Moto G05 India Launch ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
ಭಾರತದಲ್ಲಿ ಮುಂಬರಲಿರುವ Moto G05 ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಲು ಸಜ್ಜಾಗಿದೆ.
Moto G05 ಸ್ಮಾರ್ಟ್‌ಫೋನ್ 7ನೇ ಜನವರಿ 2025 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.
Moto G05 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸ್ಟೋರೇಜ್ ಸುಮಾರು 7,999 ರೂಗಳಿಗೆ ನಿರೀಕ್ಷಿಸಬಹುದು.
Moto G05 India Launch: ಭಾರತದಲ್ಲಿ ಮೋಟೋ ಕಂಪನಿಯ ಬಜೆಟ್ ವಿಭಾಗದಲ್ಲಿ ತನ್ನ ಮುಂಬರಲಿರುವ Moto G05 ಸ್ಮಾರ್ಟ್‌ಫೋನ್ ಬಿಡುಗಡೆಯನ್ನು 7ನೇ ಜನವರಿ 2025 ರಂದು ಮಾಡಲು ಸಜ್ಜಾಗಿದೆ. ಇದರ ಬಗ್ಗೆ ಸ್ವತಃ ಮೋಟೊರೋಲ ಕಂಪನಿಯೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇದರ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ. ಈ Moto G05 ಸ್ಮಾರ್ಟ್‌ಫೋನ್ ಡುಯಲ್ ಕ್ಯಾಮೆರಾ ಸೆಟಪ್ ಜೊತೆಗೆ ಬರಲಿದ್ದು ಇದರ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
ಮುಂಬರಲಿರುವ Moto G05 ನಿರೀಕ್ಷಿತ ಫೀಚರ್ಗಳೇನು?
ಜನಪ್ರಿಯ ಮೋಟೊರೋಲ ಕಂಪನಿಯ ಮುಂಬರಲಿರುವ Moto G05 ಸ್ಮಾರ್ಟ್‌ಫೋನ್ ನಿರೀಕ್ಷಿತ ಫೀಚರ್ಗಳೇನು ಎಂದು ನೋಡುವುದಾದರೆ ಫೋನ್ 1604 × 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.67 ಇಂಚಿನ HD ಪ್ಲಸ್ LCD ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 1000 ನಿಟ್ಸ್ ಗರಿಷ್ಠ ಹೊಳಪನ್ನು ಪಡೆಯುತ್ತದೆ ಮತ್ತು ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲ್ಪಟ್ಟಿದೆ. Moto G05 ಸ್ಮಾರ್ಟ್‌ಫೋನ್ ಎಲ್ಇಡಿ ಫ್ಲ್ಯಾಷ್ನೊಂದಿಗೆ 50MP ಪ್ರೈಮರಿ ಬ್ಯಾಕ್ ಕ್ಯಾಮೆರಾವನ್ನು ಹೊಂದಿದೆ. Moto G05 ಸ್ಮಾರ್ಟ್‌ಫೋನ್ 8MP ಮುಂಭಾಗದ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.
Moto G05 ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 15 ನಲ್ಲಿ ರನ್ ಆಗುತ್ತದೆ. ಇದು 4GB LPDDR4X RAM ಅನ್ನು ಹೊಂದಿದ್ದು ಹೆಚ್ಚುವರಿಯಾಗಿ ಮತ್ತೆ 4GB ವರ್ಚುಯಲ್ ಸ್ಟೋರೇಜ್ ವಿಸ್ತರಿಸಬಹುದಾಗಿದೆ. ಅಲ್ಲದೆ Moto G05 ಸ್ಮಾರ್ಟ್‌ಫೋನ್ 64GB ಸ್ಟೋರೇಜ್ ಹೊಂದಿದ್ದು ಇದನ್ನು SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು. Moto G05 ಸ್ಮಾರ್ಟ್‌ಫೋನ್ ಹೊಸ MediaTek Helio G81 Ultra ಪ್ರೊಸೆಸರ್ನಿಂದ ನಡೆಯುವುದಾಗಿ ನಿರೀಕ್ಷಿಸಲಾಗಿದೆ.
ಮುಂಬರಲಿರುವ Moto G05 ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Moto G05 ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಇದರ ಫೀಚರ್ಗಳನ್ನು ನೋಡಿ ಹೇಳುವುದಾದರೆ ಇದೊಂದು ಎಂಟ್ರಿ ಲೆವೆಲ್ ಫೋನ್ ಅಗಲಿದ್ದು ಸುಮಾರು 8000 ರೂಗಳೊಳಗೆ ನಿರೀಕ್ಷಿಸಬಹುದು. ಫೋನ್ ಕೆಲವ ಒಂದೇ ಒಂದು ರೂಪಾಂತರದಲ್ಲಿ ಅಂದ್ರೆ 4GB RAM ಮತ್ತು 64GB ಸ್ಟೋರೇಜ್ ಸುಮಾರು 7,999 ರೂಗಳಿಗೆ ಬಿಡುಗಡೆಯಾಗಬಹುದು.
ಭಾರತದಲ್ಲಿ Moto G05 ಸ್ಮಾರ್ಟ್‌ಫೋನ್ ನಿಮಗೆ ಫಾರೆಸ್ಟ್ ಗ್ರೀನ್ ಮತ್ತು ಪಾಮ್ ರೆಡ್ ಬಣ್ಣಗಳಲ್ಲಿ ಬರಲಿದೆ. Moto G05 ಸ್ಮಾರ್ಟ್‌ಫೋನ್ ರೂಢಿಯಲ್ಲಿರುವಂತೆ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟಕ್ಕೆ ಪರಿಚಯಿಸಿದರೆ ಬಿಡುಗಡೆಯಂದು ಬ್ಯಾಂಕ್ ಆಫರ್ ಅಡಿಯಲ್ಲಿ ಸುಮಾರು 1000 ರೂಗಳ ಲಿಮಿಟೆಡ್ ಟೈಮ್ ಆಫರ್ ಸಹ ನಿರೀಕ್ಷಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile