ಇವತ್ತು ನಾವು ಮೋಟೊರೋಲ ಕಂಪನಿಯ ಹೊಸ ಮತ್ತು ಲೇಟೆಸ್ಟ್ ಮೊಬೈಲ್ ಫೋನ್ ಬಗ್ಗೆ ಮಾತನಾಡೋಣ. ಹಲವಾರು ನಮ್ಮ ವೀಕ್ಷಕರು Moto G7 Power ಸ್ಮಾರ್ಟ್ಫೋನ್ ಬಗ್ಗೆ ಮಾಹಿತಿ ಕೇಳಿದ್ರು ಈಗ ನಾನು ಅದನ್ನು ನಿಮ್ಮ ಮುಂದೆ ತಂದಿದ್ದೇನೆ ನಡೀರಿ ಅದರ ಲುಕ್ ತಗೊಳೋಣ. ಮೊಟೊರೊಲಾ ಈ ವರ್ಷದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019 ಅಲ್ಲಿ Moto G7 Power ಸ್ಮಾರ್ಟ್ಫೋನನ್ನು ಹೊರ ತಂದಿತ್ತು ಅಲ್ಲದೆ ಈ ಸ್ಮಾರ್ಟ್ಫೋನ್ ಈಗಾಗಲೇ ಭಾರತದಲ್ಲಿ ಫ್ಲಿಪ್ಕಾರ್ಟ್ ಮೂಲಕ ಕೇವಲ 13,999 ರೂಗಳಲ್ಲಿ ಲಭ್ಯವಿದೆ. ಖರಿಸಿದಿಸಲು ಇಷ್ಟಪಟ್ಟರೆ ಈ ಲಿಂಕ್ ಕ್ಲಿಕ್ ಮಾಡಿ ಇದರ ಮಾಹಿತಿ ಪಡೆಯಿರಿ.
ಇದರ ಫೀಚರ್ಗಳ ಆಬಗ್ಗೆ ಹೇಳಬೇಕೆಂದರೆ ಇದರಲ್ಲಿದೆ 6.2 ಇಂಚಿನ HD+ LTPS IPS LCD ಡಿಸ್ಪ್ಲೇಯನ್ನು 19:9 ಅಸ್ಪೆಟ್ ರೇಷುವಿನೊಂದಿಗೆ ಹೊಂದಿದ್ದು ಇದರ ಪ್ರೊಟೆಕ್ಷನ್ಗಾಗಿ ಗೋರಿಲ್ಲಾ ಗ್ಲಾಸ್ v3 ಹೊಂದಿದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ ಹಳೆಯ ಮಾದರಿಯ ನಾಚ್ ಡಿಸ್ಪ್ಲೇಯೊಳಗೆ 8MP ಮೆಗಾಪಿಕ್ಸೆಲ್ f/2.2 ಅಪೆರ್ಚರಿನ ಸೆನ್ಸರ್ ನೀಡಿದ್ದು ಇದರ ನಾಚ್ ಡಿಸೆಂಟ್ ಮತ್ತು ಆಕರ್ಷಕವಾಗಿದೆ. ಇದರ ಕೆಳ ಭಾಗದಲ್ಲಿ ಆಡಿಯೋ ಮೈಕ್ ಮತ್ತು USB ಟೈಪ್ ಸಿ ಪೋರ್ಟ್ ಅನ್ನು ನೀಡಿದ್ದು ಇದರ ಮೂಲಕ ನೀವು ಅದ್ದೂರಿಯ 5000mAH ಬ್ಯಾಟರಿಯನ್ನು ಚಾರ್ಜ್ ಮಾಡಬವುದು.
ಈ ಸ್ಮಾರ್ಟ್ಫೋನಿನ ಡಿಸೈನ್ ಬಗ್ಗೆ ಹೇಳಬೇಕೆಂದರೆ ಇದನ್ನು ಪ್ಲಾಸ್ಟಿಕ್ ಪೊಲಿಕಾರ್ಬೊನೇಟ್ ಮೆಟಿರಿಯಲ್ಗಳಿಂದ ತಯಾರಿಸಲ್ಪಟ್ಟಿದ್ದು ಇದರ ಬಲಭಾಗದಲ್ಲಿ ಆನ್ ಆಫ್ texter ಬಟನ್ ಹಾಗು ವಾಲಿಯಂ ಬಟನ್ಗಳನ್ನು ಒಳಗೊಂಡಿದೆ. ಇದರ ಮೇಲ್ಭಾಗದಲ್ಲಿ ನೋಡಬೇಕೆಂದರೆ ನಿಮಗೆ 3.5mm ಆಡಿಯೋ ಜಾಕ್ ನೀಡಲಾಗಿದೆ. ಇದರ ಎಡಭಾಗದಲ್ಲಿ ಸಿಮ್ ಸ್ಲಾಟ್ ನೀಡಲಾಗಿದೆ. ಅಲ್ಲದೆ ಇದರಲ್ಲಿ ನಿಮಗೆ ಮೈಕ್ರೋ SD ಕಾರ್ಡ್ ಬಳಸಲು ಸ್ಲಾಟ್ ನೀಡಲಾಗಿದ್ದು 512GB ವರೆಗೆ ವಿಸ್ತರಿಸಬವುದು.
ಇದರ ಹಿಂಭಾಗದಲ್ಲಿ 12MP ಮೆಗಾಪಿಕ್ಸೆಲ್ f2.0 ಸೆನ್ಸರೊಂದಿಗೆ ಬರುತ್ತದೆ. ಇದರಲ್ಲಿ ಸ್ಲೋ ಮೋಶನ್, 4K ವಿಡಿಯೋಗಳನ್ನು ಸೆರೆಹಿಡಿಯಬವುದು. ಇದರ ಕೆಳಗೆ LED ಫ್ಲಾಶ್ ಸಹ ನೀಡಲಾಗಿದ್ದು ನಿಮಗೆ ಮೋಟೊರೋಲದ ಲೋಗೋದೊಂದಿಗೆ ಫಿಂಗರ್ಪ್ರಿಂಟ್ ಸೆನ್ಸರ್ ನೀಡಿದೆ. ಇದರ ಸಾಫ್ಟ್ವೇರ್ ಬಗ್ಗೆ ಹೇಳಬೇಕೆಂದರೆ ಇದರಲ್ಲಿ 4GB/64GB ವೇರಿಯಂಟ್ಗಳಲ್ಲಿ ಲಭ್ಯವಿದೆ. ಅಲ್ಲದೆ ಇದರಲ್ಲಿ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 632 ಚಿಪ್ಸೆಟ್ ಹೊಂದಿದ್ದು ಆಂಡ್ರಾಯ್ಡ್ 9.0 ಔಟ್ ಓಫ್ ದಿ ಬಾಕ್ಸ್ ನಡೆಯುತ್ತದೆ.