digit zero1 awards

2021 ರಲ್ಲಿ ಅತಿ ಹೆಚ್ಚು ಹುಡುಕಿದ ಸ್ಮಾರ್ಟ್​ಫೋನ್​ಗಳು ಯಾವುದು ಗೊತ್ತಾ?

2021 ರಲ್ಲಿ ಅತಿ ಹೆಚ್ಚು ಹುಡುಕಿದ ಸ್ಮಾರ್ಟ್​ಫೋನ್​ಗಳು ಯಾವುದು ಗೊತ್ತಾ?
HIGHLIGHTS

ಈ ವರ್ಷ ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ 5 ಫೋನುಗಳು ಮಾರುಕಟ್ಟೆಗೆ ಆಗಮಿಸಿವೆ.

ಗೂಗಲ್ ಟ್ರೆಂಡ್​ಗಳು ಹೆಚ್ಚು ಹುಡುಕಲ್ಪಟ್ಟ ಕೆಲವು ಸ್ಯಾಮ್ಸಂಗ್ ಸ್ಮಾರ್ಟ್​ಫೋನ್​​ಗಳನ್ನು ಬಹಿರಂಗಪಡಿಸಿದೆ

ಈಗ 2022 ರ ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ 2021ನೇ ವರ್ಷದ ಸ್ಮಾರ್ಟ್​ಫೋನ್​​ ಜಗತ್ತನ್ನು ಮೆಲುಕಿ ಹಾಕಿ ನೋಡಿದಾಗ ಈ ವರ್ಷ ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ 5 ಫೋನುಗಳು ಮಾರುಕಟ್ಟೆಗೆ ಆಗಮಿಸಿವೆ. ಬಜೆಟ್ ಫೋನಿನಿಂದ ಹಿಡಿದು ಹೈ ರೇಂಜ್ ಫೋನುವರೆಗೂ ಅನೇಕ ಸ್ಮಾರ್ಟ್​ಫೋನ್​​ಗಳು ಮೋಡಿ ಮಾಡಿವೆ. ಅಂತೆಯೆ ಈ ವರ್ಷ ಸ್ಯಾಮ್ಸಂಗ್ ಕಂಪನಿ ವಿವಿಧ ರೂಪದಲ್ಲಿ ಎಲ್ಲಾ ಬೆಲೆಗಳ ವಿಭಾಗಗಳನ್ನು ಪೂರೈಸುವ ವ್ಯಾಪಕ ಶ್ರೇಣಿಯ ಸ್ಮಾರ್ಟ್​ಫೋನ್​​ಗಳನ್ನು ಪರಿಚಯಿಸಿತ್ತು.

ಗೂಗಲ್ ಟ್ರೆಂಡ್​ಗಳು ಹೆಚ್ಚು ಹುಡುಕಲ್ಪಟ್ಟ ಕೆಲವು ಸ್ಯಾಮ್ಸಂಗ್ ಸ್ಮಾರ್ಟ್​ಫೋನ್​​ಗಳನ್ನು ಬಹಿರಂಗಪಡಿಸಿದೆ. ಇವುಗಳು ದಕ್ಷಿಣ ಕೊರಿಯಾದ ಬ್ರ್ಯಾಂಡ್​ನ ಎಲ್ಲಾ ಜನಪ್ರಿಯ ಮಾದರಿಗಳನ್ನು ಒಳಗೊಂಡಿವೆ. ಹಾಗಾದ್ರೆ 2021 ರಲ್ಲಿ ಜನರು ಅತಿ ಹೆಚ್ಚು ಹುಡುಕಿದ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್​ಫೋನ್​​ ಯಾವುದು ಎಂಬುದನ್ನು ನೋಡೋಣ.

Samsung Galaxy F62:

ಈ ಸ್ಮಾರ್ಟ್​ಫೋನ್​​ನ ಬೆಲೆ 20,499 ರೂ. ಇದು 6.7 ಇಂಚಿನ (2400 x 1080 ಪಿಕ್ಸೆಲ್ಗಳು) ಪೂರ್ಣ HD+ ಇನ್ಫಿನಿಟಿ-O ಸೂಪರ್ AMOLED ಪ್ಲಸ್ 20:9 ಡಿಸ್ಪ್ಲೇ ಹೊಂದಿದೆ. ಆಕ್ಟಾ-ಕೋರ್ Samsung Exynos 9 ಸರಣಿ 9825 7nm ಪ್ರೊಸೆಸರ್, ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ), 64MP + 12MP + 5MP + 5MP ಹಿಂಬದಿಯ ಕ್ಯಾಮೆರಾ, 32MP ಮುಂಭಾಗದ ಕ್ಯಾಮರಾ, ಡ್ಯುಯಲ್ 4G VoLTE, 7,000 mAh ಬ್ಯಾಟರಿ ಸಾಮರ್ಥ್ಯದಿಂದ ಕೂಡಿದೆ.

Samsung Galaxy M02s:

ಈ ಸ್ಮಾರ್ಟ್ಫೋನ್ ಇದರ ಬೆಲೆ ರೂ. 8,999. 6.5-ಇಂಚಿನ (1560 × 720 ಪಿಕ್ಸೆಲ್ಗಳು) HD+ LCD ಇನ್ಫಿನಿಟಿ-ವಿ ಡಿಸ್ಪ್ಲೇ. 1.8GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 450 14nm ಮೊಬೈಲ್ ಪ್ಲಾಟ್ಫಾರ್ಮ್ ಜೊತೆಗೆ Adreno 506 GPU. 13MP + 2MP ಆಳ ಮತ್ತು 2MP ಹಿಂಬದಿಯ ಕ್ಯಾಮೆರಾ, 5MP ಮುಂಭಾಗದ ಕ್ಯಾಮೆರಾ. ಡ್ಯುಯಲ್ 4G VoLTE ಮತ್ತು 5,000mAh ಬ್ಯಾಟರಿಯನ್ನು ಹೊಂದಿದೆ.

Samsung Galaxy F12:

ಈ ಸ್ಮಾರ್ಟ್ಫೋನ್ ಬೆಲೆ ರೂ. 10,999. 6.5-ಇಂಚಿನ (720×1600 ಪಿಕ್ಸೆಲ್ಗಳು) HD+ ಇನ್ಫಿನಿಟಿ-V ಡಿಸ್ಪ್ಲೇ, 90Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ. Exynos 850 Octa-Core (2GHz Quad + 2GHz Quad) 8nm ಪ್ರೊಸೆಸರ್ ಜೊತೆಗೆ Mali-G52. 48MP + 5MP + 2MP + 2MP ಹಿಂಬದಿಯ ಕ್ಯಾಮೆರಾ. 8MP ಮುಂಭಾಗದ ಕ್ಯಾಮೆರಾ. 6,000mAh (ವಿಶಿಷ್ಟ) ಬ್ಯಾಟರಿಯನ್ನು ಹೊಂದಿದೆ.

Samsung Galaxy A12: 

ಈ ಸ್ಮಾರ್ಟ್ಫೋನ್ ಬೆಲೆ ರೂ. 12,999. 6.5 ಇಂಚಿನ HD+ ಡಿಸ್ಪ್ಲೇ. 2.3GHz ಆಕ್ಟಾ-ಕೋರ್ ಹೆಲಿಯೊ P35 ಪ್ರೊಸೆಸರ್. 3/4/6GB RAM ಜೊತೆಗೆ 32/64/128GB ROM. 48MP + 5MP + 2MP + 2MP ಕ್ವಾಡ್ ರಿಯರ್ ಕ್ಯಾಮೆರಾಗಳು. 8MP ಮುಂಭಾಗದ ಕ್ಯಾಮೆರಾ. 5,000mAh ಬ್ಯಾಟರಿಯನ್ನು ಹೊಂದಿದೆ.

Samsung Galaxy  M42: 

ಈ ಸ್ಮಾರ್ಟ್ಫೋನ್ ಬೆಲೆ ರೂ. 21,999. 6.6-ಇಂಚಿನ HD+ ಇನ್ಫಿನಿಟಿ-U ಸೂಪರ್ AMOLED ಡಿಸ್ಪ್ಲೇ. ಆಕ್ಟಾ ಕೋರ್ ಜೊತೆಗೆ ಸ್ನಾಪ್ಡ್ರಾಗನ್ 750G 8nm ಮೊಬೈಲ್ ಪ್ಲಾಟ್ಫಾರ್ಮ್ ಜೊತೆಗೆ Adreno 619 GPU.4 8MP + 8MP + 5MP + 5MP ಹಿಂದಿನ ಕ್ಯಾಮೆರಾ. 20MP ಮುಂಭಾಗದ ಕ್ಯಾಮೆರಾ. 5,000 mAh ಬ್ಯಾಟರಿಯನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo