ಭಾರತದಲ್ಲಿ ಮೊರೊಟೋಲ ತನ್ನ ಮುಂಬರಲಿರುವ Moto G45 5G ಸ್ಮಾರ್ಟ್ಫೋನ್ ಅನ್ನು ಪರಿಚಯಿಸಲಿದ್ದು ಇದರ ಒಂದಿಷ್ಟು ಮಾಹಿತಿಗಳನ್ನು ಕಂಪನಿ ಅಧಿಕೃತವಾಗಿ ಈಗಾಗಲೇ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಈ Moto G45 5G ಸ್ಮಾರ್ಟ್ಫೋನ್ 21ನೇ ಆಗಸ್ಟ್ ರಂದು ಮಧ್ಯಾಹ್ನ 12:00 ಗಂಟೆಗೆ ಬಿಡುಗಡೆಯಾಗಲಿರುವುದಾಗಿ ಕಂಪನಿ ಟ್ವಿಟ್ಟರ್ ಮೂಲಕ ತಿಳಿಸಿದೆ. ಇದರಲ್ಲಿ Snapdragon 6s Gen 3 ಪ್ರೊಸೆಸರ್ನೊಂದಿಗೆ ಬರೋಬ್ಬರಿ 8GB RAM ಕಾಂಬಿನೇಷನ್‌ನೊಂದಿಗೆ ಬರುತ್ತದೆ. Moto G45 5G ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆ ಇದರ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯೋಣ.
ಈಗಾಗಲೇ ನಿಮಗೆ ಮೇಲೆ ತಿಳಿಸಿರುವಂತೆ ಫ್ಲಿಪ್‌ಕಾರ್ಟ್ (Flipkart) ಪಟ್ಟಿಯು ಲಾಂಚ್‌ಗೆ ಮುಂಚಿತವಾಗಿ ಫೋನ್‌ನ ಹಲವಾರು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಅದರಂತೆ ಫೋನ್ 6.5 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಸಹ ಹೊಂದಿರುತ್ತದೆ. ವೇಗ ಮತ್ತು ಬಹುಕಾರ್ಯಕಕ್ಕಾಗಿ ಫೋನ್ ಸ್ನಾಪ್‌ಡ್ರಾಗನ್ 6s Gen 3 ಪ್ರೊಸೆಸರ್ ಅನ್ನು ಹೊಂದಿದ್ದು 8GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ ಒಳಗೆ ಸುಮಾರು 5000mAh ಬ್ಯಾಟರಿ ಹೊಂದಿರುವುದಾಗಿ ನಿರೀಕ್ಷಿಸಲಾಗಿದೆ.
ಇದರೊಂದಿಗೆ ಫೋನ್ ಫೋಟೋಗ್ರಫಿಗಾಗಿ 50MP AI ಆಧಾರಿತ ಡುಯಲ್ ಕ್ಯಾಮೆರಾವನ್ನು ಹೊಂದಿರುತ್ತದೆ. ಇದರ ಅನುಗುಣವಾಗಿ ಮುಂಭಾಗದಲ್ಲಿ 16MP ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಕ್ಯಾಮೆರಾವನ್ನು ಸಹ ಹೊಂದಿದೆ. ಇದಲ್ಲದೆ ಫೋನ್‌ನ ಹಿಂಭಾಗದಲ್ಲಿ ಅಲ್ಟ್ರಾ ಪ್ರೀಮಿಯಂ ವಿನ್ಯಾಸವನ್ನು ನೀಡಲಾಗುವುದು. ಇದು ಲೆದರ್ ಫಿನಿಶ್‌ನಂತೆ ಕಾಣುತ್ತದೆ. ಕಂಪನಿಯು ಫೋನ್‌ನ ಎಲ್ಲಾ ಇತರ ವೈಶಿಷ್ಟ್ಯಗಳು ಮತ್ತು ಬೆಲೆ ಸಂಬಂಧಿತ ಮಾಹಿತಿಯನ್ನು ಆಗಸ್ಟ್ 21 ರಂದು ಬಹಿರಂಗಪಡಿಸುತ್ತದೆ. ಅಲ್ಲದೆ ಸ್ಮಾರ್ಟ್ಫೋನ್ ಅನ್ನು ಕಂಪನಿ ಈ ಬೆಲೆಯಲ್ಲಿ ಬರುವ ಅತಿ ವೇಗದ 5G ಅನುಭವ ನೀಡುವ ಸ್ಮಾರ್ಟ್ಫೋನ್ ಆಗಿದ್ದು ಆಡಿಯೋ ಕ್ವಾಲಿಟಿಯನ್ನು ಮತ್ತಷ್ಟು ಉತ್ತೇಜಿಸಲು Dolby Atmos ಸೌಂಡ್ ಸಹ ಸೇರಿಸಿದೆ.
Also Read: 3 ತಿಂಗಳ ಉಚಿತ OTT ಚಂದಾದಾರಿಕೆಯೊಂದಿಗೆ Unlimited Call ಮತ್ತು ಡೇಟಾ ನೀಡುವ Vi ಯೋಜನೆಗಳು
ಈಗಾಗಲೇ ಮೇಲೆ ಹೇಳಿರುವಂತೆ ಸ್ಮಾರ್ಟ್ಫೋನ್ ನಿಮಗೆ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿದ್ದು ಪ್ರಸ್ತುತ ಇದನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿದೆ. ಅವೆಂದರೆ ಮೊದಲಿಗೆ ಇದರ 6GB RAM ಮತ್ತು 128GB ಸ್ಟೋರೇಜ್ ಅನ್ನು ಸುಮಾರು 12,999 ರೂಗಳಿಗೆ ನಿರೀಕ್ಷಿಸಲಾಗಿದ್ದು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಅನ್ನು ಸುಮಾರು 14,999 ರೂಗಳಿಗೆ ನಿರೀಕ್ಷಿಸಲಾಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಅನ್ನು Moto G45 ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ನೀಡಲಾಗುವುದು. ಇದರಲ್ಲಿ ಕೆಂಪು, ನೀಲಿ ಮತ್ತು ಹಸಿರು ಬಣ್ಣದ ಆಯ್ಕೆಗಳು ಲಭ್ಯವಿರುತ್ತವೆ.