Moto Edge 60 Fusion launch Confirmed
Moto Edge 60 Fusion launch Confirmed: ಮೋಟೋರೋಲಾ ತನ್ನ ಜನಪ್ರಿಯ ಮಧ್ಯಮ ಶ್ರೇಣಿಯ Moto Edge ಸರಣಿಯನ್ನು ಭಾರತದಲ್ಲಿ ವಿಸ್ತರಿಸಲು ಸಜ್ಜಾಗಿದ್ದು Moto Edge 60 Fusion ಬಿಡುಗಡೆ ಮಾಡಲಿದೆ. ಈ ಮುಂಬರಲಿರುವ Moto Edge 60 Fusion ಈ ಹೊಸ ಸ್ಮಾರ್ಟ್‌ಫೋನ್ 2ನೇ ಏಪ್ರಿಲ್ 2025 ರಂದು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ ಎಂದು ಕಂಪನಿ ಸ್ವತಃ ಟ್ವಿಟ್ಟರ್ ಮೂಲಕ ದೃಢಪಡಿಸಿದೆ. ಆದರೆ ಇದರ ಅಧಿಕೃತ ಬೆಲೆ ಮತ್ತು ವಿಶೇಷಣಗಳು ಇನ್ನೂ ಘೋಷಣೆಯಾಗಿಲ್ಲವಾದರೂ ಸೋರಿಕೆಗಳ ಆಧಾರದ ಮೇಲೆ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ.
Moto Edge 60 Fusion ಸ್ಮಾರ್ಟ್ಫೋನ್ 6.7 ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. Moto Edge 60 Fusion ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸಿಸ್ಟಂನೊಂದಿಗೆ ಬರುವ ನಿರೀಕ್ಷೆಗಳಿದ್ದು 50MP ಸೋನಿ LYT 700 ಪ್ರೈಮರಿ ಕ್ಯಾಮೆರಾವನ್ನು ಹೊಂದಿದ್ದು 13MP ಸೆಕೆಂಡರಿ ಸೆನ್ಸರ್ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಸೆನ್ಸರ್‌ನೊಂದಿಗೆ ಜೋಡಿಸಲಾಗಿದೆ. ಅಲ್ಲದೆ ಮುಂಭಾಗದಲ್ಲಿ ಸ್ಮಾರ್ಟ್ಫೋನ್ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಬಹುದು.
ಈ ಫೋನ್ MediaTek Dimensity 7400 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಎಂದು ವದಂತಿಗಳಿವೆ. ಸೋರಿಕೆಯಾದ ವರದಿಗಳು ಫೋನ್ ಆಘಾತಗಳು ಮತ್ತು ತೀವ್ರ ಪರಿಸ್ಥಿತಿಗಳ ವಿರುದ್ಧ ರಕ್ಷಣೆ ನೀಡುವ MLT 810 STD ಮಿಲಿಟರಿ ದರ್ಜೆಯ ಪ್ರಮಾಣೀಕರಣವನ್ನು ಹೊಂದಿರಬಹುದು ಎಂದು ಸೂಚಿಸುತ್ತವೆ. ಹೆಚ್ಚುವರಿಯಾಗಿ ಇದು IP69 ರೇಟಿಂಗ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಇದು ನೀರು ಮತ್ತು ಧೂಳು ಎರಡಕ್ಕೂ ಹೆಚ್ಚು ನಿರೋಧಕದೊಂದಿಗೆ ಪವರ್ ತುಂಬಲು 5000mAh ಬ್ಯಾಟರಿಯನ್ನು ನಿರೀಕ್ಷಿಸಲಾಗಿದೆ.
Also Read: 500 ರೂಗಳಿಗಿಂತ ಕಡಿಮೆ ಬೆಲೆಗೆ ಉಚಿತ OTT ಅಪ್‌ನೊಂದಿಗೆ ಡೇಟಾ, ಕರೆ ನೀಡುವ ಜಿಯೋ ಪ್ಲಾನ್ ಬಗ್ಗೆ ನಿಮಗೆಷ್ಟು ಗೊತ್ತು?
ಕಂಪನಿಯು ಇನ್ನೂ ನಿಖರವಾದ ಬೆಲೆಯನ್ನು ಬಹಿರಂಗಪಡಿಸದಿದ್ದರೂ Moto Edge 60 Fusion ಸ್ಮಾರ್ಟ್ಫೋನ್ ಬೆಲೆಯು ಅದರ ಹಿಂದಿನ ಫೋನ್‌ನಂತೆಯೇ ರೂ. 25,000 ಕ್ಕಿಂತ ಕಡಿಮೆ ಇರಬಹುದು. Moto Edge 60 Fusion ಸ್ಮಾರ್ಟ್ಫೋನ್ ಅನ್ನು ರೂ. 22,999 ಕ್ಕೆ ಬಿಡುಗಡೆ ಮಾಡಲಾಯಿತು ಆದ್ದರಿಂದ ಮೊಟೊರೊಲಾ ಹೊಸ Moto Edge 60 Fusion ಸ್ಮಾರ್ಟ್ಫೋನ್ ಸ್ಪರ್ಧಾತ್ಮಕ ಬೆಲೆಯನ್ನು ಮುಂದುವರಿಸಿದರೆ ಆಶ್ಚರ್ಯವೇನಿಲ್ಲ. ಫೋನ್‌ನ ಸೋರಿಕೆಯಾದ ರೆಂಡರ್‌ಗಳು ಇದು ನೀಲಿ, ಗುಲಾಬಿ ಮತ್ತು ನೇರಳೆ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ನಿರೀಕ್ಷಿಸಲಾಗಿದೆ.