Moto G34 5G ಸ್ಮಾರ್ಟ್ಫೋನ್ ಈಗ ₹4500 ರೂಗಳ ರಿಲಯನ್ಸ್ ಜಿಯೋ ಆಫರ್‌ನೊಂದಿಗೆ ಬಿಡುಗಡೆ | Tech News

Moto G34 5G ಸ್ಮಾರ್ಟ್ಫೋನ್ ಈಗ ₹4500 ರೂಗಳ ರಿಲಯನ್ಸ್ ಜಿಯೋ ಆಫರ್‌ನೊಂದಿಗೆ ಬಿಡುಗಡೆ | Tech News
HIGHLIGHTS

ಮೊಟೊರೊಲಾ ಭಾರತದಲ್ಲಿ ತನ್ನ ಹೊಸ ಲೇಟೆಸ್ಟ್ Moto G34 5G ಅನ್ನು ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ

Moto G34 5G ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮೂಲಕ ಮೊದಲ ಮಾರಾಟ 17ನೇ ಜನವರಿ 2024 ರಿಂದ ಆರಂಭಿಸಲಿದೆ

ಸ್ಮಾರ್ಟ್ಫೋನ್ Snapdragon 695 ಪ್ರೊಸೆಸರ್ನೊಂದಿಗೆ 50MP ಪ್ರೈಮರಿ ಕ್ಯಾಮೆರಾ ಮತ್ತು 5000mAh ಬ್ಯಾಟರಿ ಹೊಂದಿದೆ.

ಭಾರತದಲ್ಲಿ ಅಮೇರಿಕಾದ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿ ಮೊಟೊರೊಲಾ ತನ್ನ ಹೊಸ ಲೇಟೆಸ್ಟ್ Moto G34 5G ಅನ್ನು ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋದೊಂದಿಗೆ ಕೈ ಜೋಡಿಸಿ ಭಾರಿ ಕಾಂಬೋ ಆಫರ್ಗಳೊಂದಿಗೆ ಬಿಡುಗಡೆಗೊಳಿಸಿದೆ. ಆಸಕ್ತರಿಗಾಗಿ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ 17ನೇ ಜನವರಿ 2024 ರಿಂದ ಆರಂಭಿಸಲಿದೆ. ಈ Moto G34 5G ಸ್ಮಾರ್ಟ್ಫೋನ್ Snapdragon 695 ಪ್ರೊಸೆಸರ್ನೊಂದಿಗೆ 50MP ಪ್ರೈಮರಿ ಕ್ಯಾಮೆರಾ ಮತ್ತು 5000mAh ಬ್ಯಾಟರಿ ಇದರ ಹೈಲೈಟ್ ಫೀಚರ್ಗಳಾಗಿವೆ.

Also Read: Flipkart & Amazon Republic Day Sale 2024: ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡೀಲ್‌ಗಳು

Moto G34 5G ಬೆಲೆ ಮತ್ತು ಲಭ್ಯತೆ

ಮೊದಲಿಗೆ ಈ Moto G34 5G ಸ್ಮಾರ್ಟ್ಫೋನ್ ಬೆಲೆ ಮತ್ತು ರಿಲಯನ್ಸ್ ಜಿಯೋದ ಆಫರ್ಗಳ ಬಗ್ಗೆ ಮಾತನಾಡುವುದಾದರೆ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಮೊದಲನೇಯದು 4GB RAM ಮತ್ತು 128GB ಸ್ಟೋರೇಜ್ ಬೆಲೆ ಆಫರ್ನೊಂದಿಗೆ 9,999 ರೂಗಳಾಗಿವೆ. ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಬೆಲೆ ಆಫರ್ನೊಂದಿಗೆ 10,999 ರೂಗಳಾಗಿವೆ. ಸ್ಮಾರ್ಟ್ಫೋನ್ ಮೂರು ಚಾರ್ಕೋಲ್ ಬ್ಲಾಕ್, ಐಸ್ ಬ್ಲೂ ಮತ್ತು ಓಷನ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಮಾರುಕಟ್ಟೆಯಲ್ಲಿ 17ನೇ ಜನವರಿ 2024 ರಂದು 12:00PM ರಿಂದ ಮೊದಲ ಮಾರಾಟದಲ್ಲಿ ಆಸಕ್ತರು ಖರೀದಿಸಬಹುದು.

Moto G34 5G ಮೇಲೆ ರಿಲಯನ್ಸ್ ಜಿಯೋದ ಆಫರ್ಗಳ

ಈ Moto G34 5G ಸ್ಮಾರ್ಟ್ಫೋನ್ ಖರೀದಿಸುವ ಜೊತೆಗೆ ರಿಲಯನ್ಸ್ ಜಿಯೋ ಜೈ ಜೋಡಿಸಿ ಗ್ರಾಹಕರಿಗೆ ರೂ 4500 ಮೌಲ್ಯದ ಪ್ರಯೋಜನಗಳನ್ನು ಸಹ ಪಡೆಯಬಹಹುದು. ಬಳಕೆದಾದರೂ ರೂ 399 ಪ್ರಿಪೇಯ್ಡ್ ಯೋಜನೆಯಲ್ಲಿ ಅನ್ವಯವಾಗುವ ರೂ 2000 ಮೌಲ್ಯದ ರೀಚಾರ್ಜ್ (50 ರೂಗಳ 40 ವೋಚರ್‌ಗಳು) ವೋಚರ್‌ಗಳನ್ನು ನೀಡುತ್ತಿದೆ. ಮೊದಲಿಗೆ AJio ಅಪ್ಲಿಕೇಶನ್‌ನಲ್ಲಿ 2500 ರೂಪಾಯಿಗಳ ಶಾಪಿಂಗ್‌ನಲ್ಲಿ 500 ರೂಪಾಯಿ ರಿಯಾಯಿತಿ ವೋಚರ್ ಇರುತ್ತದೆ. ಅಲ್ಲದೆ 500 ರೂಪಾಯಿ ಮೌಲ್ಯದ Netmeds ವ್ಯಾಲೆಟ್ ಕ್ಯಾಶ್ ಜೊತೆಗೆ ಗ್ರಾಹಕರಿಗೆ Yatra ಮೂಲಕ ಫ್ಲೈಟ್ ಬುಕಿಂಗ್‌ನಲ್ಲಿ 1500 ರೂಪಾಯಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರೀತಿಯಲ್ಲಿ ಸ್ಮಾರ್ಟ್ಫೋನ್ ಜೊತೆಗೆ ಒಟ್ಟಾರೆಯಾಗಿ 4500 ರೂಗಳ ಭಾರಿ ಪ್ರಯೋಜನಗಳನ್ನು ಪ್ರೀಮಿಯಂ ವೇಗಾನ್ ಲೆದರ್ ರೂಪಾಂತರದೊಂದಿಗೆ ಮಾತ್ರ ನೀಡುತ್ತಿದೆ.

ಮೊಟೊ G34 5G ವಿಶೇಷಣಗಳು

Moto G34 5G ಸ್ಮಾರ್ಟ್ಫೋನ್ 6.5 ಇಂಚಿನ LCD ಜೊತೆಗೆ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ (ಟಚ್ ಸ್ಯಾಂಪ್ಲಿಂಗ್ ರೇಟ್ – 240Hz) ಬೆಂಬಲದೊಂದಿಗೆ ಬರುತ್ತದೆ. ಡಿಸ್ಪ್ಲೇ ರಕ್ಷಣೆಗಾಗಿ ಪಾಂಡ ಗ್ಲಾಸ್ ಜೊತೆಗೆ 580nits ವರೆಗಿನ ಹೊಳಪನ್ನು ಬೆಂಬಲಿಸುತ್ತದೆ. 50MP ಪ್ರೈಮರಿ ಸೆನ್ಸರ್ ಮತ್ತು 2MP ಮ್ಯಾಕ್ರೋ ಸೆನ್ಸರ್ಗಳೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಫೋನ್ ಮುಂಭಾಗದಲ್ಲಿ 16MP ಸೆನ್ಸರ್ ಅನ್ನು ಕಂಪನಿ ನೀಡಿದೆ.

ಇದು 8GB ವರೆಗಿನ LPDDR4X RAM ಜೊತೆಗೆ RAM ವಿಸ್ತರಣೆಯನ್ನು 16GB ವರೆಗೆ ಬೆಂಬಲಿಸುತ್ತದೆ ಜೊತೆಗೆ 128GB ಸ್ಟೋರೇಜ್ UFS 2.2 ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಹೊಂದಿದೆ. ಇದು Qualcomm Snapdragon 695 ಪ್ರೊಸೆಸರ್ನಿಂದ ಚಾಲಿತವಾಗಿದೆ. ಸ್ಮಾರ್ಟ್ಫೋನ್ 20W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಸ್ಮಾರ್ಟ್ಫೋನ್ ಬಾಕ್ಸ್‌ನ ಹೊರಗೆ ಆಂಡ್ರಾಯ್ಡ್ 14 ನಲ್ಲಿ ರನ್ ಆಗುತ್ತದೆ. ಫಿಂಗರ್‌ಪ್ರಿಂಟ್ ಸುರಕ್ಷತೆ ಮತ್ತು ಫೇಸ್ ಅನ್‌ಲಾಕ್‌ಗೆ ಬೆಂಬಲವಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo