Motorola Edge 50 Neo ಇಂದು ಮೊದಲ ಮಾರಾಟ! ಫ್ಲಿಪ್‌ಕಾರ್ಟ್‌ನಿಂದ ಭಾರಿ ಡಿಸ್ಕೌಂಟ್‌ಗಳೊಂದಿಗೆ ಲಭ್ಯವಿದೆ

Motorola Edge 50 Neo ಇಂದು ಮೊದಲ ಮಾರಾಟ! ಫ್ಲಿಪ್‌ಕಾರ್ಟ್‌ನಿಂದ ಭಾರಿ ಡಿಸ್ಕೌಂಟ್‌ಗಳೊಂದಿಗೆ ಲಭ್ಯವಿದೆ
HIGHLIGHTS

Motorola Edge 50 Neo ಮೊದಲ ಮಾರಾಟವನ್ನು ಇಂದು 24ನೇ ಸೆಪ್ಟೆಂಬರ್ 2024 ಮಧ್ಯಾಹ್ನ 12:00 ಗಂಟೆಗೆ ಶುರುವಾಗಲಿದೆ.

ಸ್ಮಾರ್ಟ್ಫೋನ್ ಪ್ರಸ್ತುತ ಒಂದೇ ಒಂದು ರೂಪಾಂತರದಲ್ಲಿ ಬಿಡುಗಡೆಯಾಗಿದ್ದು 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ.

8GB RAM ಮತ್ತು 256GB ಸ್ಟೋರೇಜ್ ಆರಂಭಿಕ ಬೆಲೆ ರೂ 23,999 ಕ್ಕೆ ಪಟ್ಟಿಮಾಡಲಾಗಿದೆ.

ಭಾರತದಲ್ಲಿ ಮೊಟೊರೊಲಾ ಕಂಪನಿ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ Motorola Edge 50 Neo ಮೊದಲ ಮಾರಾಟವನ್ನು ಇಂದು 24ನೇ ಸೆಪ್ಟೆಂಬರ್ 2024 ಮಧ್ಯಾಹ್ನ 12:00 ಗಂಟೆಗೆ ಶುರುವಾಗಲಿದೆ. ಈ ಸ್ಮಾರ್ಟ್ಫೋನ್ ಭಾರಿ ಬ್ಯಾಂಕ್ ಆಫರ್ಗಳೊಂದಿಗೆ ಉತ್ತಮ ಡಿಸ್ಕೌಂಟ್ ಅನ್ನು ಸಹ ಪಡೆಯುತ್ತಿದೆ. ಅಲ್ಲದೆ ಸ್ಮಾರ್ಟ್ಫೋನ್ ಪ್ರಸ್ತುತ ಒಂದೇ ಒಂದು ರೂಪಾಂತರದಲ್ಲಿ ಬಿಡುಗಡೆಯಾಗಿದ್ದು 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ಈ ಸ್ಮಾರ್ಟ್ಫೋನ್ ವಿಶೇಷತೆಗಳನ್ನು ನೋಡುವುದಾದರೆ pOLED AMOLED LTPO ಡಿಸ್ಪ್ಲೇಯೊಂದಿಗೆ 50MP ಪ್ರೈಮರೀ ಕ್ಯಾಮೆರಾ OIS ಬೆಂಬಲದೊಂದಿಗೆ ಬರುತ್ತದೆ.

ಭಾರತದಲ್ಲಿ Motorola Edge 50 Neo ಬೆಲೆ ಮತ್ತು ಆಫರ್ಗಳು

ಈ ಲೇಟೆಸ್ಟ್ Motorola Edge 50 Neo ಸ್ಮಾರ್ಟ್ಫೋನ್ ಕಳೆದ ತಿಂಗಳು ಬಿಡುಗಡೆಯಾಗಿದ್ದು ಇಂದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಿಂದ (Flipkart) ಮೂಲಕ ಮೊದಲ ಮಾರಾಟಕ್ಕೆ ಸಿದ್ದವಾಗಿದೆ. ಇದರ ಆರಂಭಿಕ ಬೆಲೆ ರೂ 23,999 ಕ್ಕೆ ಪಟ್ಟಿಮಾಡಲಾಗಿದೆ. ಈ ಸ್ಮಾರ್ಟ್ಫೋನ್ 8GB RAM ಮತ್ತು 256GB ಸಂಗ್ರಹಣೆಯೊಂದಿಗೆ ರೂಪಾಂತರದ ಬೆಲೆಯಾಗಿದೆ.

motorola edge 50 neo first sale today on flipkart
motorola edge 50 neo first sale today on flipkart

ಈ ಫೋನ್ ಅನ್ನು ಖರೀದಿಸುವಾಗ HDFC ಬ್ಯಾಂಕ್ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸುವವರಿಗೆ 1,500 ರೂ.ವರೆಗೆ ರಿಯಾಯಿತಿ ಸಿಗುತ್ತದೆ. ನೀವು ವಿನಿಮಯ ಕೊಡುಗೆಯ ಪ್ರಯೋಜನವನ್ನು ಸಹ ಪಡೆಯಬಹುದು. ಈ Motorola Edge 50 Neo ಫೋನ್ ಅನ್ನುನೀವು Pantone Griselle, Pantone Latte, Pantone Nautical Blue ಮತ್ತು Pantone Poinciana ಎಂಬ ನಾಲ್ಕು ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು.

Also Read: ನೀವು ಅಪ್ಪಿತಪ್ಪಿ SIM Card ಸಂಬಧಿಸಿದ ಈ ನಿಯಮ ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತೆ!

Motorola Edge 50 Neo ಡಿಸ್ಪ್ಲೇ ಮತ್ತು ಕ್ಯಾಮೆರಾ ಮಾಹಿತಿ:

Motorola Edge 50 Neo ಫೋನ್ 120Hz ರಿಫ್ರೆಶ್ ರೇಟ್ ಮತ್ತು HDR10+ ಬೆಂಬಲದೊಂದಿಗೆ 6.4 ಇಂಚಿನ LTPO P-OLED ಡಿಸ್ಪ್ಲೇ ಹೊಂದಿದೆ. ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಈ ಸ್ಕ್ರೀನ್ ಮೇಲೆ 3000nits ಪೀಕ್ ಬ್ರೈಟ್‌ನೆಸ್‌ನೊಂದಿಗೆ ಒದಗಿಸಲಾಗಿದೆ. Motorola Edge 50 Neo ಕ್ಯಾಮೆರಾ ಸೆಟಪ್ ಕುರಿತು ಮಾತನಾಡುವುದಾದರೆ ಫೋನ್ ಹಿಂದಿನ ಪ್ಯಾನೆಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು 50MP ಪ್ರೈಮರಿ ಮತ್ತು 10MP ಟೆಲಿಫೋಟೋ ಮತ್ತು 13MP ಅಲ್ಟ್ರಾವೈಡ್ ಸಂವೇದಕಗಳೊಂದಿಗೆ ಹೊಂದಿದೆ. ಇದಲ್ಲದೆ Motorola Edge 50 Neo ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ಒದಗಿಸಲಾಗಿದೆ.

Motorola Edge 50 Neo ಹಾರ್ಡ್ವೇರ್ ಮತ್ತು ಬ್ಯಾಟರಿಯ ಮಾಹಿತಿ:

ಈ Motorola Edge 50 Neo ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಅನ್ನು ಹೊಂದಿದೆ. ಅಲ್ಲದೆ 8GB LPDDR4X RAM ಮತ್ತು 256GB UFS 2.2 ಸ್ಟೋರೇಜ್ ಜೊತೆಗೆ ಆಂಡ್ರಾಯ್ಡ್ 14 ಆಧಾರಿತ ಸಾಫ್ಟ್‌ವೇರ್ ಸ್ಕಿನ್ ಲಭ್ಯವಿದೆ. ಇದು ಬಲವಾದ ನಿರ್ಮಾಣ ಗುಣಮಟ್ಟದ ಹಕ್ಕುಗಳೊಂದಿಗೆ ಮಿಲಿಟರಿ ದರ್ಜೆಯ ಪ್ರಮಾಣೀಕರಣವನ್ನು ನೀಡುತ್ತದೆ. Motorola Edge 50 Neo ಸ್ಮಾರ್ಟ್ಫೋನ್ 4310mAh ಬ್ಯಾಟರಿಯನ್ನು 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo