ಜನಪ್ರಿಯ ಮೊಟೊರೊಲಾ ಕಂಪನಿ ಇಂದು ತನ್ನ ಲೇಟೆಸ್ಟ್ Moto X50 Ultra ಅನ್ನು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಈಗಾಗಲೇ ಬಿಡುಗಡೆಯಾಗಿರುವ ಸ್ಮಾರ್ಟ್ಫೋನ್ ಅನ್ನು ಈ ಸರಣಿಯ Moto Edge 50 Pro ಫೋನ್ ಮಾದರಿಯಲ್ಲೇ ಬಿಡುಗಡೆಗೊಳಿಸಿರುವುದನ್ನು ಕಾಣಲಾಗಿದೆ. ಯಾಕೆಂದರೆ ಅದೇ ಹಳೆಯ ಡಿಸೈನಿಂಗ್ ಮತ್ತು ಇಂಟರ್ನಲ್ ಹಾರ್ಡ್ವೇರ್ ಅನ್ನು ಹೊಂದಿರುವುದು ನೋಡಬಹುದು. Moto X50 Ultra ಕೇವಲ ಬಣ್ಣಗಳಲ್ಲಿ ಬದಲಾಗಿದ್ದು Snapdragon 8s Gen 3 ಚಿಪ್‌ಸೆಟ್‌ನಲ್ಲಿ ಇತ್ತೀಚಿನ ಆಂಡ್ರಾಯ್ಡ್ 14 ಜೊತೆಗೆ ಚಾಲನೆಯಲ್ಲಿದೆ. ಅಲ್ಲದೆ ಫೋನ್ ಮುಂಭಾಗದಲ್ಲಿ 144Hz ಡಿಸ್ಪ್ಲೇಯೊಂದಿಗೆ 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 50MP ಕ್ಯಾಮೆರಾವನ್ನು ಹೊಂದಿದೆ.
Also Read: 8GB RAM ಮತ್ತು 6000mAh ಬ್ಯಾಟರಿಯ iQOO Z9X 5G ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಮೊದಲಿಗೆ ಈ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತಾನಾಡುವುದಾದರೆ Moto X50 Ultra ಸ್ಮಾರ್ಟ್ಫೋನ್ ಅನ್ನು ಒಟ್ಟಾರೆಯಾಗಿ ನಿಮಗೆ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಇದರ 12GB RAM ಮತ್ತು 256GB ಸ್ಟೋರೇಜ್ ಸುಮಾರು 3,999 Yuan (ರೂ. 46,240) ಆಗಿದೆ. ಇದರ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ಸುಮಾರು 4,299 Yuan (ರೂ. 49,709) ಆಗಿದ್ದು ಕೊನೆಯದಾಗಿ ಇದರ 16GB RAM ಮತ್ತು 1024GB ಸ್ಟೋರೇಜ್ ಸುಮಾರು 4,699 Yuan (ರೂ. 54,334) ಆಗಿದೆ. ಪ್ರಸ್ತುತ Moto X50 Ultra ಸ್ಮಾರ್ಟ್ಫೋನ್ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಮಾತ್ರ ಖರೀದಿಸಲು ಲಭ್ಯವಿದೆ.
ಪ್ರಸ್ತುತ Moto X50 Ultra ಸ್ಮಾರ್ಟ್ಫೋನ್ ಕೇವಲ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು ಅಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿದೆ. ಭಾರತದಲ್ಲಿ Moto X50 Ultra ಬಿಡುಗಡೆ ಮತ್ತು ಬೆಲೆಯ ಬಗ್ಗೆ ಯಾವುದೇ ಮಾಹಿತಿಗಳನ್ನು ಕಂಪನಿ ಇನ್ನು ನೀಡಿಲ್ಲ. Moto X50 Ultra ಸ್ಮಾರ್ಟ್ಫೋನ್ ಬಗ್ಗೆ ಮಾಹಿತಿ ಬೇಕಿದ್ದರೆ ಸದಾ ಡಿಜಿಟ್ ಕನ್ನಡದ ಜೊತೆಗೆ ಕಾಯುತ್ತೀರಿ ಮಾಹಿತಿ ಬಂದ ತಕ್ಷಣ ನಿಮಗೆ ಮಾಹಿತಿಯನ್ನು ನೀಡಲಾಗುವುದು.
ಮೊದಲಿಗೆ ಈ ಸ್ಮಾರ್ಟ್ಫೋನ್ ಡಿಸ್ಪ್ಲೇ ಬಗ್ಗೆ ನೋಡುವುದುದಾದರೆ ಸ್ಮಾರ್ಟ್ಫೋನ್ 6.7 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಇದು 2712 x 1220 ಪಿಕ್ಸೆಲ್ಗಳ ರೆಸಲ್ಯೂಶನ್ ಅನ್ನು ಹೊಂದಿದೆ. ಈ ಸ್ಕ್ರೀನ್ 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಮತ್ತು 10-ಬಿಟ್ ಬಣ್ಣದ ಡೆಪ್ತ್ ನೀಡುತ್ತದೆ. ಅಲ್ಲದೆ HDR 10+ ಮತ್ತು DC ಮಬ್ಬಾಗಿಸುವಿಕೆ ಅತ್ಯುತ್ತಮ ಸಾಮರ್ಥ್ಯಗಳನ್ನು ಹೊಂದಿದ್ದು ಮತ್ತು 2500 nits ವರೆಗೆ ಗರಿಷ್ಠ ಹೊಳಪನ್ನು ತಲುಪಬಹುದು.
ಸ್ಮಾರ್ಟ್ಫೋನ್ f/1.6 ಅಪರ್ಚರ್‌ನೊಂದಿಗೆ 50MP ಪ್ರೈಮರಿ ಕ್ಯಾಮೆರಾ ಮತ್ತೊಂದು OIS ಜೊತೆಗೆ 122-ಡಿಗ್ರಿ ಹೊಂದಿರುವ ಫೀಲ್ಡ್ ಆಫ್ ವ್ಯೂ 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಕೊನೆಯಾದಾಗಿ ಮ್ಯಾಕ್ರೋ ಆಯ್ಕೆಯನ್ನು ಒಳಗೊಂಡಿರುವ f/2.0 ಅಪರ್ಚರ್ ಅನ್ನು ಒಳಗೊಂಡಿದೆ. ಅಲ್ಲದೆ ನಿಮಗೆ ಅದರಲ್ಲಿ 3X ಜೂಮ್ ಮತ್ತು f/2.4 ಅಪರ್ಚರ್‌ನೊಂದಿಗೆ 64MP ಟೆಲಿಫೋಟೋ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದರಲ್ಲಿ ನಿಮಗೆ 100x ಸೂಪರ್ ಜೂಮ್ ಅನ್ನು ಸಹ ಬೆಂಬಲಿಸುತ್ತದೆ. ಮುಂಭಾಗದಲ್ಲಿ ಇದು ಆಟೋಫೋಕಸ್‌ನೊಂದಿಗೆ 50MP ಸೆಲ್ಫಿ ಸ್ನ್ಯಾಪರ್ ಮತ್ತು f/1.9 ಅಪರ್ಚರ್‌ನೊಂದಿಗೆ ಬರುತ್ತದೆ. ಈ ಮೂಲಕ ನಿಮಗೆ ಫೋಟೋಗ್ರಾಫಿಯಲ್ಲಿ ಅದ್ದೂರಿಯ ಫೀಚರ್ಗಳೊಂದಿಗೆ ಅತ್ಯುತ್ತಮವಾದ ಸ್ಮಾರ್ಟ್ಫೋನ್ ಅನ್ನು ಮೊಟೊರೊಲಾ ಕಂಪನಿ ಚೀನಾದಲ್ಲಿ ಬಿಡುಗಡೆಗೊಳಿಸಿದೆ.
ಈ ಸ್ಮಾಟ್ಫೋನ್ IP68 ಧೂಳು ಮತ್ತು ನೀರಿನ ಪ್ರತಿರೋಧ ಮತ್ತು ಗಟ್ಟಿಮುಟ್ಟಾದ ಅಲ್ಯೂಮಿನಿಯಂ ಫ್ರೇಮ್‌ನೊಂದಿಗೆ ಫೋನ್ ಸಾಕಷ್ಟು ಬಾಳಿಕೆ ಬರುವಂತಹದ್ದಾಗಿದೆ. ಇದು ಮುಂಭಾಗದಲ್ಲಿ ಕಠಿಣವಾದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಸಹ ಹೊಂದಿದೆ. ಸ್ಮಾರ್ಟ್ಫೋನ್ Snapdragon 8s Gen 3 ಪ್ರೊಸೆಸರ್ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ಫೋನ್ LPDDR5X RAM ಮತ್ತು UFS 4.0 ಸ್ಟೋರೇಜ್ ಜೊತೆಗೆ ಲಭ್ಯವಿದೆ. ಈಗಾಗಲೇ ಮೇಲಿ ಹೇಳಿರುವಂತೆ ಫೋನ್ ಆಂಡ್ರಾಯ್ಡ್ 14 ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ.
ಬ್ಯಾಟರಿ ಸಾಮರ್ಥ್ಯವು 4500mAh ಆಗಿದ್ದು 125W ಟರ್ಬೋಪವರ್ ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್, ಜೊತೆಗೆ 5W ರಿವರ್ಸ್ ಚಾರ್ಜಿಂಗ್‌ಗೆ ಬೆಂಬಲವಿದೆ. ಸಂಪರ್ಕಕ್ಕಾಗಿ X50 ಅಲ್ಟ್ರಾ 5G SA/NSA, ಡ್ಯುಯಲ್ 4G VoLTE, Wi-Fi 7 802.11ax, ಬ್ಲೂಟೂತ್ 5.4, GPS, NFC ಮತ್ತು USB ಟೈಪ್-C ಅನ್ನು ಬೆಂಬಲಿಸುತ್ತದೆ. ಇದು ಡಾಲ್ಬಿ ಅಟ್ಮಾಸ್‌ನಿಂದ ಟ್ಯೂನ್ ಮಾಡಲಾದ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ ಮತ್ತು ಡಾಲ್ಬಿ ಹೆಡ್ ಟ್ರ್ಯಾಕಿಂಗ್ ಅನ್ನು ಬೆಂಬಲಿಸುತ್ತದೆ.