Motorola Edge 50 5G launched in India 2024: ಮೊಟೊರೊಲಾ ಭಾರತದಲ್ಲಿ ತನ್ನ ಹೊಸ Motorola Edge 50 5G ಸ್ಮಾರ್ಟ್ಫೋನ್ ಅನ್ನು 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದಂತಹ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಸುಮಾರು 25,999 ರೂಗಳಿಗೆ ನೆನ್ನೆ ಅಂದ್ರೆ 1ನೇ ಆಗಸ್ಟ್ 2024 ರಂದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ Motorola Edge 50 ಸ್ಮಾರ್ಟ್ಫೋನ್ ತೆಳುವಾದ MIL-810H ಮಿಲಿಟರಿ-ದರ್ಜೆಯೊಂದಿಗೆ ರಗಡ್ ಲುಕ್ ಮತ್ತು ವೆಜಿಟೇರಿಯನ್ ಲೆದರ್ ಸ್ಯೂಡ್ ಫಿನಿಶ್ ಡಿಸೈನಿಂಗ್‌ನೊಂದಿಗೆ ಅನಾವರಣಗೊಂಡಿದೆ. Motorola Edge 50 5G ನೀವು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಟಾಪ್ ಹೈಲೈಟ್ ಫೀಚರ್ಗಾಲ ಬಗ್ಗೆ ಒಮ್ಮೆ ಕಣ್ಣಾಡಿಸಿ ತಿಳಿದುಕೊಳ್ಳಿ.
Also Read: ಅಮೆಜಾನ್‌ನಲ್ಲಿ 55,000 ಸಾವಿರ ರೂಗಳ Smartphone ಆರ್ಡರ್! ಆದರೆ ಬಾಕ್ಸ್ ತೆರೆದಾಗ ತಲೆ ತಿರುಗುವ ಶಾಕ್
Motorola Edge 50 5G ಸ್ಮಾರ್ಟ್ಫೋನ್ ಸೋನಿಯ LYTIA 700C ಲೆನ್ಸ್‌ನೊಂದಿಗೆ ವೃತ್ತಿಪರ ದರ್ಜೆಯ ಕ್ಯಾಮೆರಾವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಮಿಲಿಟರಿ ದರ್ಜೆಯ ವಿನ್ಯಾಸವನ್ನು ಹೊಂದಿರುವ ಈ ಸಾಧನವು ಒತ್ತಡ, ಧೂಳು, ಹೆಚ್ಚಿನ ತಾಪಮಾನ ಮತ್ತು ಮಂಜನ್ನು ಸಹ ತಡೆದುಕೊಳ್ಳಬಲ್ಲದು. ನೀರು ಕೂಡ ಈ ಫೋನ್‌ಗೆ ಹಾನಿ ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ. Motorola Edge 50 5G ಸ್ಮಾರ್ಟ್ಫೋನ್ ಉತ್ತಮ ಹೀಟ್ ಸಿಂಕ್ ಅನ್ನು ಹೊಂದಿದ್ದು ಇದು ಫೋನ್ ಸ್ಫೋಟಗೊಳ್ಳುವ ಅಪಾಯವನ್ನು ಬಹುತೇಕವಾಗಿ ನಿವಾರಿಸುತ್ತದೆ.
ಭಾರತದಲ್ಲಿ ನೆನ್ನೆ ಬಿಡುಗಡೆಯಾದ Motorola Edge 50 ಸ್ಮಾರ್ಟ್ಫೋನ್ ಬೆಲೆ ಮತ್ತು ಬೆಲೆ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕಾಗಿ ರೂ 27,999 ರಿಂದ ಪ್ರಾರಂಭವಾಗುತ್ತದೆ. ಆಕ್ಸಿಸ್ ಬ್ಯಾಂಕ್ ಸೇರಿದಂತೆ ಆಯ್ದ ಕಾರ್ಡ್‌ಗಳನ್ನು ಬಳಸಿಕೊಂಡು ಗ್ರಾಹಕರು ರೂ 2,000 ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಅಷ್ಟೇ ಅಲ್ಲ ಕಂಪನಿಯು 2,000 ರೂಪಾಯಿಗಳ ವಿನಿಮಯ ಬೋನಸ್ ಅನ್ನು ಸಹ ನೀಡುತ್ತಿದೆ. ಇದು ಫೋನ್‌ನ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. Motorola Edge 50 ಸ್ಮಾರ್ಟ್ಫೋನ್ ಇದೆ 8ನೇ ಆಗಸ್ಟ್ 2024 ರಿಂದ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ. ಈ ಎರಡೂ ಕೊಡುಗೆಗಳೊಂದಿಗೆ ನೀವು ಈ ಸ್ಮಾರ್ಟ್ಫೋನ್ ಅನ್ನು ಕೇವಲ 23,999 ರೂಗಳಲ್ಲಿ ನಿಮ್ಮದಾಗಿಸಿಕೊಳ್ಳಬಹುದು.
Motorola Edge 50 ಸ್ಮಾರ್ಟ್ಫೋನ್ 6.7 ಇಂಚಿನ 1.5K ಸೂಪರ್ HD ಪೋಲೆಡ್ ಕರ್ವ್ ಡಿಸ್ಪ್ಲೇ ಜೊತೆಗೆ 120 Hz ರಿಫ್ರೆಶ್ ದರ ಮತ್ತು 1,900 ನಿಟ್ಸ್ ಹೊಳಪನ್ನು ಹೊಂದಿದೆ. ಇದು SGS ಬ್ಲೂ ಲೈಟ್ ರಿಡಕ್ಷನ್ ಪ್ರಮಾಣೀಕರಣದೊಂದಿಗೆ HDR10+ ಬೆಂಬಲವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50MP ಸೋನಿ-ಲಿಟಿಯಾ 700C ಪ್ರೈಮರಿ ಸೆನ್ಸರ್ 3x ಆಪ್ಟಿಕಲ್ ಜೂಮ್‌ನೊಂದಿಗೆ 10MP ಟೆಲಿಫೋಟೋ ಲೆನ್ಸ್ ಮತ್ತು 13MP ಅಲ್ಟ್ರಾ-ವೈಡ್ ಲೆನ್ಸ್ ಒಳಗೊಂಡಿದೆ. ಕೊನೆಯದಾಗಿ ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ 32MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
Motorola Edge 50 ಸ್ಮಾರ್ಟ್ಫೋನ್ Qualcomm Snapdragon 7 Gen 1 AE ಅಂದರೆ ಆಕ್ಸಿಲರೇಟೆಡ್ ಎಡಿಷನ್ ಚಿಪ್‌ಸೆಟ್ ಅನ್ನು ಹೊಂದಿದ್ದು 8GB LPDDR4X RAM ಮತ್ತು 256GB ವರೆಗೆ ಸ್ಟೋರೇಜ್ ಅನ್ನು ಸ್ಮಾರ್ಟ್ಫೋನ್ ಹೊಂದಿದೆ. ಈ ಸ್ಮಾರ್ಟ್ಫೋನ್ ನಿಮಗೆ ಆಂಡ್ರಾಯ್ಡ್ 14 ಆಧಾರಿತ HelloUI ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ Motorola Edge 50 ಸ್ಮಾರ್ಟ್ಫೋನ್ 68W ಟರ್ಬೋಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ 5000 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು IP68 ರೇಟ್ ಆಗಿದೆ ಮತ್ತು 5G, 4G LTE, Wi-Fi 6E, ಬ್ಲೂಟೂತ್ 5.2, NFC, GPS ಮತ್ತು USB ಟೈಪ್-C ಸಂಪರ್ಕವನ್ನು ನೀಡುತ್ತದೆ.