ಲೆನೊವೊ ಸ್ವಾಮ್ಯದ ಸ್ಮಾರ್ಟ್ಫೋನ್ ತಯಾರಕನಾದ ಮೋಟೋರೋಲಾ ಮೊಬಿಲಿಟಿ ಇಂದು Moto G7 ಮತ್ತು Moto One ಸ್ಮಾರ್ಟ್ಫೋನ್ಗಳನ್ನು ಇಂದು ಅಂದ್ರೆ 25ನೇ ಮಾರ್ಚ್ 2019 ರಂದು ಬಿಡುಗಡೆಗೊಳಿಸಿದೆ. ಈ ಎರಡು ಸ್ಮಾರ್ಟ್ಫೋನ್ಗಳು ಭಾರತದಲ್ಲಿ 16,999 ಮತ್ತು 13,999 ರೂಗಳಲ್ಲಿ ಇಂದೇ ಫ್ಲಿಪ್ಕಾರ್ಟ್ ಮತ್ತು ಮೋಟೋ ಹಬ್ ಸ್ಟೋರ್ಗಳ ಮೂಲಕ ಆಫ್ಲೈನ್ ಚಿಲ್ಲರೆ ವ್ಯಾಪಾರಿಗಳೊಂದಿಗೆ ಲಭ್ಯವಿದೆ. Moto G7 ಕಳೆದ ವರ್ಷ Moto G6 ಗೆ ಉತ್ತರಾಧಿಕಾರಿಯಾಗಿ ಬ್ರೆಜಿಲ್ನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಂಡಿತು. ಇವೇರಡು ಸ್ಮಾರ್ಟ್ಫೋನ್ಗಳು ಟರ್ಬೊ ಚಾರ್ಜರ್ ಜೊತೆಗೆ ಫಾಸ್ಟ್ ಚಾರ್ಜಿಂಗ್ ಫೀಚರ್ ಹೊಂದಿವೆ.
Moto G7 ಸ್ಮಾರ್ಟ್ಫೋನ್ 6.2 ಇಂಚಿನ ಮ್ಯಾಕ್ಸ್ ವಿಷನ್ ಫುಲ್ HD+ LCD ಡಿಸ್ಪ್ಲೇಯನ್ನು U ಆಕಾರದ ನಾಚ್ ಜೊತೆಗೆ ಪ್ರದರ್ಶಿಸುತ್ತದೆ. ಅಲ್ಲದೆ ಕ್ವಾಲ್ಕಾಮ್ನ ಸ್ನಾಪ್ಡ್ರಾಗನ್ 632 ಚಿಪ್ಸೆಟ್ ಜೊತೆಗೆ ಇದು 4GB ಯ RAM ಮತ್ತು 64GB ಯ ಇಂಟರ್ನಲ್ ಸ್ಟೋರೇಜ್ದೊಂದಿಗೆ ಜೋಡಿಸಲ್ಪಟ್ಟಿರುತ್ತದೆ. ಈ ಸ್ಮಾರ್ಟ್ಫೋನ್ ಹಿಂದೆ 12MP ಡ್ಯುಯಲ್ ಕ್ಯಾಮೆರಾ ಸಿಸ್ಟಮ್ ನೀಡಿದ್ದು ಪೋರ್ಟ್ರೇಟ್, ಸ್ಪಾಟ್ ಬಣ್ಣ, ಸಿನಿಗ್ರಾಫ್ ಮತ್ತು ಸ್ವಯಂ ಸ್ಮೈಲ್ ಕ್ಯಾಪ್ಚರ್ನಂತಹ ವಿಧಾನಗಳನ್ನು ಬೆಂಬಲಿಸುತ್ತದೆ. ಇದು ಗೂಗಲ್ ಲೆನ್ಸ್ ಜೊತೆಗೂಡಿ ಬರುತ್ತದೆ. ಸ್ಮಾರ್ಟ್ಫೋನ್ನ ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. ಇದು ಆಂಡ್ರಾಯ್ಡ್ ಪೈ ಅನ್ನು ನಡೆಸುತ್ತದೆ ಮತ್ತು 3000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
Moto One ಸ್ಮಾರ್ಟ್ಫೋನ್ 5.9 ಇಂಚಿನ HD+ LCD 1520×720 ರೆಸಲ್ಯೂಶನ್ ಹೊಂದಿರುವ ಡಿಸ್ಪ್ಲೇಯೊಂದಿಗೆ ಬರುತ್ತದೆ. ಸ್ನಾಪ್ಡ್ರಾಗನ್ 625 ಚಿಪ್ಸೆಟ್ ಜೊತೆಗೆ 4GB ಯ RAM ಮತ್ತು 64GB ಯ ಇಂಟರ್ನಲ್ ಸ್ಟೋರೇಜ್ದೊಂದಿಗೆ ಜೋಡಿಸಲ್ಪಟ್ಟಿರುತ್ತದೆ. ಇದು ಸಹ 3000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. Moto One ಸ್ಮಾರ್ಟ್ಫೋನ್ 13MP + 2MP ಕಾನ್ಫಿಗರೇಶನ್ನೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮರಾಗಳಿವೆ. 8MP ಕ್ಯಾಮೆರಾ ಸ್ಮಾರ್ಟ್ಫೋನ್ ಹೊಂದಿದೆ. Moto One ಆಂಡ್ರಾಯ್ಡ್ ಪೈ 9 ಆಪರೇಟಿಂಗ್ ಸಿಸ್ಟಮ್ ಅನ್ನು ನಡೆಸುತ್ತದೆ. ಹೊಸ ಫೋನ್ಗಳಲ್ಲಿ ರಿಲಯನ್ಸ್ ಜಿಯೋ ₹2200 ಕ್ಯಾಶ್ಬ್ಯಾಕ್ ನೀಡುತ್ತಿದೆ. ಚಂದಾದಾರರು ₹198 ಮತ್ತು ₹299 ಯೋಜನೆಗಳ ಮೂಲಕ ಯೋಜನೆಯನ್ನು ಪಡೆಯಬಹುದು.