Moto Edge 40: ಮೋಟೋರೋಲಾ ಭಾರತದಲ್ಲಿ ತನ್ನ Edge 40 ಅನ್ನು ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ. ಕಳೆದ ತಿಂಗಳು ಈ ಸ್ಮಾರ್ಟ್ಫೋನ್ ಅನ್ನು ಗ್ಲೋಬಲ್ ಲಾಂಚ್ ಮಾಡಲಾಗಿತ್ತು ಈಗ ಭಾರತದಲ್ಲಿ ಇದೆ 23ನೇ ಮೇ 2023 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಇದರಲ್ಲೂ ಸದ್ಯಕ್ಕೆ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.55 ಇಂಚಿನ ಫುಲ್ ಹೆಚ್‌ಡಿ+ ಫೋಲ್ಡ್ ಸ್ಕ್ರೀನ್ ಅನ್ನು ಹೊಂದಿದೆ. ಅಲ್ಲದೆ ಈ ಡಿಸ್ಪ್ಲೇ ನಿಮಗೆ 144Hz ರಿಫ್ರೆಶ್ ರೇಟ್, 360 Hz ಟಚ್ ಸ್ಯಾಂಪ್ಲಿಂಗ್ ರೇಟ್ ನೀಡಲಾಗಿದೆ. ಡಿಸ್ಪ್ಲೇ 1200 ನಿಟ್ಸ್ ಬ್ರೈಟ್ನೆಸ್ ಅನ್ನು ನೀಡುತ್ತದೆ, HDR10+ ಪ್ರಮಾಣೀಕರಿಸಲ್ಪಟ್ಟಿದ್ದು 100% DCI-P3 ಬಣ್ಣವನ್ನು ಹೊಂದಿದೆ. ಇದರ ಬಗ್ಗೆ ಮತ್ತಷ್ಟು ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳನ್ನು ಮುಂದೆ ತಿಳಿಯೋಣ.
ಈ ಮೋಟೋ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಔಟ್ ಬಾಕ್ಸ್ ಅನ್ನು ರನ್ ಮಾಡುತ್ತದೆ. ಈ ಫೋನ್ ಡೈಮೆನ್ಸಿಟಿ 8020 ಹೊಸ ಚಿಪ್‌ಸೆಟ್ ಅನ್ನು ಹೊಂದಿದೆ. Motorola Edge 40 ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳನ್ನು ಹೊಂದಿದೆ. ಇದರ ಪ್ರೈಮರಿ ಕ್ಯಾಮೆರಾವು f/1.4 ಅಪರ್ಚರ್, ಕ್ವಾಡ್-ಪಿಕ್ಸೆಲ್ ಬಿನ್ನಿಂಗ್ ಮತ್ತು OIS ಜೊತೆಗೆ 50MP ಸೆನ್ಸರ್ ಅನ್ನು ಒಳಗೊಂಡಿದೆ. ಇದರ ಸೆಕೆಂಡರಿ ಕ್ಯಾಮೆರಾವು 13MP ಅಲ್ಟ್ರಾ-ವೈಡ್ ಕ್ಯಾಮೆರಾವಾಗಿದ್ದು f/2.2 ಅಪರ್ಚರ್ ಮತ್ತು ಮ್ಯಾಕ್ರೋ ಆಯ್ಕೆಯನ್ನು ಹೊಂದಿದೆ. ಮೂರನೇ ಕ್ಯಾಮರಾ 2MP ಡೆಪ್ತ್ ಸೆನ್ಸಾರ್ ಆಗಿದೆ. ಹೆಚ್ಚುವರಿಯಾಗಿ ಇದರ ಮುಂಭಾಗದ ಸೆಲ್ಫಿ ಕ್ಯಾಮರಾ 32MP ಸೆನ್ಸರ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ ನಿಮಗೆ 4600mAh ಬ್ಯಾಟರಿಯನ್ನು ನೀಡುತ್ತದೆ ಅಲ್ಲದೆ 68W ಟರ್ಬೋಪವರ್ ವೇಗದ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
https://twitter.com/motorolaindia/status/1658015526101086209?ref_src=twsrc%5Etfw
ಈ ಹೊಸ Motorola Edge 40 ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಇದನ್ನು ಸುಮಾರು 54,190 ರೂಗಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ನಿಮಗೆ ಮೇಲೆ ತಿಳಿಸಿರುವಂತೆ ಇದೆ 23ನೇ ಮೇ 2023 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ನೆಬುಲಾ ಗ್ರೀನ್ ಮಟ್ಟಿಯೂ ಲೂನಾರ್ ಬ್ಲೂ ಮತ್ತು ನೈಟ್ ಬ್ಲಾಕ್ ಬಣ್ಣಗಳಲ್ಲಿ ಈ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ.