Moto G05 Launched In India: ಭಾರತದಲ್ಲಿ ಮೊಟೊರೊಲಾ ಕಂಪನಿ ತನ್ನ ಲೇಟೆಸ್ಟ್ ಬಜೆಟ್ Moto G05 ಸ್ಮಾರ್ಟ್‌ಫೋನ್ 50MP ಕ್ಯಾಮೆರಾದೊಂದಿಗೆ ಆರಂಭಿಕ ಕೇವಲ 6,999 ರೂಗಳಿಗೆ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ಮಾದರಿಯಲ್ಲಿ ಬಿಡುಗಡೆಯಾಗಿದ್ದು ಬಿಡುಗಡೆಯ ಕೊಡುಗೆಯಾಗಿ ಭಾರತದಲ್ಲಿ ಜಿಯೋ ಬಳಕೆದಾರರಿಗೆ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತಿದೆ. Moto G05 ಸ್ಮಾರ್ಟ್‌ಫೋನ್ ಆಫರ್ ಬೆಲೆಯೊಂದಿಗೆ ಇದರ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಈ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ಮಾದರಿಯಲ್ಲಿ ಬಿಡುಗಡೆಯಾಗಿದ್ದು 4GB RAM ಮತ್ತು 64GB ಸ್ಟೋರೇಜ್ ಸ್ಟೋರೇಜ್ ಕಾನ್ಫಿಗರೇಶನ್‌ಗಾಗಿ ಕೇವಲ 6,999 ರೂಗಳಿಗೆ ಕಂಪನಿ ಬಿಡುಗಡೆಗೊಳಿಸಿದೆ. ಆದರೆ ಬಿಡುಗಡೆಯ ಕೊಡುಗೆಯಾಗಿ ಭಾರತದಲ್ಲಿ ಜಿಯೋ ಬಳಕೆದಾರರು ಈ Moto G05 ಸ್ಮಾರ್ಟ್ಫೋನ್ ಖರೀದಿಸಿದರೆ ಹೆಚ್ಚುವರಿಯಾಗಿ 2000 ರೂಗಳ ಕ್ಯಾಷ್‌ಬ್ಯಾಕ್ ಸಹ ಪಡೆಯಬಹುದು. ಅಲ್ಲದೆ Moto G05 ಸ್ಮಾರ್ಟ್ಫೋನ್ ಖರೀದಿಸಿದ ಜಿಯೋ ಬಳಕೆದಾರರು 449 ರೂಗಳಿಗಿಂತ ಅಧಿಕ ಬೆಲೆಯ ಯೋಜನೆಯನ್ನು ಬಳಸಿದರೆ ಮತ್ತೆ ಹೆಚ್ಚುವರಿಯ 3000 ರೂಗಳ ವೋಚರ್ ಅನುಕೂಲಗಳನ್ನು ಸಹ ಪಡೆಯುವ ಅವಕಾಶವನ್ನು ಹೊಂದಿರುತ್ತಾರೆ.
Moto G05 ಸ್ಮಾರ್ಟ್ಫೋನ್ ಭಾರತದಲ್ಲಿ ಇಂದು ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು 13ನೇ ಜನವರಿ 2025 ಮಧ್ಯಾಹ್ನ 12:00 ಗಂಟೆಯಿಂದ ಫ್ಲಿಪ್ಕಾರ್ಟ್ ಇಂಡಿಯಾ ಮತ್ತು ಮೋಟೋ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ. Moto G05 ಸ್ಮಾರ್ಟ್ಫೋನ್ Plum Red, Fresh Lavender, Forest Green ಮತ್ತು Misty Blue ಎಂಬ ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.
Also Read: Investment Scheme 2025: ನಕಲಿ ಹೂಡಿಕೆಯಲ್ಲಿ ಕೋಟ್ಯಾಂತರ ಹಣ ಕಳೆದುಕೊಂಡ ನಟಿ! ವಂಚನೆಯ ಅಸಲಿ ಕಹಾನಿ ಏನು?
Moto G05 ಸ್ಮಾರ್ಟ್ಫೋನ್ 90Hz ರಿಫ್ರೆಶ್ ರೇಟ್ನೊಂದಿಗೆ 6.67 ಇಂಚಿನ HD+ (720×1612 ಪಿಕ್ಸೆಲ್‌ಗಳು) LCD ಅನ್ನು ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ Moto G05 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP52 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ.
Moto G05 ಸ್ಮಾರ್ಟ್ಫೋನ್ MediaTek Helio G81 Extreme ಪ್ರೊಸೆಸರ್‌ನೊಂದಿಗೆ ಬರುತ್ತದೆ. Moto G05 ಸ್ಮಾರ್ಟ್ಫೋನ್ ಇದರ 4GB RAM + ವರ್ಚುಯಲ್ 12GB RAM ಆನ್‌ಬೋರ್ಡ್ ಮೆಮೊರಿಯನ್ನು ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 5200mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.