ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಮೋಟೋರೊಲ ಭಾರತದಲ್ಲಿ ತನ್ನ ಲೇಟೆಸ್ಟ್ Moto G04 ಸ್ಮಾರ್ಟ್ಫೋನ್ ಅನ್ನು ನೆನ್ನೆ ಅಂದ್ರೆ 15ನೇ ಫೆಬ್ರವರಿ 2024 ರಂದು ಕೈಗೆಟಕುವ ಬೆಲೆಗೆ ಭಾರಿ ಆಫರ್ಗಳೊಂದಿಗೆ ಅಧಿಕೃತವಾಗಿ ಬಿಡುಗಡೆಯಾಗಿದೆ. Moto G04 ಸ್ಮಾರ್ಟ್ಫೋನ್ ಅನ್ನು ಆಸಕ್ತರು Flipkart ಮೂಲಕ ಖರೀದಿಸಬಹುದು. ಇದರ ಹೈಲೈಟ್ ಅಂದರೆ ಇದರ ಬೆಲೆ ಮತ್ತು 5000mAh ಬ್ಯಾಟರಿ, ಡಾಲ್ಬಿ ಅಟ್ಮಾಸ್ (Dolby Atmos) ಸ್ಪೀಕರ್, ಉತ್ತಮ ಪ್ರೊಸೆಸರ್ ಮತ್ತು 90Hz ರಿಫ್ರೇಶ್ ರೇಟ್ ಡಿಸ್ಪ್ಲೇಯಾಗಿದೆ. ಡಿಸ್ಪ್ಲೇಯಾಗಿದೆ. ನೀವು ನಿಮ್ಮ ಬಜೆಟ್ ಒಳಗೆ ಈ Moto G04 ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಮೊದಲು ಇದರ ಟಾಪ್ 5 ಫೀಚರ್ಗಳನೋಮ್ಮೆ ತಿಳಿದಿಕೊಳ್ಳಿರಿ.
ಮೋಟೋ ಜಿ04 ಸರಣಿಯನ್ನು ಕಂಪನಿ ಕಾನ್ಕಾರ್ಡ್ ಬ್ಲಾಕ್, ಸೀ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್‌ರೈಸ್ ಆರೆಂಜ್ ನಾಲ್ಕು ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಸ್ಮಾರ್ಟ್‌ಫೋನ್ ಅಕ್ರಿಲಿಕ್ ಗ್ಲಾಸ್ ಫಿನಿಶ್ ಅನ್ನು ಮ್ಯಾಟ್ ವಿನ್ಯಾಸದೊಂದಿಗೆ ಹೊಂದಿದೆ. ಅದು ಗೀರುಗಳಿಗೆ ನಿರೋಧಕವಾಗಿಸುತ್ತದೆ. Moto G04 ಎರಡು ಮೆಮೊರಿ ಮತ್ತು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. 4GB RAM + 64GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ 6,249 ರೂಗಳಾಗಿದ್ದು ಇದರ ಕ್ರಮವಾಗಿ 7,999 ರೂಗಳಾಗಿವೆ. ಅಲ್ಲದೆ ಈ ಸ್ಮಾರ್ಟ್ಫೋನ್ Flipkart, Motorola.in ಮತ್ತು ಭಾರತದಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ 22 ಫೆಬ್ರವರಿ 2024 ರಿಂದ 12PM ನಿಂದ ಮಾರಾಟವಾಗಲಿದೆ.
ಮೋಟೋ ಜಿ04 ಸ್ಮಾರ್ಟ್ಫೋನ್ 6.6 ಇಂಚಿನ ದೊಡ್ಡ ಡಿಸ್ಪ್ಲೇ ಜೊತೆಗೆ 90 Hz ರಿಫ್ರೆಶ್ ರೇಟ್ ಮತ್ತು ಕ್ಯಾಮರಾ ಕಟೌಟ್ ಅನ್ನು ಹೊಂದಿದೆ. ಇದು ಸುತ್ತುವರಿದ ಬೆಳಕಿನ ಪ್ರಕಾರ ಹೊಳಪು ಮತ್ತು ಬಣ್ಣವನ್ನು ಸರಿಹೊಂದಿಸಬಹುದು. ಈ ಮೂಲಕ ನೀವು ಉತ್ತಮವಾದ ವಿಡಿಯೋ ಅಥವಾ ಸಿನಿಮಾಗಳ ಮನೋರಂಜನೆಯನ್ನು ಆನಂದಿಸಬಹುದು. ಅಲ್ಲದೆ ಫೋನ್ ಗರಿಗರಿಯಾದ ಮತ್ತು ಕ್ಲಿಯರ್ ವಾಯ್ಸ್ ಅನ್ನು ನೀಡುವ ಡಾಲ್ಬಿ ಅಟ್ಮಾಸ್ (Dolby Atmos) ಸ್ಪೀಕರ್ ಅನ್ನು ಸಹ ಹೊಂದಿದೆ.
ಮೋಟೋ ಜಿ04 ಸ್ಮಾರ್ಟ್ಫೋನ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ನೋಡುವುದಾದರೆ ಫೋನ್ ಇತ್ತೀಚಿನ ಆವೃತ್ತಿಯಾದ ಆಂಡ್ರಾಯ್ಡ್ 14 ನಲ್ಲಿ ರನ್ ಆಗುತ್ತದೆ. ಇದು ಬಳಕೆದಾರರಿಗೆ ತಮ್ಮ ಡಿವೈಸ್ ಕಸ್ಟಮೈಸ್ ಮಾಡಲು ಸುರಕ್ಷಿತಗೊಳಿಸಲು ಮತ್ತು ಪ್ರವೇಶಿಸಲು ಅನುಮತಿಸುವ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಮಾರ್ಟ್ಫೋನ್ ಒಳಗೆ ಇದರ OS ಹೆಲ್ತ್ ಸುರಕ್ಷತೆ ಮತ್ತು ಡೇಟಾಕ್ಕಾಗಿ ಗೌಪ್ಯತೆ ನವೀಕರಣಗಳನ್ನು ಸಹ ಒಳಗೊಂಡಿದೆ.
Moto G04 8GB ಅಥವಾ 4GB RAM ಅನ್ನು ಹೊಂದಿದ್ದು RAM ಬೂಸ್ಟ್ ವೈಶಿಷ್ಟ್ಯದೊಂದಿಗೆ 16GB ಗೆ ಹೆಚ್ಚಿಸಬಹುದು. ಇದು UNISOC T606 ಚಿಪ್‌ಸೆಟ್ ಮತ್ತು UFS 2.2 ಸ್ಟೋರೇಜ್ ಅನ್ನು ಹೊಂದಿದ್ದು ಅದು ವೇಗವಾಗಿ ಮತ್ತು ಮೃದುವಾಗಿರುತ್ತದೆ. ಇದು 64GB ಅಥವಾ 128GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದ್ದು ಮೈಕ್ರೋ SD ಕಾರ್ಡ್‌ನೊಂದಿಗೆ 1TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದಾಗಿದೆ. ಇದು ಮೂರು ಸಿಮ್ ಕಾರ್ಡ್‌ಗಳಿಗೆ ಸ್ಲಾಟ್ ಅನ್ನು ಸಹ ಹೊಂದಿದ್ದು ಎರಡು ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಬಳಸಲು ಅನುವು ಮಾಡಿಕೊಡುತ್ತದೆ.
ಈ ಮೊಟೋ ಸ್ಮಾರ್ಟ್ಫೊನ್ ನಿಮಗೆ 5000mAh ಬ್ಯಾಟರಿಯನ್ನು ಹೊಂದಿದ್ದು ಅದು 15W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು 16MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 5MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದ್ದು ಅದು ಫೋಟೋಗಳನ್ನು ಹೆಚ್ಚಿಸಲು AI ಅನ್ನು ಬಳಸುತ್ತದೆ. ಇದು HDR, ಪೋರ್ಟ್ರೇಟ್ ಮೋಡ್, ಟೈಮ್‌ಲ್ಯಾಪ್ಸ್, ನೈಟ್ ವಿಷನ್ ಮತ್ತು ಲೆವೆಲರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!