6000mAh ಬ್ಯಾಟರಿಯ Moto G24 Power ಬಿಡುಗಡೆ! ಖರೀದಿಗೂ ಮುಂಚೆ ಈ ಟಾಪ್ 5 ಫೀಚರ್ ತಿಳಿಯಿರಿ

6000mAh ಬ್ಯಾಟರಿಯ Moto G24 Power ಬಿಡುಗಡೆ! ಖರೀದಿಗೂ ಮುಂಚೆ ಈ ಟಾಪ್ 5 ಫೀಚರ್ ತಿಳಿಯಿರಿ
HIGHLIGHTS

ಮೊಟೊರೊಲಾ ತನ್ನ ಲೇಟೆಸ್ಟ್ Moto G24 Power ಬಜೆಟ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಗೊಳಿಸಿದೆ.

Moto G24 Power ಸ್ಮಾರ್ಟ್‌ಫೋನ್ 6000mAh ಬ್ಯಾಟರಿ ಮತ್ತು 50MP ಪ್ರೈಮರಿ ಕ್ಯಾಮೆರಾವನ್ನು ಸಪೋರ್ಟ್ ಮಾಡುತ್ತದೆ.

ಅಮೇರಿಕಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ಮೊಟೊರೊಲಾ ತನ್ನ ಲೇಟೆಸ್ಟ್ Moto G24 Power ಬಜೆಟ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಮೊಟೊರೊಲಾ ಸ್ಮಾರ್ಟ್‌ಫೋನ್ 6000mAh ನ ಪ್ರಬಲ ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನ್‌ನ ಬೆಲೆ 9,000 ರೂಗಿಂತ ಕಡಿಮೆಯಿದೆ. ಲೆನೊವೊ ಒಡೆತನದ ಕಂಪನಿಯು ಭಾರತದಲ್ಲಿ ಅತಿ ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು ಹಲವು ಬ್ರ್ಯಾಂಡ್‌ಗಳಿಗೆ ಸವಾಲು ಹಾಕಿದೆ. ದೊಡ್ಡ ಬ್ಯಾಟರಿ ಜೊತೆಗೆ ಈ ಸ್ಮಾರ್ಟ್‌ಫೋನ್ 50MP ಕ್ಯಾಮೆರಾದೊಂದಿಗೆ 8GB RAM ವರೆಗಿನ ವೈಶಿಷ್ಟ್ಯಗಳನ್ನು ಹೊಂದಿದೆ. ಮೋಟೊರೋಲದ ಈ ಹೊಸ ಬಜೆಟ್ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳನೊಮ್ಮೆ ತಿಳಿಯಿರಿ.

Also Read: 108MP ಕ್ಯಾಮೆರಾದೊಂದಿಗೆ OnePlus Nord N30 5G ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

Moto G24 Power ಟಾಪ್ 5 ಫೀಚರ್ಗಳು

➥ಮೊಟೊರೊಲಾದಿಂದ ಈ ಬಜೆಟ್ ಸ್ಮಾರ್ಟ್ಫೋನ್ 6.56 ಇಂಚಿನ HD+ ಡಿಸ್ಪ್ಲೇಯೊಂದಿಗೆ 90Hz ರಿಫ್ರೆಶ್ ರೇಟ್‌ನೊಂದಿಗಿನ ಬರುತ್ತದೆ. ಫೋನ್‌ನ ಡಿಸ್ಪ್ಲೇ ಪಂಚ್-ಹೋಲ್ ವಿನ್ಯಾಸದೊಂದಿಗೆ HD+ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ.

➥ಸ್ಮಾರ್ಟ್‌ಫೋನ್ MediaTek Helio G85 ಪ್ರೊಸೆಸರ್ ಈ ಫೋನ್‌ನಲ್ಲಿ ಲಭ್ಯವಿದ್ದು ಈ ಬಜೆಟ್ ಸ್ಮಾರ್ಟ್‌ಫೋನ್ ಎರಡು 4GB RAM + 128GB ಮತ್ತು 8GB RAM + 128GB ಎಂಬ ಸ್ಟೋರೇಜ್ ರೂಪಾಂತರಗಳಲ್ಲಿ ಬೆಂಬಲವಿದೆ. ಅಲ್ಲದೆ ಇದನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.

➥ಈ ಬಜೆಟ್ ಸ್ಮಾರ್ಟ್‌ಫೋನ್ 30W USB ಟೈಪ್ C ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 6000mAh ಬ್ಯಾಟರಿಯನ್ನು ಹೊಂದಿದೆ. Moto G24 Power ಫೋನ್ ನೀರು ನಿವಾರಕ ವಿನ್ಯಾಸವನ್ನು ಹೊಂದಿದೆ.

➥ಇದರ ಹೊರತಾಗಿ ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಈ ಫೋನ್‌ನೊಂದಿಗೆ 3 ವರ್ಷಗಳವರೆಗೆ ಸೆಕ್ಯೂರಿಟಿ ಆಪ್ಡೇಟ್ಗಳನ್ನು ಕಂಪನಿ ನೀಡುತ್ತದೆ.

➥Moto G24 Power ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದು 50MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 2MP ಮ್ಯಾಕ್ರೋ ವಿಷನ್ ಕ್ಯಾಮೆರಾ ಫೋನ್‌ನಲ್ಲಿ ಲಭ್ಯವಿರುತ್ತದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ.

ಮೊಟೊ G24 Power ನ ಬೆಲೆ

Motorolaದ ಈ ಬಜೆಟ್ ಸ್ಮಾರ್ಟ್‌ಫೋನ್ ಎರಡು 4GB RAM + 128GB ಮತ್ತು 8GB RAM + 128GB ಎಂಬ ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನ್‌ನ ಮೂಲ ಅಂದರೆ ಆರಂಭಿಕ ರೂಪಾಂತರದ ಬೆಲೆ 8,999 ರೂಗಳಾಗಿವೆ ಇದರ ಕ್ರಮವಾಗಿ ಅದೇ ಸಮಯದಲ್ಲಿ ಅದರ ಉನ್ನತ ರೂಪಾಂತರದ ಬೆಲೆ 9,999 ರೂಗಳಾಗಿವೆ. ನೀವು ಇದನ್ನು ಎರಡು ಇಂಕ್ ಬ್ಲೂ ಮತ್ತು ಗ್ಲೇಸಿಯರ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಫೋನ್ ಖರೀದಿಗೆ 750 ರೂ.ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇದರ ಮೊದಲ ಮಾರಾಟವು ಫೆಬ್ರವರಿ 7 ರಂದು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮತ್ತು ಮೊಟೊರೊಲಾದ ಇ-ಸ್ಟೋರ್‌ಗಳ ಮೂಲಕ ಆಸಕ್ತರು ಖರೀದಿಸಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo