Motorola Edge 50 Neo ಸ್ಮಾಟ್ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

Motorola Edge 50 Neo ಸ್ಮಾಟ್ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
HIGHLIGHTS

Motorola Edge 50 Neo ಸ್ಮಾಟ್ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.

Motorola Edge 50 Neo ಸ್ಮಾಟ್ಫೋನ್ MediaTek Dimensity 7300 ಚಿಪ್‌ನೊಂದಿಗೆ 23,999 ರೂಗಳಿಗೆ ಬಿಡುಗಡೆ.

Motorola Edge 50 Neo ಸ್ಮಾಟ್ಫೋನ್ AI Magic Eraser, AI Magic Editor, AI Photo Unblur ನಂತಹ ಇಂಟ್ರೆಸ್ಟಿಂಗ್ ಕ್ಯಾಮೆರಾ ಫೀಚರ್ ಹೊಂದಿದೆ.

ಭಾರತದಲ್ಲಿ ಮೊಟೊರೊಲಾ ಕಂಪನಿ ಈಗ ತನ್ನ ಲೇಟೆಸ್ಟ್ Motorola Edge 50 Neo ಸ್ಮಾಟ್ಫೋನ್ ಅನ್ನು 32MP ಸೆಲ್ಫಿ ಕ್ಯಾಮೆರಾ, MediaTek Dimensity 7300 ಚಿಪ್ ಮತ್ತು AI Magic Eraser, AI Magic Editor, AI Photo Unblur ನಂತಹ ಇಂಟ್ರೆಸ್ಟಿಂಗ್ ಕ್ಯಾಮೆರಾ ಫೀಚರ್ಗಳೊಂದಿಗೆ ಸುಮಾರು 23,999 ರೂಗಳಿಗೆ ಬಿಡುಗಡೆಯಾಗಿದೆ. ಇದನ್ನು ಪ್ರತ್ಯೇಕವಾಗಿ ಬಳಕೆದಾರರು ಫ್ಲಿಪ್‌ಕಾರ್ಟ್ (Flipkart) ಮೂಲಕ ಖರೀದಿಗೆ ಲಭ್ಯವಿರುತ್ತದೆ. ನೀವು ಈ ಲೇಟೆಸ್ಟ್ Motorola Edge 50 Neo ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಲೇಖನ ನಿಮಗಾಗಲಿದೆ. Motorola Edge 50 Neo ಸ್ಮಾಟ್ಫೋನ್ ಬಿಡುಗಡೆಯ ಆಫರ್ ಬೆಲೆಯೋಂದಿಗೆ ಫೀಚರ್ ಮತ್ತು ವಿಶೇಷಣಗಳನ್ನು ತಿಳಿಯಿರಿ.

ಭಾರತದಲ್ಲಿ Motorola Edge 50 Neo Offer Price and Availability

ಇಂದು ಬಿಡುಗಡೆಯಾದ Moto Edge 50 Neo ಸ್ಮಾಟ್ಫೋನ್ ಕೇವಲ ಒಂದೇ ಒಂದು ರೂಪಾಂತರದಲ್ಲಿ ಬಿಡುಗಡೆಯಾಗಿದ್ದು 8GB RAM ಮತ್ತು 256GB ಸ್ಟೋರೇಜ್‌ ಬಿಡುಗಡೆಯ ಆಫರ್ ಜೊತೆಗೆ ಕೇವಲ 22,999 ರೂಗಳಿಗೆ ಲಭ್ಯವಿದೆ. ಈ Motorola Edge 50 Neo ಮೊದಲ ವಿಶೇಷ ಮಾರಾಟವನ್ನು ಇಂದಿನಿಂದ ಅಂದ್ರೆ 24ನೇ ಸೆಪ್ಟೆಂಬರ್ 2024 ರಂದು 12:00pm ಗಂಟೆಗೆ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ (Flipkart) ಮೂಲಕ ಖರೀದಿಸಲು ಲಭ್ಯವಿದೆ.

ಈ Motorola Edge 50 Neo ಸ್ಮಾರ್ಟ್ಫೋನ್ ಬಿಡುಗಡೆಗೆ ಕೊಡುಗೆಗಳ ಭಾಗವಾಗಿ ಬಳಕೆದಾರರು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ದಾರರು 1,000 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಸ್ಮಾರ್ಟ್‌ಫೋನ್ ನಾಟಿಕಲ್ ಬ್ಲೂ, ಲ್ಯಾಟೆ, ಗ್ರಿಸೈಲ್ಲೆ ಮತ್ತು ಪೊಯಿನ್ಸಿಯಾನಾ ಎಂಬ 4 ಪ್ಯಾಂಟೋನ್ ಪ್ರಮಾಣೀಕೃತ ಬಣ್ಣಗಳೊಂದಿಗೆ ವೆಜಿಟೇರಿಯನ್ ಸ್ಕಿನ್ ಫಿನಿಷ್ ಹೊಂದಿದೆ.

Also Read: Amazon Festival Sale 2024 ಡೇಟ್ ಫಿಕ್ಸ್! ಮುಂಬರುವ ಭರ್ಜರಿ ಆಫರ್ ಮತ್ತು ಡೀಲ್‌ಗಳು ಬಹಿರಂಗ!

Moto Edge 50 Neo ಸ್ಮಾಟ್ಫೋನ್ ವಿಶೇಷಣಗಳೇನು?

ಈ ಲೇಟೆಸ್ಟ್ Motorola Edge 50 Neo ಸ್ಮಾಟ್ಫೋನ್ 6.4 ಇಂಚಿನ 1.5K ಪೋಲ್ಡ್ LTPO ಡಿಸ್ಪ್ಲೇಯೊಂದಿಗೆ ಬರುತ್ತದೆ. pyanalಫಲಕವು 120Hz ರಿಫ್ರೆಶ್ ರೇಟ್‌ಗೆ ಬೆಂಬಲವನ್ನು ಹೊಂದಿದೆ ಮತ್ತು 3,000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಸ್ಕ್ರೀನ್ ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲ್ಪಟ್ಟಿದೆ. Motorola Edge 50 Neo ಕ್ಯಾಮರಾ ಮುಂಭಾಗದಲ್ಲಿ ಸ್ಮಾರ್ಟ್ಫೋನ್ OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ Sony LYTIA 700C ಪ್ರೈಮರಿ ಸೆನ್ಸರ್ 13MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್/ಮ್ಯಾಕ್ರೋ ಕ್ಯಾಮರಾ ಮತ್ತು 3x ಆಪ್ಟಿಕಲ್ ಜೂಮ್ನೊಂದಿಗೆ 10MP ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ ಇದು 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Motorola Edge 50 Neo 32MP Selfie camera launched in India
Motorola Edge 50 Neo 32MP Selfie camera launched in India

Motorola Edge 50 Neo ಕಾರ್ಯಕ್ಷಮತೆಗಾಗಿ ಸ್ಮಾರ್ಟ್ಫೋನ್ MediaTek Dimensity 7300 ಚಿಪ್ ಮತ್ತು LPDDR4x RAM ಮತ್ತು UFS 3.1 ಸ್ಟೋರೇಜ್ ಬೆಂಬಲಿತವಾಗಿದೆ. ಕಂಪನಿ ಈ ಫೋನಿಗೆ 5 ವರ್ಷಗಳ ಆಪರೇಟಿಂಗ್ ಸಿಸ್ಟಮ್ ಮತ್ತು ಸೆಕ್ಯೂರಿಟಿ ಅಪ್ಡೇಟ್ ಭರವಸೆ ನೀಡುತ್ತಿದೆ. ಈ Motorola Edge 50 Neo ಸ್ಮಾರ್ಟ್ಫೋನ್ 68W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4310mAh ಬ್ಯಾಟರಿಯನ್ನು ಹೊಂದಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68-ರೇಟೆಡ್ ಆಗಿದೆ. ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳು ಮತ್ತು ಬಯೋಮೆಟ್ರಿಕ್ಸ್‌ಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ನೀಡಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo