ಕೇವಲ ₹7000 ರೂಗಳಿಗೆ 50MP ಕ್ಯಾಮೆರಾ ಮತ್ತು Dolby Atmos ಸೌಂಡ್‌ನೊಂದಿಗೆ Moto G04s ಬಿಡುಗಡೆ!
Moto G04s ಸ್ಮಾರ್ಟ್ಫೋನ್ ಅಧಿಕೃತವಾಗಿ ನನ್ನೇ ಅಂದ್ರೆ 30ನೇ ಮೇ 2024 ರಂದು ಬಿಡುಗಡೆಯಾಗಿದೆ.
Moto G04s ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು Dolby ಅಟ್ಮೋಸ್ ಸೌಂಡ್‌ನೊಂದಿಗೆ ಬರುತ್ತದೆ.
Moto G04s ಸ್ಮಾರ್ಟ್ಫೋನ್ 5ನೇ ಜೂನ್ 2024 ರಿಂದ Flipkart ಮೂಲಕ ಮೊದಲ ಮಾರಾಟ ಕೇವಲ ₹6,999 ರೂಗಳಿಂದ ಶುರುವಾಗಲಿದೆ.
ಭಾರತದಲ್ಲಿ ಮೊಟೊರೊಲಾ ಕಂಪನಿ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ನನ್ನೇ ಅಂದ್ರೆ 30ನೇ ಮೇ 2024 ರಂದು ಬಿಡುಗಡೆಯಾಗಿದೆ. ಮೋಟೋ ಈಗಾಗಲೇ ಈ ಸರಣಿಯಲ್ಲಿ Moto G04 ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದ್ದು ಅದರ ಅಡಿಯಲ್ಲಿ ಮತ್ತೊಂದು ಈ Moto G04s ಅನ್ನು ಒಂದಿಷ್ಟು ಹೆಚ್ಚುರಿಯ ಆಕರ್ಷಿತ ಫೀಚರ್ಗಳನ್ನು ಸೇರಿಸಿ ಬಿಡುಗಡೆಗೊಳಿಸಿದೆ. Moto G04s ಸ್ಮಾರ್ಟ್ಫೋನ್ ಪ್ರಮುಖ ವಿಶೇಷ ಅಥವಾ ಇದರಲ್ಲಿನ ಬಹುದೊಡ್ಡ ವ್ಯತ್ಯಾಸವೆಂದರೆ 50MP ಕ್ಯಾಮೆರಾ ಮತ್ತು Dolby ಅಟ್ಮೋಸ್ ಸೌಂಡ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್ಫೋನ್ ಮತ್ತಷ್ಟು ವಿಶೇಷತೆಗಳೊಂದಿಗೆ ಬೆಲೆ ಮತ್ತು ಆಫರ್ಗಳ ಬಗ್ಗೆ ತಿಳಿಯಿರಿ.
Moto G04s ಬೆಲೆ ಮತ್ತು ಲಭ್ಯತೆ:
ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮತನಡುವುದಾದರೆ ಕಂಪನಿ ಕೇವಲ ಒಂದೇ ಒಂದು ವೇರಿಯಂಟ್ ಮೂಲಕ ಬಿಡುಗಡೆಗೊಳಿಸಿದ್ದು 4GB RAM ಮತ್ತು 64GB ಸ್ಟೋರೇಜ್ ಮಾತ್ರ ಲಭ್ಯವಿದೆ. ಕಂಪನಿ ಈ Moto G04s ಕೇವಲ ಎಂಟ್ರಿ ಲೆವೆಲ್ ಬಳಕೆದಾರರನ್ನು ಗಮನದಟ್ಟುಕೊಂಡು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಈ ಸ್ಮಾರ್ಟ್ಫೋನ್ ಕೇವಲ 4G ನೆಟ್ವರ್ಕ್ ಅನ್ನು ಸಪೋರ್ಟ್ ಮಾಡುತ್ತದೆ ಎನ್ನುವುದನ್ನು ನೀವು ಗಮನಿಸಬೇಕಿರುವ ವಿಷಯವಾಗಿದೆ. Moto G04s ಸ್ಮಾರ್ಟ್ಫೋನ್ ನಿಮಗೆ ಒಟ್ಟಾರೆಯಾಗಿ ಮ್ಯಾಟ್ ಬ್ಲಾಕ್, ಮ್ಯಾಟ್ ಬ್ಲೂ, ಮ್ಯಾಟ್ ಗ್ರೀನ್ ಮತ್ತು ಮ್ಯಾಟ್ ಆರೆಂಜ್ ಎಂಬ 4 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಸ್ಮಾರ್ಟ್ಫೋನ್ 5ನೇ ಜೂನ್ 2024 ರಿಂದ Flipkart ಮೂಲಕ ಮೊದಲ ಮಾರಾಟ ಕೇವಲ ₹6,999 ರೂಗಳಿಂದ ಶುರುವಾಗಲಿದೆ.
ಮೊಟೊರೊಲಾ G04s ಫೀಚರ್ ಮತ್ತು ವಿಶೇಷಣಗಳ ಮಾಹಿತಿ:
ಈ ಮೋಟೊರೋಲದ ಈ ಲೇಟೆಸ್ಟ್ ಸ್ಮಾರ್ಟ್ಫೋನ್ ನಿಮಗೆ 6.6 ಇಂಚಿನ IPS LCD HD+ ಡಿಸ್ಪ್ಲೇಯೊಂದಿಗೆ 90Hz ರಿಫ್ರೇಶ್ ರೇಟ್ ನೀಡುವ ಪ್ಯಾನಲ್ನೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ Corning Gorilla Glass 3 ಅನ್ನು ಡಿಸ್ಪ್ಲೇ ಪ್ರೊಟೆಕ್ಷನ್ಗಾಗಿ ಹೊಂದಿದೆ. ಇದರೊಂದಿಗೆ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಎಡರಲ್ಲಿ ಕೇವಲ ಒಂದೇ ಒಂದು ಪ್ರೈಮರಿ ಲೆನ್ಸ್ ನೀಡಿದ್ದು 50MP AI ವೈಡ್ ಸೆನ್ಸರ್ f/1.8 ಅಪರ್ಚರ್ನೊಂದಿಗೆ ನೀಡಲಾಗಿದೆ. ಇದರೊಂದಿಗೆ ಹಿಂಭಾಗದಲ್ಲಿ LED ಫ್ಲಾಶ್ ಮತ್ತು HDR ಮೂಡ್ ಅನ್ನು ಇದರಲ್ಲಿ ನೀಡಲಾಗಿದೆ. ಇದರ ಕ್ರಮವಾಗಿ ಇದರ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ನಿಮಗೆ 5MP ವೈಡ್ ಸೆನ್ಸರ್ f/2.2 ಅಪರ್ಚರ್ನೊಂದಿಗೆ ನೀಡಲಾಗಿದೆ.
ಇದರ ಮತ್ತೊಂದು ವಿಶೇಷತೆಯನ್ನು ನೋಡುವುದಾದರೆ ಇದರಲ್ಲಿ ಈ ಬೆಲೆಗೆ ಯಾರು ನೀಡದ Dolby Atmos ಸೌಂಡ್‌ನೊಂದಿಗೆ ಬರುವ ಈ Moto G04s ಸ್ಮಾರ್ಟ್ಫೋನ್ ಡಿಸ್ಪ್ಲೇ ಮತ್ತು ಸೌಂಡ್ ಅನುಭವವನ್ನು ಅದ್ದೂರಿಯಾಗಿ ನೀಡುತ್ತಿದೆ. ಅಲ್ಲದೆ ಸ್ಮಾರ್ಟ್ಫೋನ್ Unisoc T606 ಪ್ರೊಸೆಸರ್ನೊಂದಿಗೆ ಆಂಡ್ರಾಯ್ಡ್ 14 ಪ್ಯೂರ್ ಸ್ಟಾಕ್ ಆಂಡ್ರಾಯ್ಡ್ ಅನುಭವದೊಂದಿಗೆ ಬರುತ್ತದೆ. ಈಗಾಗಲೇ ಮೇಲೆ ತಿಳಿಸಿರುವಂತೆ 4GB RAM ಮತ್ತು 64GB ಸ್ಟೋರೇಜ್ ಮೇರೆಗೆ ಬಿಡುಗಡೆಯಾಗಿದೆ. ಕೊನೆಯದಾಗಿ ಸ್ಮಾರ್ಟ್ಫೋನ್ನ್ 5000mAh ಬ್ಯಾಟರಿಯನ್ನು 15W ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ ಬಿಡುಗಡೆಯಾಗಿದೆ.
Also Read: Vodafone idea ಬಳಕೆದಾರರಿಗೆ ಗುಡ್ ನ್ಯೂಸ್! ಉಚಿತ Netflix ಜೊತೆಗೆ 2 ಹೊಸ ರಿಚಾರ್ಜ್ ಯೋಜನೆ ಪರಿಚಯ!
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile