ಮೋಟೋರೋಲಾ ಭಾರತದಲ್ಲಿ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ಕೊಡುಗೆಯಾಗಿ Motorola Edge 40 Neo 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಮೋಟೋರೋಲಾ ಈ ವರ್ಷದ ಆರಂಭದಲ್ಲಿ ಈಗಾಗಲೇ Motorola Edge 40 ಸರಣಿಯಲ್ಲಿ ಫೋನ್ ಒಂದನ್ನು ಯಶಸ್ವಿಯಾದ ನಂತರ ಈಗ ಭಾರತದಲ್ಲಿ ಈ ನಿಯೋ ಫೋನ್ ಅನ್ನು ಅದ್ದೂರಿಯ ಫೀಚರ್ಗಳೊಂದಿಗೆ ಪರಿಚಯಿಸಿದೆ. ಅಲ್ಲದೆ ಈ Motorola Edge 40 Neo ಈ ಸ್ಮಾರ್ಟ್ಫೋನ್ ಹೆಚ್ಚು ಕೈಗೆಟುಕುವ ಆಯ್ಕೆಯಾಗಿದೆ. ಅಲ್ಲದೆ ಇದರಲ್ಲಿ 144Hz ಸ್ಕ್ರೀನ್, ದೊಡ್ಡ 5000mAh ಬ್ಯಾಟರಿಯೊಂದಿಗೆ 12GB RAM ಮತ್ತು 5G ನಂತಹ ಕೆಲವು ಕೂಲ್ ಫೀಚರ್‌ಗಳನ್ನು ಪ್ಯಾಕ್ ಮಾಡುತ್ತದೆ.
ಹೊಚ್ಚಹೊಸ Moto Edge 40 Neo ಸ್ಮಾರ್ಟ್ಫೋನ್ IP68 ಅಂಡರ್ವಾಟರ್ ರಕ್ಷಣೆಯೊಂದಿಗೆ 6.55 ಇಂಚಿನ pOLED 10-ಬಿಟ್ ಸ್ಕ್ರೀಮ್ ಅನ್ನು ಹೊಂದಿದೆ. ಇದು 144Hz ರಿಫ್ರೆಶ್ ದರವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಪವರ್ ಮಾಡುವುದು MediaTek ಡೈಮೆನ್ಸಿಟಿ 7030 ಪ್ರೊಸೆಸರ್ ಆಗಿದೆ. ಇದು 12GB ಯ RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಜೋಡಿಯಾಗಿದೆ. ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 13-ಆಧಾರಿತ ಸ್ಕಿನ್‌ನೊಂದಿಗೆ ಬಾಕ್ಸ್‌ನಿಂದ ಹೊರಗಿದೆ ಮತ್ತು ಗಮನಾರ್ಹವಾದ 5000mAh ಬ್ಯಾಟರಿಯನ್ನು 68W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಒಳಗೊಂಡಿರುವ 50MP ಪ್ರೈಮರಿ ಶೂಟರ್ ಮತ್ತು 13MP ಅಲ್ಟ್ರಾ-ವೈಡ್ ಕ್ಯಾಮೆರಾ ಸೆನ್ಸಾರ್ ಜೊತೆಗೆ ಡೆಪ್ತ್ ಮತ್ತು ಮ್ಯಾಕ್ರೋ ಮೋಡ್ ಪವರ್‌ಹೌಸ್ ಅನ್ನು ಹೊಂದಿದೆ. ಮುಂಭಾಗದಲ್ಲಿ 32MP ಕ್ಯಾಮೆರಾವು ನಿಮ್ಮ ಸೆಲ್ಫಿ ಅಗತ್ಯಗಳನ್ನು ಪೂರೈಸುತ್ತದೆ. ಈ ಸ್ಮಾರ್ಟ್‌ಫೋನ್ ಹೆಚ್ಚುವರಿ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಸಂಯೋಜಿಸುತ್ತದೆ. ನೀರು ಮತ್ತು ಧೂಳಿನ ನಿರೋಧಕತೆಗಾಗಿ IP68 ರೇಟಿಂಗ್ ಅನ್ನು ಹೊಂದಿದೆ ಮತ್ತು HDR10+, Dolby Atmos ಆಡಿಯೊ ಮತ್ತು ತಲ್ಲೀನಗೊಳಿಸುವ Moto Spatial ವಾಯ್ಸ್ ಅನುಭವವನ್ನು ಬೆಂಬಲಿಸುತ್ತದೆ.
8GB RAM ಮತ್ತು 128GB ಸಂಗ್ರಹದೊಂದಿಗೆ ಮೂಲ ಮಾದರಿಯು ರೂ. 23,999 ರೂಗಳಾಗಿದೆ. ಅಲ್ಲದೆ ನಿಮಗೆ ಮತ್ತಷ್ಟು ಪವರ್ ಬೇಕಿದ್ದರೆ ಫೋನ್ 12GB RAM ಮತ್ತು 256GB ಸ್ಟೋರೇಜ್ ನಿಮಗೆ 25,999 ರೂಗಳಿಗೆ ಲಭ್ಯವಿದೆ. ಆಸಕ್ತರು ನೀವು ಇದರ ಆರಂಭಿಕ ವೇರಿಯೆಂಟ್ ಅನ್ನು ಅದ್ದೂರಿಯ ಬ್ಯಾಂಕ್ ರಿಯಾಯಿತಿ ಮತ್ತು ಆಫರ್ ಜೊತೆಗೆ ಕೇವಲ ರೂ. 20,999 ರೂಗಳಿಗೆ ಖರೀದಿಸಬಹುದು. ಈ Motorola Edge 40 Neo ಸ್ಮಾರ್ಟ್ಫೋನ್ ಸೆಪ್ಟೆಂಬರ್ 28 ರಿಂದ ಸಂಜೆ 7:00pm ಗಂಟೆಗೆ ಮೊದಲ ಮಾರಾಟ ಶುರುವಾಗಲಿದೆ. ಇದು ಫ್ಲಿಪ್‌ಕಾರ್ಟ್, ಮೊಟೊರೊಲಾ ವೆಬ್‌ಸೈಟ್ ಮತ್ತು ಮೊಬೈಲ್ ಸ್ಟೋರ್ಗಳಲ್ಲಿ ಲಭ್ಯವಿರುತ್ತದೆ.