Moto G72: ಫೋಟೋಗ್ರಫಿಗಾಗಿಯೇ 108MP ಕ್ಯಾಮೆರಾವುಳ್ಳ ಈ ಸ್ಮಾರ್ಟ್ಫೋನ್ ಬೆಲೆ ಎಷ್ಟು ಗೊತ್ತಾ?

Updated on 15-Mar-2023
HIGHLIGHTS

ನಿಮಗೆ ಫೋಟೋಗ್ರಫಿಯಲ್ಲಿ ಆಸಕ್ತಿಯಿದ್ದರೆ ನೀವು ಇದನ್ನು ಖರೀದಿಸಬಹುದು

Moto G72 ಸ್ಮಾರ್ಟ್ಫೋನ್ ಅನ್ನು ಕಳೆದ ವರ್ಷದಂದು ಬಿಡುಗಡೆ ಮಾಡಲಾಗಿತ್ತು

ಅತ್ಯಂತ ಕಡಿಮೆ ಬೆಲೆಯಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾಯಿರುವ ಈ ಫೋನ್‌ ಮಾರಾಟವಾಗುತ್ತಿದೆ.

Moto G72: ಸ್ಮಾರ್ಟ್ಫೋನ್ ಮೂಲಕವೇ ಇಂದು ನಾವು ಉತ್ತಮ ಗುಣಮಟ್ಟದ ಫೋಟೊಗಳನ್ನ ಪಡೆದುಕೊಳ್ಳಬಹುದು. ಇದಕ್ಕಾಗಿ ಪ್ರಸ್ತುತ ಅನೇಕ ಬ್ರ್ಯಾಂಡ್ ಸ್ಮಾರ್ಟ್ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅವುಗಳು ಕೊಂಚ ದುಬಾರಿಯಾಗಿವೆ. ಆದರೂ ಬಜೆಟ್‌ ಸ್ನೇಹಿ ಬೆಲೆಯಲ್ಲಿ ಹಲವು ಕಂಪನಿಗಳು 108MP ಮೆಗಾಫಿಕ್ಸೆಲ್ ಹೊಂದಿರುವ ಫೋನ್‌ಗಳನ್ನು ಈಗಾಗಲೇ ಪರಿಚಯಿಸಿವೆ. ಕಳೆದ ವರ್ಷ ಮೋಟೋರೊಲಾ ಕಂಪನಿಯು ಈ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದ್ದು ಇದು ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ನಿಮಗೆ ಫೋಟೋಗ್ರಫಿಯಲ್ಲಿ ಆಸಕ್ತಿಯಿದ್ದರೆ ನೀವು ಇದನ್ನು ಖರೀದಿಸಬಹುದು.  

Moto G72 ಡಿಸ್‌ಪ್ಲೇ ಮತ್ತು ಪ್ರೊಸೆಸರ್‌

ಈ ಸ್ಮಾರ್ಟ್ಫೋನ್ 6.6 ಇಂಚಿನ ಫುಲ್ HD+ POLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 1080 x 2400 ಪಿಕ್ಸಲ್ ರೆಸಲ್ಯೂಶನ್ ಸಫೋರ್ಟ್‌ ಪಡೆದಿದ್ದು 120Hz ರಿಫ್ರೆಶ್ ರೇಟ್ನಿಂದ ಕೂಡಿದೆ. ಮೀಡಿಯಾ ಟೆಕ್ ಹಿಲಿಯೋ G99 ಪ್ರೊಸೆಸರ್‌ನೊಂದಿಗೆ ಆಂಡ್ರಾಯ್ಡ್‌ 12 OS ಬೆಂಬಲದೊಂದಿಗೆ ಈ ಫೋನ್‌ ಕಾರ್ಯನಿರ್ವಹಿಸುತ್ತದೆ. ಇದು 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯೊಂದಿಗೆ ಲಭ್ಯವಿದ್ದು ಮೆಮೊರಿ ಕಾರ್ಡ್‌ ಮೂಲಕ ಇಂಟರ್ನಲ್ ಸ್ಟೋರೇಜ್ ಸ್ಪೇಸ್ ಅನ್ನು ವಿಸ್ತರಿಸಬಹುದಾಗಿದೆ. ಇದು IP52 ರೇಟಿಂಗ್ ಅನ್ನು ಸಹ ಹೊಂದಿದ್ದು ವಾಟರ್ ರೆಸಿಸ್ಟೆನ್ಸ್‌ ಆಯ್ಕೆ ಪಡೆದಿದೆ. ಡಾಬ್ಲಿ ಅಟ್ಮೋಸ್‌ ಆಡಿಯೋದೊಂದಿಗೆ ಸ್ಟಿರಿಯೊ ಸ್ಪೀಕರ್ ರಚನೆಯನ್ನು ಈ ಸ್ಮಾರ್ಟ್‌ಫೋನ್‌ ಪಡೆದಿದೆ.

Moto G72 ಕ್ಯಾಮೆರಾ

Moto G72 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಫೋಟೋಗ್ರಫಿಗಾಗೆ  ಅತ್ಯುತ್ತಮ ಸ್ಮಾರ್ಟ್‌ಫೋನ್‌ ಇದಾಗಿದೆ. ಇದರ ಮುಖ್ಯ ಕ್ಯಾಮೆರಾ 108MP ಮೆಗಾ ಪಿಕ್ಸಲ್ ಸೆನ್ಸಾರ್‌ ಅನ್ನು ಹೊಂದಿದೆ. ಸ್ಯಾಮ್ಸಂಗ್ HM6 ಸೆನ್ಸಾರ್ ಅನ್ನು ಇದಕ್ಕೆ ನೀಡಲಾಗಿದ್ದು ಎರಡನೇ ಕ್ಯಾಮೆರಾ 8 ಮೆಗಾಫಿಕ್ಸೆಲ್ನ ಆಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಅನ್ನು ಪಡೆದಿದೆ. ಮೂರನೇ ಕ್ಯಾಮೆರಾ 2 ಮೆಗಾಫಿಕ್ಸೆಲ್ನ ಮೈಕ್ರೋ ಶೂಟರ್ ಸೆನ್ಸಾರ್‌ ಅನ್ನು ಹೊಂದಿದ್ದು ಇನ್ನು ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಒಳಗೊಂಡಿದೆ.

Moto G72 ಬ್ಯಾಟರಿ ಮತ್ತು ಕನೆಕ್ಟಿವಿಟಿ

Moto G72 ಸ್ಮಾರ್ಟ್ಫೋನ್ ಹೆಚ್ಚು ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದೆ. ಇದು 33W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿಲ್ಲ ಎನ್ನುವುದು ಬಿಟ್ಟರೆ 4G, ವೈ-ಫೈ, ಬ್ಲೂಟೂತ್ 5.0, ಎನ್‌ಎಫ್‌ಸಿ, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಇದು ಒಳಗೊಂಡಿದೆ.

Moto G72 ಆಫರ್ಗಳೇನು?

ಮೋಟೋ G72 ಸ್ಮಾರ್ಟ್‌ಫೋನಿನ ಬೆಲೆ ಈಗ ಅತ್ಯಂತ ಕಡಿಮೆ ಆಗಿದ್ದು 6GB RAM + 128GB ಸ್ಟೋರೇಜ್‌ ವೇರಿಯಂಟ್‌ನ ಬೆಲೆ ರೂ 3,000 ಕ್ಕೆ ಲಭ್ಯವಿದೆ. 6GB + 128GB ವೇರಿಯಂಟ್‌ ಈಗ ಕೇವಲ ರೂ 15,999 ಕ್ಕೆ ಸಿಗಲಿದೆ. ಈ ಫೋನ್‌ ಗ್ರೇ ಮತ್ತು ಪೋಲಾರ್ ಬ್ಲೂ ಕಲರ್‌ಗಳ ಆಯ್ಕೆಯಲ್ಲಿ ಲಭ್ಯವಿದ್ದು ಈಗ ನೀವು ಆನ್ಲೈನ್  ವೆಬ್‌ಸೈಟ್‌ಗಳ ಮೂಲಕ ಈ ಫೋನ್‌ ಅನ್ನು ಖರೀದಿಸಬಹುದು.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :