Moto G35 5G ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್! ಬೆಲೆ ಮತ್ತು ಫೀಚರ್ಗಳೇನು?

Moto G35 5G ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್! ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಮುಂಬರಲಿರುವ Moto G35 5G ಸ್ಮಾರ್ಟ್ಫೋನ್ 10ನೇ ಡಿಸೆಂಬರ್ 2024 ರಂದು ಫ್ಲಿಪ್ಕಾರ್ಟ್ ಮೂಲಕ ಲಾಂಚ್!

Moto G35 5G ಸ್ಮಾರ್ಟ್ಫೋನ್ ಕೇವಲ 10,000 ರೂಗಳೊಳಗೆ ಬರುವುದಾಗಿ ಕಂಪನಿ ಮಾಹಿತಿ ನೀಡಿದೆ.

Moto G35 5G ಸ್ಮಾರ್ಟ್ಫೋನ್ ವೇಗನ್ ಲೆದರ್ ಡಿಸೈನ್ ಮೂಲಕ ಕೇಸರಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯ.

ಭಾರತದಲ್ಲಿ ಮುಂಬರಲಿರುವ ಮೊಟೊರೊಲಾದ Moto G35 5G ಸ್ಮಾರ್ಟ್ಫೋನ್ ಅನ್ನು ಕಂಪನಿ ಬಿಡುಗಡೆಗೂ ಮುಂಚೆಯೇ ಬೆಲೆ ಹೊರೆತು ಎಲ್ಲವನ್ನು ಫ್ಲಿಪ್ಕಾರ್ಟ್ ಮೂಲಕ ಬಹಿರಂಗಪಡಿಸಿದೆ. ಪ್ರಸ್ತುತ ಅಧಿಕೃತ ಬಿಡುಗಡೆ ದಿನಾಂಕವನ್ನು ಕಂಪನಿ 10ನೇ ಡಿಸೆಂಬರ್ 2024 ಎಂದು ದೃಢಪಡಿಸಿದೆ. ಈ Moto G35 5G ಸ್ಮಾರ್ಟ್ಫೋನ್ ಜೊತೆಗೆ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಜಾಗತಿಕವಾಗಿ ಕಂಡಿತ್ತು ಈಗ ಪ್ರತ್ಯೇಕವಾಗಿ ಈ Moto G35 5G ಸ್ಮಾರ್ಟ್ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ ಫೋನ್‌ನ ಬೆಲೆ, ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಒಂದಿಷ್ಟು ಮಾಹಿತಿ ಈ ಕೆಳಗೆ ಪಟ್ಟಿ ಮಾಡಲಾಗಿದೆ.

Moto G35 5G ಬೆಲೆ ಮತ್ತು ಲಭ್ಯತೆ

ಈ ಮುಂಬರಲಿರುವ Moto G35 5G ಸ್ಮಾರ್ಟ್ಫೋನ್ ಬೆಲೆ ಮತ್ತು ರೂಪಾಂತರ ಎಲ್ಲವನ್ನು ಸೈಟ್ ಮತ್ತು ಪೋಸ್ಟ್ ಮೂಲಕ ತಿಳಿಸಿದ್ದು ಪ್ರಸ್ತುತ ಫೋನ್ 4GB RAM ಮತ್ತು 128GB ಸ್ಟೋರೇಜ್ ಅನ್ನು ಪಟ್ಟಿ ಮಾಡಿದ್ದೂ ಇದರ ವರ್ಚುಯಲ್ ಮೂಲಕ 12GB ವರೆಗೆ ಹೆಚ್ಚಿಸಬಹುದೆಂದು ಪೋಸ್ಟ್ ತಿಳಿಸಿದೆ.

ಈ Moto G35 5G ಸ್ಮಾರ್ಟ್ಫೋನ್ ಕೇವಲ 10,000 ರೂಗಳೊಳಗೆ ಬರುವುದಾಗಿ ಕಂಪನಿ ಮಾಹಿತಿ ನೀಡಿದೆ. ಆದರೆ ಇದರ ಅಧಿಕೃತ ಬೆಲೆಯನ್ನು ಪಡೆಯಲು ಇದರ ಬಿಡುಗಡೆವೆರೆಗೆ ಕಾಯಬೇಕಿದೆ. ಆಸಕ್ತರು ಈ Moto G35 5G ಸ್ಮಾರ್ಟ್ಫೋನ್ ವೇಗನ್ ಲೆದರ್ ಡಿಸೈನ್ ಮೂಲಕ ಕೇಸರಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಸಬಹುದು.

Upcoming Moto G35 5G in India

Moto G35 5G ಫೀಚರ್ ಮತ್ತು ವಿಶೇಷತೆಗಳು

Moto G35 5G ಸ್ಮಾರ್ಟ್ಫೋನ್ 6.7 ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ ವಿವಿಧ ಬೆಳಕಿನ ಪರಿಸ್ಥಿತಿಗಳಲ್ಲಿ ಸ್ಪಷ್ಟ ಗೋಚರತೆಗಾಗಿ 1000 nits ವರೆಗಿನ ಹೊಳಪನ್ನು ನೀಡುತ್ತದೆ. ಇದು ಹೆಚ್ಚುವರಿ ಬಾಳಿಕೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಮತ್ತು ವರ್ಧಿತ ಪ್ರತಿಕ್ರಿಯೆಗಾಗಿ 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಸಹ ಒಳಗೊಂಡಿದೆ.

Moto G35 5G ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ 4K ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವಿರುವ 50MP ಪ್ರೈಮರಿ ಸೆನ್ಸರ್ ಒಳಗೊಂಡಿದೆ. ಮತ್ತೊಂದು 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಜೋಡಿಸಲಾಗಿದೆ. ಮುಂಭಾಗದಲ್ಲಿ 16MP ಕ್ಯಾಮೆರಾವು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳನ್ನು ನಿರ್ವಹಿಸುತ್ತದೆ.

Also Read: Aadhaar Update: ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೊಸ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?

Upcoming Moto G35 5G in India

Moto G35 5G ಸ್ಮಾರ್ಟ್ಫೋನ್ Unisoc T760 ಚಿಪ್‌ಸೆಟ್‌ನಿಂದ ನಡೆಸಲ್ಪಡುವ Moto G35 5G ದೈನಂದಿನ ಕಾರ್ಯಗಳಿಗೆ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು 4GB RAM ಮತ್ತು 128GB ಆಂತರಿಕ ಸಂಗ್ರಹಣೆಯನ್ನು ಒಳಗೊಂಡಿದೆ.

Moto G35 5G ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಅನ್ನು ಬಾಕ್ಸ್‌ನ ಹೊರಗೆ ರನ್ ಮಾಡುತ್ತದೆ. Motorola ಒಂದು ಪ್ರಮುಖ OS ಅಪ್‌ಗ್ರೇಡ್ ಮತ್ತು ಎರಡು ವರ್ಷಗಳ ಭದ್ರತಾ ನವೀಕರಣಗಳನ್ನು ಭರವಸೆ ನೀಡಿದೆ. Moto G35 5G ಸ್ಮಾರ್ಟ್ಫೋನ್ 5000mAh ಬ್ಯಾಟರಿಯು 20W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಪವರ್ ನೀಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo