ಮೋಟೊರೋಲ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ Moto G84 5G ಅನ್ನು ಕೈಗೆಟಕುವ ಬಿಡುಗಡೆಯಾಗಿದೆ. ಇದನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಫೋನ್ 12 GB RAM ಮತ್ತು 256 GB ಸ್ಟೋರೇಜ್ ಹೊಂದಿದೆ. ಅಲ್ಲದೆ 5000mAh ಬ್ಯಾಟರಿ ಸೇರಿದಂತೆ Qualcomm Snapdragon 695 ಪ್ರೊಸೆಸರ್ ವೈಶಿಷ್ಟ್ಯಗಳನ್ನು ಲಭ್ಯಗೊಳಿಸಲಾಗಿದೆ. Moto G84 5G ಸ್ಮಾರ್ಟ್ಫೋನ್ ಬೆಲೆ 20,000 ಸಾವಿರಕ್ಕಿಂತ ಕಡಿಮೆ ಇದೆ. ಇದರ ಮಾರಾಟ ಸೆಪ್ಟೆಂಬರ್ 8 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ.
Moto G84 5G ಅನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದು 12GB RAM ಮತ್ತು 256GB ಸ್ಟೋರೇಜ್ ಜೊತೆಗೆ ಹೊಂದಿದೆ. ಇದನ್ನು 19,999 ರೂಗಳಿಗೆ ಖರೀದಿಸಬಹುದು. Moto G84 5G ಸ್ಮಾರ್ಟ್ಫೋನ್ ರಿಯಾಯಿತಿಯ ನಂತರ ಫೋನ್‌ನ ಬೆಲೆ 18,999 ರೂಗಳಾಗಿವೆ. ಇದರ ಮಾರಾಟ ಸೆಪ್ಟೆಂಬರ್ 8 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಈ ಫೋನ್ ಅನ್ನು ವಿವಾ ಮೆಜೆಂಟಾ ಮತ್ತು ಮಾರ್ಷ್‌ಮ್ಯಾಲೋ ಬ್ಲೂ ಬಣ್ಣದಲ್ಲಿ ಖರೀದಿಸಬಹುದು. ಇದು ಮಿಡ್ನೈಟ್ ಬ್ಲೂ 3D ಅಕ್ರಿಲಿಕ್ ಗ್ಲಾಸ್ ಫಿನಿಶ್ ರೂಪಾಂತರದಲ್ಲಿ ಲಭ್ಯವಿದೆ. ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ರೂ.1,000 ರಿಯಾಯಿತಿ ನೀಡಲಾಗುವುದು. ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಆಫರ್ ಅಡಿಯಲ್ಲಿ 1,000 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ.
ಇದು 6.55-ಇಂಚಿನ FHD + (2400 x 1080 ಪಿಕ್ಸೆಲ್‌ಗಳು) ಪೋಲ್ಡ್ ಡಿಸ್ಪ್ಲೇ ಹೊಂದಿದೆ. ಇದರ ರಿಫ್ರೆಶ್ ದರ 120 Hz ಆಗಿದೆ. Moto G84 5G ನಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ. ಇದರ ಮೊದಲ ಸೆನ್ಸರ್ 50MP ಮೆಗಾಪಿಕ್ಸೆಲ್‌ಗಳು. ಎರಡನೆಯದು 8MP ಮೆಗಾಪಿಕ್ಸೆಲ್ ಸೆನ್ಸರ್ ಆಗಿದೆ. ಕೊನೆಯದಾಗಿ ಫೋನ್ 16MP ಮೆಗಾಪಿಕ್ಸೆಲ್ ಮುಂಭಾಗದ ಸೆನ್ಸರ್ ಹೊಂದಿದೆ.
ಈ ಫೋನ್ Octa Core Qualcomm Snapdragon 695 ಅನ್ನು ಹೊಂದಿದೆ. ಇದು 12GB RAM ಮತ್ತು 256GB ಸ್ಟೋರೇಜ್ ಜೊತೆಗೆ ಹೊಂದಿದೆ. ಈ ಫೋನ್ Android 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಒಂದು ವರ್ಷದ ಆಂಡ್ರಾಯ್ಡ್ ಅಪ್‌ಡೇಟ್‌ಗಳು ಮತ್ತು 3 ವರ್ಷಗಳ ಸೆಕ್ಯುರಿಟಿ ಪ್ಯಾಚ್ ಅಪ್‌ಡೇಟ್‌ಗಳನ್ನು ನೀಡಲಾಗುವುದು. ಇದು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಫೋನ್‌ಗೆ IP54 ರೇಟಿಂಗ್ ನೀಡಲಾಗಿದೆ. ಫೋನ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಜೊತೆಗೆ ನೀಡಲಾಗಿದೆ. ಸಂಪರ್ಕಕ್ಕಾಗಿ ಫೋನ್‌ನಲ್ಲಿ 5G, GPS, ಬ್ಲೂಟೂತ್, NFC ಮತ್ತು USB ಟೈಪ್ C ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.