ಅಮೇರಿಕಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ಮೊಟೊರೊಲಾ ತನ್ನ ಲೇಟೆಸ್ಟ್ Moto G24 Power ಬಜೆಟ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಮೊಟೊರೊಲಾ ಸ್ಮಾರ್ಟ್‌ಫೋನ್ 6000mAh ನ ಪ್ರಬಲ ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನ್‌ನ ಬೆಲೆ 9,000 ರೂಗಿಂತ ಕಡಿಮೆಯಿದೆ. ಲೆನೊವೊ ಒಡೆತನದ ಕಂಪನಿಯು ಭಾರತದಲ್ಲಿ ಅತಿ ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು ಹಲವು ಬ್ರ್ಯಾಂಡ್‌ಗಳಿಗೆ ಸವಾಲು ಹಾಕಿದೆ. ದೊಡ್ಡ ಬ್ಯಾಟರಿ ಜೊತೆಗೆ ಈ ಸ್ಮಾರ್ಟ್‌ಫೋನ್ 50MP ಕ್ಯಾಮೆರಾದೊಂದಿಗೆ 8GB RAM ವರೆಗಿನ ವೈಶಿಷ್ಟ್ಯಗಳನ್ನು ಹೊಂದಿದೆ. ಮೋಟೊರೋಲದ ಈ ಹೊಸ ಬಜೆಟ್ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳನೊಮ್ಮೆ ತಿಳಿಯಿರಿ.
Also Read: 108MP ಕ್ಯಾಮೆರಾದೊಂದಿಗೆ OnePlus Nord N30 5G ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
➥ಮೊಟೊರೊಲಾದಿಂದ ಈ ಬಜೆಟ್ ಸ್ಮಾರ್ಟ್ಫೋನ್ 6.56 ಇಂಚಿನ HD+ ಡಿಸ್ಪ್ಲೇಯೊಂದಿಗೆ 90Hz ರಿಫ್ರೆಶ್ ರೇಟ್‌ನೊಂದಿಗಿನ ಬರುತ್ತದೆ. ಫೋನ್‌ನ ಡಿಸ್ಪ್ಲೇ ಪಂಚ್-ಹೋಲ್ ವಿನ್ಯಾಸದೊಂದಿಗೆ HD+ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ.
➥ಸ್ಮಾರ್ಟ್‌ಫೋನ್ MediaTek Helio G85 ಪ್ರೊಸೆಸರ್ ಈ ಫೋನ್‌ನಲ್ಲಿ ಲಭ್ಯವಿದ್ದು ಈ ಬಜೆಟ್ ಸ್ಮಾರ್ಟ್‌ಫೋನ್ ಎರಡು 4GB RAM + 128GB ಮತ್ತು 8GB RAM + 128GB ಎಂಬ ಸ್ಟೋರೇಜ್ ರೂಪಾಂತರಗಳಲ್ಲಿ ಬೆಂಬಲವಿದೆ. ಅಲ್ಲದೆ ಇದನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.
➥ಈ ಬಜೆಟ್ ಸ್ಮಾರ್ಟ್‌ಫೋನ್ 30W USB ಟೈಪ್ C ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 6000mAh ಬ್ಯಾಟರಿಯನ್ನು ಹೊಂದಿದೆ. Moto G24 Power ಫೋನ್ ನೀರು ನಿವಾರಕ ವಿನ್ಯಾಸವನ್ನು ಹೊಂದಿದೆ.
➥ಇದರ ಹೊರತಾಗಿ ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಈ ಫೋನ್‌ನೊಂದಿಗೆ 3 ವರ್ಷಗಳವರೆಗೆ ಸೆಕ್ಯೂರಿಟಿ ಆಪ್ಡೇಟ್ಗಳನ್ನು ಕಂಪನಿ ನೀಡುತ್ತದೆ.
➥Moto G24 Power ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದು 50MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 2MP ಮ್ಯಾಕ್ರೋ ವಿಷನ್ ಕ್ಯಾಮೆರಾ ಫೋನ್‌ನಲ್ಲಿ ಲಭ್ಯವಿರುತ್ತದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ.
Motorolaದ ಈ ಬಜೆಟ್ ಸ್ಮಾರ್ಟ್‌ಫೋನ್ ಎರಡು 4GB RAM + 128GB ಮತ್ತು 8GB RAM + 128GB ಎಂಬ ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನ್‌ನ ಮೂಲ ಅಂದರೆ ಆರಂಭಿಕ ರೂಪಾಂತರದ ಬೆಲೆ 8,999 ರೂಗಳಾಗಿವೆ ಇದರ ಕ್ರಮವಾಗಿ ಅದೇ ಸಮಯದಲ್ಲಿ ಅದರ ಉನ್ನತ ರೂಪಾಂತರದ ಬೆಲೆ 9,999 ರೂಗಳಾಗಿವೆ. ನೀವು ಇದನ್ನು ಎರಡು ಇಂಕ್ ಬ್ಲೂ ಮತ್ತು ಗ್ಲೇಸಿಯರ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಫೋನ್ ಖರೀದಿಗೆ 750 ರೂ.ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇದರ ಮೊದಲ ಮಾರಾಟವು ಫೆಬ್ರವರಿ 7 ರಂದು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮತ್ತು ಮೊಟೊರೊಲಾದ ಇ-ಸ್ಟೋರ್‌ಗಳ ಮೂಲಕ ಆಸಕ್ತರು ಖರೀದಿಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ