Moto G73 5G ಭಾರತದಲ್ಲಿ ಬಿಡುಗಡೆ! 5000mAh ಬ್ಯಾಟರಿ ಮತ್ತು 50MP ಕ್ಯಾಮೆರಾವುಳ್ಳ ಈ ಫೋನ್ ಬೆಲೆ ಎಷ್ಟು?

Moto G73 5G ಭಾರತದಲ್ಲಿ ಬಿಡುಗಡೆ! 5000mAh ಬ್ಯಾಟರಿ ಮತ್ತು 50MP ಕ್ಯಾಮೆರಾವುಳ್ಳ ಈ ಫೋನ್ ಬೆಲೆ ಎಷ್ಟು?
HIGHLIGHTS

Moto G73 5G ಸ್ಮಾರ್ಟ್ಫೋನ್ ಇದು MediaTek Dimensity 930 5G ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆ.

ಮೋಟೋ ಜಿ73 5ಜಿ (MOTO G73 5G) ಸ್ಮಾರ್ಟ್‌ಫೋನ್ 6.5 ಇಂಚಿನ FHD+ IPS LCD ಡಿಸ್ಪ್ಲೇಯನ್ನು ಹೊಂದಿದೆ.

ಫೋನ್ ಮುಂಭಾಗದ ಪಂಚ್ ಹೋಲ್‌ನಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Moto G73 5G: ಭಾರತದಲ್ಲಿ ಮತ್ತೊಂದು ಬಜೆಟ್ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ Moto G73 5G ಸ್ಮಾರ್ಟ್ಫೋನ್ ಇದು MediaTek Dimensity 930 5G ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಮಿಡ್ನೈಟ್ ಬ್ಲೂ ಮತ್ತು ಲ್ಯೂಸೆಂಟ್ ವೈಟ್ ಕಲರ್‌ಗಳಲ್ಲಿ ಬರಲಿದೆ. ಮೊದಲ ಫೋನ್ ಆಗಿದೆ. Motorola 13 ಭಾರತೀಯ 5G ಬ್ಯಾಂಡ್‌ಗಳಿಗೆ ಬೆಂಬಲದೊಂದಿಗೆ ಈ ಇತ್ತೀಚಿನ 5G ಸ್ಮಾರ್ಟ್‌ಫೋನ್ ಅನ್ನು ಒದಗಿಸಿದೆ ಮತ್ತು ಈ ಫೋನ್‌ನೊಂದಿಗೆ ಉತ್ತಮ ಕೊಡುಗೆಯನ್ನು ಸಹ ನೀಡಿದೆ. ಇಂದು ಭಾರತದಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್‌ನ ವಿಶೇಷತೆಗಳು, ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ. 

MOTO G73 5G: ಬೆಲೆ ಮತ್ತು ಕೊಡುಗೆಗಳು 

ಮೋಟೊರೋಲದ ಈ Moto G73 5G ಸ್ಮಾರ್ಟ್‌ಫೋನ್ ಅನ್ನು ಕೇವಲ 8GB RAM + 128GB ಸ್ಟೋರೇಜ್ ಸಿಂಗಲ್ ಆಯ್ಕೆಯೊಂದಿಗೆ ರೂ.18,999 ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಮೇಲಿನ ವಿನಿಮಯ ಕೊಡುಗೆಯ ಭಾಗವಾಗಿ 2,000 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ಸ್ಮಾರ್ಟ್‌ಫೋನ್‌ನ ಮೊದಲ ಮಾರಾಟವು ಮಾರ್ಚ್ 16 ರಂದು ಮಧ್ಯಾಹ್ನ 12 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ.

MOTO G73 5G ವಿಶೇಷಣಗಳು 

ಮೋಟೋ ಜಿ73 5ಜಿ ಸ್ಮಾರ್ಟ್‌ಫೋನ್ 6.5 ಇಂಚಿನ FHD+ IPS LCD ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಫೋನ್ ಸೆಲ್ಫಿ ಕ್ಯಾಮೆರಾಕ್ಕಾಗಿ ಮೇಲ್ಭಾಗದ ಮಧ್ಯದಲ್ಲಿ ಪಂಚ್ ಹೋಲ್ ವಿನ್ಯಾಸವನ್ನು ಹೊಂದಿದೆ. ಈ ಫೋನ್ MediaTek Dimensity 930 5G ಆಕ್ಟಾ ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 8GB RAM ಮತ್ತು 128GB ಸಂಗ್ರಹದೊಂದಿಗೆ ಬರುತ್ತದೆ. ಆಪ್ಟಿಕ್ಸ್ ವಿಷಯದಲ್ಲಿ ಈ ಫೋನ್ ಹಿಂಭಾಗದಲ್ಲಿ 50MP + 8MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. 

ಇದರ ಮುಖ್ಯ ಕ್ಯಾಮರಾ 2um ಅಲ್ಟ್ರಾ-ಪಿಕ್ಸೆಲ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಫೋನ್ ಮುಂಭಾಗದ ಪಂಚ್ ಹೋಲ್‌ನಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್ 30W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ದೊಡ್ಡ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಈ ಫೋನ್‌ನ ಇತರ ವೈಶಿಷ್ಟ್ಯಗಳಿಗೆ ಬರುವುದಾದರೆ Moto ಇದು ಸ್ಟಾಕ್ Android 13 OS, BT 5.2, 4x4MIMO ಮತ್ತು 13 ಭಾರತೀಯ 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ ಈ ಫೋನ್ Dolby Atmos ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo