Moto e13: ಮೊಟೊರೊಲಾ ಇತ್ತೀಚೆಗೆ ತನ್ನ ಹೊಸ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ Moto e13 ಅನ್ನು ಇ-ಸರಣಿಯ ಅಡಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹಿಂದೆ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಫೋನ್ ಅನ್ನು ಪರಿಚಯಿಸಿತ್ತು. ಈಗ ಭಾರತದಲ್ಲಿ Motorola ನ Moto E13 ಬಿಡುಗಡೆಯೊಂದಿಗೆ ಇದು ಶೀಘ್ರದಲ್ಲೇ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಈ Moto E13 ಸ್ಮಾರ್ಟ್ಫೋನ್ 2GB + 64GB ಕಾನ್ಫಿಗರೇಶನ್‌ಗಾಗಿ ರೂ 6,999 ಮತ್ತು 4GB + 64GB ಕಾನ್ಫಿಗರೇಶನ್‌ಗಾಗಿ ರೂ 7,999 ಆಗಿದೆ. Moto E13 ನ ಮೊದಲ ಮಾರಾಟವು ಫೆಬ್ರವರಿ 15 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ಇತರ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಪ್ರಾರಂಭವಾಗುತ್ತದೆ. ಇದು ಕಾಸ್ಮಿಕ್ ಬ್ಲಾಕ್, ಅರೋರಾ ಗ್ರೀನ್ ಮತ್ತು ಕ್ರೀಮಿ ವೈಟ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ.
https://twitter.com/motorolaindia/status/1623251164145029121?ref_src=twsrc%5Etfw
ಹೊಸ Moto e13 720×1600 ಪಿಕ್ಸೆಲ್ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ದರದೊಂದಿಗೆ 6.5 ಇಂಚಿನ HD+ LCD ಡಿಸ್ಪ್ಲೇಯನ್ನು ಪ್ರದರ್ಶಿಸುತ್ತದೆ. ಇದು UniSOC T606 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು 4GB RAM ಮತ್ತು 64GB ಸ್ಟೋರೇಜ್ ಜೊತೆಗೆ ಜೋಡಿಸಲಾಗಿದೆ. ಇದು Android 13 Go ಆವೃತ್ತಿಯನ್ನು ಬೂಟ್ ಮಾಡುತ್ತದೆ.
Moto E13 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು LED ಫ್ಲ್ಯಾಷ್ ಅನ್ನು ಹೊಂದಿದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಫೋನ್‌ನಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 5000mAh ಬ್ಯಾಟರಿ ಯೂನಿಟ್ ಮತ್ತು 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಬೆಂಬಲಿಸುತ್ತದೆ. ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ರೆ ಇದು ಮೈಕ್ರೋ-ಎಸ್‌ಡಿ ಕಾರ್ಡ್ ಸ್ಲಾಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಡಾಲ್ಬಿ ಅಟ್ಮಾಸ್ ಆಡಿಯೊಗೆ ಬೆಂಬಲವನ್ನು ಪಡೆಯುತ್ತದೆ. ಇದಲ್ಲದೆ ಫೋನ್‌ನಲ್ಲಿ IP52 ನ ರೇಟಿಂಗ್ ಅನ್ನು ನೀಡಲಾಗಿದೆ. ಇದು ಸ್ಪ್ಲಾಶ್-ರೆಸಿಸ್ಟೆಂಟ್ ಮಾಡುತ್ತದೆ. ಸಂಪರ್ಕ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ರೆ ಇದು ಡ್ಯುಯಲ್-ಸಿಮ್, 4G, ಬ್ಲೂಟೂತ್ 5.1, GPS ಮತ್ತು WiFi 802.11 ac ನೊಂದಿಗೆ ಬರುತ್ತದೆ.