ಮೊಟೊರೊಲಾ ಅಮೆರಿಕ ಮತ್ತು ಕೆನಡಾದಲ್ಲಿ ತನ್ನ ಹೊಸ ಸ್ಮಾರ್ಟ್ಫೋನ್ ಮೊಟೊ ಝೆಡ್4 ಅನ್ನು ಪ್ರಾರಂಭಿಸಿದೆ. ಮುಂದಿನ ತಿಂಗಳು ಭಾರತದಲ್ಲಿ ಈ ಫೋನ್ ಅನ್ನು ಜೂನ್ 2019 ನಲ್ಲಿ ಬಿಡುಗಡೆ ಮಾಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್ ವಿಶೇಷತೆಯು ಅದರ 48MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಸೆನ್ಸರ್ ಒಳಗೊಂಡಿದೆ. ಈ ಫೋನ್ ಮೋಟೋ ಮಾಡ್ಗಳನ್ನು ಸಹ ಬೆಂಬಲಿಸುತ್ತದೆ. ಇದರೊಂದಿಗೆ 4GB ಯ RAM ಮತ್ತು 128GB ಸ್ಟೋರೇಜ್ ಇದರ ಬೆಲೆ $ 499 ಅಂದ್ರೆ ಭಾರತದಲ್ಲಿ ಸುಮಾರು 34,900 ರೂಪಾಯಿಗಳಿಗೆ ಲಭ್ಯವಿದೆ. ಭಾರತದಲ್ಲಿ ಈ ಫೋನ್ನ ಬೆಲೆ ಕೂಡ ಇದರ ಅಕ್ಕಪಕ್ಕ ಬರುವ ನಿರೀಕ್ಷೆಯಿದೆ. ಇದರ ಟೀಸರ್ ಮೊಟೊರೊಲಾ ತನ್ನ ಮೊಟೊರೊಲಾ ಯುಎಸ್ ವೆಬ್ಸೈಟಲ್ಲಿ ಟ್ವಿಟ್ ಮಾಡಿದೆ.
https://twitter.com/MotorolaUS/status/1134082140910567425?ref_src=twsrc%5Etfw
ಈ ಫೋನ್ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಡ್ಯುಯಲ್ ಸಿಮ್ ಸ್ಲಾಟ್ ಇದೆ. ಅಲ್ಲದೆ 6.4 ಇಂಚಿನ ಫುಲ್ ಎಚ್ಡಿ + ಓಲೆಡಿ ಡಿಸ್ಪ್ಲೇ 1080×2340 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಅದರ ಆಕಾರ ಅನುಪಾತವು 19.5: 9 ಆಗಿದೆ. ಈ ಫೋನ್ಗೆ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 675 ಪ್ರೊಸೆಸರ್ ಮತ್ತು 4GB ಯ RAM ಅಳವಡಿಸಲಾಗಿದೆ. ಈ ಫೋನ್ ಹಿಂಬದಿಯ ಕ್ಯಾಮೆರಾದೊಂದಿಗೆ ಬರುತ್ತದೆ. ಇದು 48 ಮೆಗಾಪಿಕ್ಸೆಲ್ ಹಿಂದಿನ ಸೆನ್ಸರ್ ಹೊಂದಿದೆ. ಇದರ ಅಪೆರ್ಚರ್ f / 1.7 ಒಳಗೊಂಡಿದೆ. ಈ ಕ್ಯಾಮೆರಾ ಫೇಸ್ ಡಿಟೆಕ್ಷನ್ ಆಟೋಫೊಕ್ಸ್ ಫೀಚರ್ಗಳೊಂದಿಗೆ ಬರುತ್ತದೆ. ಅದೇ ಸಮಯದಲ್ಲಿ ಈ ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಫೋನ್ 25 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾವನ್ನು ಹೊಂದಿದೆ. ಅದು f/ 2.0 ಅಪರ್ಚರೊಂದಿಗೆ ಬರುತ್ತದೆ.
ಈ ಸ್ಮಾರ್ಟ್ಫೋನ್ 128GB ಯ ಇಂಟರ್ನಲ್ ಸ್ಟೋರೇಜನ್ನು ಹೊಂದಿದೆ. ಇದಲ್ಲದೆ ನೀವು ಇದರಲ್ಲಿ ಅಷ್ಟೇ ಮಟ್ಟದ ಮೈಕ್ರೊ ಎಸ್ಡಿ ಕಾರ್ಡ್ 128GB ಬಳಸಿ ಸ್ಟೋರೇಜ್ ವಿಸ್ತರಿಸಿಕೊಳ್ಳಬವುದು. ಇದರಲ್ಲಿ 4G ಹಿಂದುಮುಂದಾಗಿ ವೈ-ಫೈ 802.11 a / b / g / n / AC, ಜಿಪಿಎಸ್, ಬ್ಲೂಟೂತ್ 5.0, NFC ಮತ್ತು ಆಯ್ಕೆಗಳನ್ನು ಯುಎಸ್ಬಿ ಟೈಪ್-ಸಿ ಸೇರಿದಂತೆ ಫೋನ್ ಕನೆಕ್ಟ್ ಮಾಡುತ್ತದೆ. ಈ ಫೋನ್ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ. ಫೋನ್ಗೆ ಪವರ್ ನೀಡಲು 3600mAh ಬ್ಯಾಟರಿಯನ್ನು ಒದಗಿಸಲಾಗಿದೆ. ಅದು 15W ಟರ್ಬೊವಾವರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.