂಡಂತೆ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಸ್ಮಾರ್ಟ್‌ಫೋನ್ ಬರುವ ಸಾಧ್ಯತೆಯಿದೆ. 125W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ Motorola Edge 50 Pro ಸ್ಮಾರ್ಟ್ಫೋನ್ ಸುಮಾರು 4500mAh ಬ್ಯಾಟರಿಯಿಂದ ಚಾಲಿತವಾಗುವ ನಿರೀಕ್ಷೆಯಿದೆ.
Also Read: Best Air Cooler: ಈ ಬೇಸಿಗೆಯಲ್ಲಿ ಎಸಿಯಂತೆ ತಂಪಾಗಿಸು ಈ ಬೆಸ್ಟ್ ಏರ್ ಕೂಲರ್‌ಗಳ ಮೇಲೆ ಭಾರಿ ರಿಯಾಯಿತಿಗಳು!
ಮುಂಬರುವ Motorola Edge 50 Pro ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ವೈಶಿಷ್ಟ್ಯಗಳನ್ನು ಕಾಣಬಹುದು. ಇದು ಯೋಗ್ಯ ವಿನ್ಯಾಸ ಮತ್ತು ಪವರ್ಫುಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಗ್ರಾಹಕರು ಸ್ಮಾರ್ಟ್‌ಫೋನ್‌ನಲ್ಲಿ ವೇಗದ ವೈರ್ಡ್ ಚಾರ್ಜಿಂಗ್ ಅಥವಾ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಪಡೆದರೆ ಅದು ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ ಎಂದು ಸಾಬೀತುಪಡಿಸಬಹುದು. ಸ್ಮಾರ್ಟ್ ಫೋನ್ ಬೆಲೆ 30,000 ಸಾವಿರ ರೂಗಿಂತ ಕಡಿಮೆ ಇರಬಹುದೆಂದು ನಂಬಲಾಗಿದೆ. ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮತ್ತು ಮೊಟೊರೊಲಾ ಸೈಟ್ ಜೊತೆಗೆ ಹಲವಾರು ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಮೊಟೊರೊಲಾ ದೃಢಪಡಿಸಿದೆ.