Moto Edge 30 Fusion ಪ್ಯಾಂಟೋನ್ ಕಲರ್‌ನೊಂದಿಗೆ ಶೀಘ್ರದಲ್ಲೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

Moto Edge 30 Fusion ಪ್ಯಾಂಟೋನ್ ಕಲರ್‌ನೊಂದಿಗೆ ಶೀಘ್ರದಲ್ಲೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
HIGHLIGHTS

Moto Edge 30 Fusion ಬಾರ್ಡರ್‌ಲೆಸ್ 6.55-ಇಂಚಿನ pOLED 144Hz ರಿಫ್ರೆಶ್ ರೇಟ್ ಕರ್ವ್ ಡಿಸ್‌ಪ್ಲೇಯೊಂದಿಗೆ ಬರಲಿದೆ.

Moto Edge 30 Fusion ಫೋನ್‌ ನಲ್ಲಿ ಎರಡು ಮೈಕ್ರೊಫೋನ್ ಗಳು ಮತ್ತು ಡಾಲ್ಬಿ ಅಟ್ಮಾಸ್ ಸ್ಪೀಕರ್ ಗಳಿವೆ.

Moto Edge 30 Fusion ವಿವಾ ಮೆಜೆಂಟಾ ಬಣ್ಣದೊಂದಿಗೆ ಬರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ.

ಮೊಟೊರೊಲಾ ಇತ್ತೀಚೆಗೆ Moto Edge 30 Fusion ಪ್ಯಾಂಟೋನ್ ಕಲರ್‌ನೊಂದಿಗೆ ಶೀಘ್ರದಲ್ಲೆ ಪರಿಚಯಿಸಲಿದೆ. ಇದು 2023 ಪ್ಯಾಂಟೋನ್ ಬಣ್ಣವಾದ ವಿವಾ ಮೆಜೆಂಟಾವನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಪ್ಯಾಂಟೋನ್ ಕಂಪನಿಯು ತನ್ನ ಬಣ್ಣಗಳ ಮೂಲಕವೇ ಜಾಗತಿಕವಾಗಿ ಗುರುತಿಸಿಕೊಂಡಿದೆ. ವಿವಾ ಮೆಜೆಂಟಾವನ್ನು 2023 ರ ಬಣ್ಣವೆಂದು ಪ್ಯಾಂಟೋನ್ ಘೋಷಿಸಿದೆ. ಮೊಟೊರೊಲಾ ಭಾರತದಲ್ಲಿನ ಬಳಕೆದಾರರಿಗಾಗಿ Moto Edge 30 Fusion ಈ ಬಣ್ಣದೊಂದಿಗೆ ಬಿಡುಗಡೆ ಮಾಡಿದೆ. ಈ ಬಣ್ಣವು ಪ್ರಸ್ತುತ ವಿಶ್ವದ ಯಾವುದೇ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿಲ್ಲ. ಜಿಯೋ ಅಥವಾ ಏರ್‌ಟೆಲ್‌ನ 5G ಯೊಂದಿಗೆ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಇದು 13 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ.

Moto Edge 30 Fusion ಪ್ಯಾಂಟೋನ್ ಮತ್ತು ವಿವಾ ಮೆಜೆಂಟಾ ಬೆಲೆ: 

ಈ ಫೋನ್ 12ನೇ ಜನವರಿ 2023 ರಿಂದ ವಿವಾ ಮೆಜೆಂಟಾ ಕಲರ್‌ Moto Edge 30 Fusion ಭಾರತದಲ್ಲಿ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಇದರ ಬೆಲೆ 39,999 ರೂ ಆಗಿದ್ದು Motorola.in ಮತ್ತು Flipkart ನಲ್ಲಿ  ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭವಾಗುತ್ತದೆ. ರಿಲಯನ್ಸ್ ಜಿಯೋ ಗ್ರಾಹಕರು ಈ ಮೊಬೈಲ್‌ ನ ಮೇಲೆ ರೂ 7699 ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು ಜೊತೆಗೆ ಇಂಡಸ್‌ಲ್ಯಾಂಡ್ ಬ್ಯಾಂಕ್ ಕಾರ್ಡ್‌ನಲ್ಲಿ ರೂ 3500 ವರೆಗೆ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ.

Moto Edge 30 Fusion ಫೀಚರ್ಗಳು:

ಮೊಟೊರೊಲಾ ಎಡ್ಜ್ 30 ಫ್ಯೂಷನ್ ಬಾರ್ಡರ್‌ಲೆಸ್ 6.55-ಇಂಚಿನ pOLED 144Hz ರಿಫ್ರೆಶ್ ರೇಟ್ ಕರ್ವ್ ಡಿಸ್‌ಪ್ಲೇಯೊಂದಿಗೆ ಬರಲಿದೆ. Qualcomm Snapdragon 888, 8GB ವರೆಗಿನ LPDDR5 RAM, ಮತ್ತು 128GB‌ UFS 3.1  ಇಂಟರ್‌ ನಲ್ ಸ್ಟೋರೇಜ್ ಸಂಯೋಜಿತವಾಗಿರುತ್ತದೆ. ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ವ್ಯವಸ್ಥೆ ಇದೆ.OIS ಜೊತೆಗೆ 50MP ಪ್ರೈಮರಿ ಸೆನ್ಸರ್, 13MP ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಮತ್ತು ಸೆಲ್ಫಿಗಳಿಗಾಗಿ 32MP ಸೆನ್ಸರ್ ಮುಂಭಾಗದಲ್ಲಿದೆ. 

ಇದು 13 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ-n1/3/5/7/8/20/28/38/40/41/66/77/7. ಸ್ಮಾರ್ಟ್‌ಫೋನ್‌ನಲ್ಲಿರುವ 4400mAh ಬ್ಯಾಟರಿಯು 68W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ವಾಟರ್ ಪ್ರೊಟೆಕ್ಷನ್ ಗಾಗಿ IP52 ಪ್ರಮಾಣೀಕರಣವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಮೂರು ಕ್ಯಾರಿಯರ್ ಗಳನ್ನು ಒಟ್ಟುಗೂಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್‌ ನಲ್ಲಿ ಎರಡು ಮೈಕ್ರೊಫೋನ್ ಗಳು ಮತ್ತು ಡಾಲ್ಬಿ ಅಟ್ಮಾಸ್ ಸ್ಪೀಕರ್ ಗಳಿವೆ. ಇದು ವಿವಾ ಮೆಜೆಂಟಾ ಬಣ್ಣದೊಂದಿಗೆ ಬರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo