Mobiistar X1 Notch: ಸ್ಮಾರ್ಟ್ಫೋನಿನ ಅನ್ಬಾಕ್ಸಿಂಗ್ ಮತ್ತು ಫಸ್ಟ್ ಇಂಪ್ರೆಷನ್.

Mobiistar X1 Notch: ಸ್ಮಾರ್ಟ್ಫೋನಿನ ಅನ್ಬಾಕ್ಸಿಂಗ್ ಮತ್ತು ಫಸ್ಟ್ ಇಂಪ್ರೆಷನ್.
HIGHLIGHTS

Mobiistar X1 Notch ವಿಶೇಷತೆ ಅಂದ್ರೆ ಇದರ ಸೈಡ್ ಟು ಸೈಡ್ ಸಹ ಗ್ರೇಡಿಯಂಟ್ ಎಫೆಕ್ಟ್ನೊಂದಿಗೆ ಈ ಫೋನ್ ಬರುತ್ತದೆ.

ಇದು Mobiistar X1 Notch ಈ ಸ್ಮಾರ್ಟ್ಫೋನಿನ ಹೈ ಲೈಟ್ ಅಂದ್ರೆ ಇದರ ಉಜ್ವಲ ವರ್ಣಣೆಯ ಬ್ಯಾಕ್ ಲುಕ್. ಮೋಬಿಸ್ಟಾರ್ ಈ ಸ್ಮಾರ್ಟ್ಫೋನಲ್ಲಿ ಡಿಸೈನ್ ಮತ್ತು ಕ್ಯಾಮೆರಾದ ಮೇಲೆ ಹೆಚ್ಚು ಗಮನ ಹರಿಸಿದೆ. ಅಲ್ಲದೆ ರಿಲಯನ್ಸ್ ಜಿಯೋವಿನ ಬಳಕೆದಾರರಿಗೆ 2200 ರೂಗಳ ಕ್ಯಾಶ್ ಬ್ಯಾಕ್ ಆಫರನ್ನು ಸಹ ನೀಡುತ್ತದೆ. ಹಾಗಾದ್ರೆ ಇದಕ್ಕೆಲ್ಲ ಮೊದಲು ಇದರ ಬಾಕ್ಸ್ ಅಲ್ಲಿ ಏನೇನು ಬರುತ್ತೆ ಅನ್ನೋದಾನ್ನ ನೋಡೋಣ. ಇಲ್ಲಿ ನಿಮಗೆ ಒಂದು Mobiistar ಬಾಕ್ಸ್, ಒಂದು ಸ್ಮಾರ್ಟ್ಫೋನ್, ಒಂದು ಟ್ರಾನ್ಸ್ಪರೆಂಟ್ ಸಿಲಿಕನ್ ಬ್ಯಾಕ್ ಕವರ್, ಒಂದು 5.1V ಟ್ರಾವೆಲ್ USB ಅಡಾಪ್ಟರ್, ಒಂದು ಮೈಕ್ರೋ USB ಕೇಬಲ್ ಲೈನ್, ಒಂದು ಸಿಮ್ ಎಜಿಕ್ಟಿಗ್ ಪಿನ್ ಮತ್ತು ಒಂದು ಉಸರ್ ಗೈಡ್ ಲಭ್ಯವಿದೆ.

https://mobiistar.in/images/x1notch-banner.jpg 

ಈಗ ಇದೇಲ್ಲ ಸೈಡಿಗಿಟ್ಟು ಫೋನ್ ನೋಡೋಣ. ಇದು Mobiistar X1 Notch ಡುಯಲ್ ಶೇಡ್ ಗ್ರೇಡಿಯಂಟ್ ಫಿನಿಷ್ನೊಂದಿಗೆ ಅದ್ದೂರಿ ಲುಕ್ ನೀಡುತ್ತದೆ. ಇದರ ಮೇಲೆ ಸೂರ್ಯನ ಬೆಳಕು ಅಥವಾ ಯಾವುದೇ ಲೈಟ್ ಬಿದ್ದರೆ ಇದರ ಬ್ಯಾಕ್ ಪ್ಯಾನಲ್ ಪಳ ಪಳ ಅಂತ 4-5 ಬಣ್ಣಗಳ ಮಿಶ್ರಣದಲ್ಲಿ ಹೊಳೆಯುತ್ತದೆ. ಈ ರೀತಿಯ ಗ್ರೇಡಿಯಂಟ್ ಫಿನಿಷ್ ನೀವು ಮೊದಲು ನೋಡಿರಬವುದು ಆದರೆ ಇದರ ವಿಶೇಷತೆ ಅಂದ್ರೆ ಇದರ ಸೈಡ್ ಟು ಸೈಡ್ ಸಹ ಗ್ರೇಡಿಯಂಟ್ ಎಫೆಕ್ಟ್ನೊಂದಿಗೆ ಈ ಫೋನ್ ಬರುತ್ತದೆ. 

ಡಿಸ್ಪ್ಲೇ

https://www.themobileindian.com/resizer.php?src=/public/uploads/news/2019/01/24875/Mobiistar-X1-Notch-3.jpg&w=735&h=425&q=10

ಈಗ ಮೊದಲು ಇದರ ಡಿಸ್ಪ್ಲೇ ಬಗ್ಗೆ ಹೇಳಬೇಕೆಂದರೆ ಇದರ ಫ್ರಂಟ್ & ಬ್ಯಾಕ್ 2.5D ಕರ್ವ್ ಗ್ಲಾಸ್ ಹೊಂದಿದ್ದು 5.7 ಇಂಚಿನ HD+ ಫುಲ್ ವ್ಯೂ ನಾಚ್ ಡಿಸ್ಪ್ಲೇಯನ್ನು ಹೊಂದಿದೆ. ಇದರ ಫಿಸಿಕಲ್ ಓವರ್ ವ್ಯೂ ನೋಡಬೇಕೆಂದರೆ. ಇದರ ಪವರ್ ಬಟನ್ ಮತ್ತು ವಾಲ್ಯೂಮ್ ರೊಕರ್ಗಳು ಫೋನಿನ ಬಲಭಾಗದಲ್ಲಿ ನೀಡಲಾಗಿದೆ. ಇವು ಡೆಡಿಕೇಟೆಡ್ ಆಗಿದ್ದು ಒಂದಕ್ಕೊಂದು ಸಾಕಾಗುವಷ್ಟು ಸ್ಥಳವಾಕಾಶ ಹೊಂದಿವೆ. 

ಇದರ ಮೇಲ್ಭಾಗದಲ್ಲಿ 3.5 ಆಡಿಯೋ ಜಾಕ್ ಹೊಂದಿದ್ದು ಇದರ ಕೆಳಭಾಗದಲ್ಲಿ ಮೈಕ್ರೋ USB ಪೋರ್ಟ್, ಆಡಿಯೋ ಮೈಕ್ ಮತ್ತು ಸ್ಪೀಕರ್ಗಳನ್ನು ನೀಡಲಾಗಿದೆ. ಈ  ಫೋನ್ ಡುಯಲ್ ಸಿಮ್ ಡುಯಲ್ Volte ಸಪೋರ್ಟ್ ಮಾಡುತ್ತದೆ ಅಂದ್ರೆ ಜಿಯೋವಿನ ಎರಡು ಸಿಮ್ ಒಂದೇ ಬಾರಿಗೆ ಬಳಸಬುವುದು. ಈ ಫೋನಲ್ಲಿ 2 ನ್ಯಾನೋ ಸಿಮ್ ಮತ್ತು 1 ಮೈಕ್ರೋ SD ಕಾರ್ಡ್ ಹಾಕಬವುದಾದ ಸ್ಲಾಟ್ ಹೊಂದಿದೆ. 

ಹಾರ್ಡ್ವೇರ್ 

Mobiistar X1 Notch ಹಾರ್ಡ್ವೇರ್ ಬಗ್ಗೆ ಹೇಳಬೇಕೇದರೆ ಈ ಫೋನ್ ಆಂಡ್ರಾಯ್ಡ್ 8.0 ಒರೆಯೊ ಔಟ್ ಆಫ್ ದಿ ಬಾಕ್ಸ್ ರನ್ ಆಗುತ್ತದೆ. ಜೊತೆಗೆ ಕಸ್ಟಮ್ UI ಸಹ ಇದರಲ್ಲಿ ಬಳಸಲಾಗಿದೆ. ಈ ಸ್ಮಾರ್ಟ್ಫೋನಲ್ಲಿ MediaTek Helio A22 ಕ್ವಾಡ್ ಕೋರ್ ಪ್ರೊಸೆಸರ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 2 ಮತ್ತು 3GB ಯ RAMನೊಂದಿಗೆ 16 ಮತ್ತು 32GB ಯ ಸ್ಟೋರೇಜಿನೊಂದಿಗೆ ಬರುತ್ತದೆ. Mobiistar X1 Notch ಬ್ಯಾಕ್ ಸೈಡಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ನೀಡಿದೆ ಇದು ಫಾಸ್ಟ್ ಮತ್ತು ಅಕ್ಕ್ಯೂರೇಟಗಿದೆ. ಇದರೊಂದಿಗೆ ಫೇಸ್ ಅನ್ಲಾಕ್ ಫೀಚರ್ ಸಹ ನೀಡಲಾಗಿದೆ ಇದು ಸಹ ಫಾಸ್ಟ್ ಮತ್ತು ಅಕ್ಕ್ಯೂರೇಟಗಿದೆ. 

ಕ್ಯಾಮೆರಾ & ಬ್ಯಾಟರಿ

ಇದರ ಕ್ಯಾಮೆರಾದದ ಬಗ್ಗೆ ಹೇಳ್ಬೇಕೇದರೆ 13MP ರೇರ್ ಕ್ಯಾಮೆರಾ ಈ ಸ್ಮಾರ್ಟ್ಫೋನಲ್ಲಿದೆ. ಇದು ನಿಮಗೆ ಉತ್ತಮವಾದ ಕ್ವಾಲಿಟಿಯ ಫೋಟೋಗಳನ್ನು ನೀಡುತ್ತದೆ. ಮತ್ತು ಈ ಫೋನ್ ವಿಡಿಯೋ ರೆಕಾರ್ಡಿಂಗ್ಗಾಗಿ 720p ರೆಸೂಲುಶನಲ್ಲಿ ಕ್ಯಾಪಿಚರ್ ಮಾಡಬವುದು.ಆದ್ರೆ ಇದರ ಬ್ಯಾಕ್ ಕ್ಯಾಮೆರಾದಲ್ಲಿ ಯಾವುದೇ ಬೊಕೆ ಎಫೆಕ್ಟ್ ನೀಡಿಲ್ಲ. ಅದೇ ರೀತಿ ಇದರ ಫ್ರಂಟಲ್ಲು ಸಹ 13MP AI ಟೆಕ್ನಾಲಜಿಯ ಸೆಲ್ಫಿ ಕ್ಯಾಮೆರಾವನ್ನು ನೀಡಿದೆ.

ಇದರಲ್ಲಿ ನಿಮಗೆ 7 ಹಂತಗಳ ಬ್ಯೂಟಿ ಮೂಡ್ ಸಹ ನೀಡಿದ್ದು ನಿಮ್ಮ ನಾರ್ಮಲ್ ಇಮೇಜ್ಗಳು ಹೆಚ್ಚು ಆಕರ್ಷಣೀಯವಾಗಿ ಸೆರೆ ಹಿಡಿಯಲು ಸಹಕರಿಸುತ್ತದೆ.  ಇದರಲ್ಲಿನ ಲೊ ಲೈಟ್ ಶಾಟ್ಗಳು ಸಹ ಅದ್ದೂರಿಯಾಗಿದೆ ಮೂಡಿಬರುತ್ತದೆ. ಇದರ ಬ್ಯಾಟರಿ ಬಗ್ಗೆ ಹೇಳಬೇಕೆಂದರೆ ಈ ಫೋನಲ್ಲಿ ನಿಮಗೆ 3020mAh ನೋನ್ ರಿಮೋಅಬಲ್ ಬ್ಯಾಟರಿಯನ್ನು ನೀಡಿದೆ. ಇದು ಒಂದು ದಿನದ ಬ್ಯಾಟರಿ ಲೈಫ್ ನೀಡುತ್ತದೆ.

ಕೊನೆಯದಾಗಿ ಇದರ ಬೆಲೆ ಹೇಳಬೇಕೆಂದ್ರೆ ಇದರ 2GB RAM/16GB ಸ್ಟೋರೇಜಿನ ಫೋನ್ 8499 ರೂಗಳಲ್ಲಿ ಲಭ್ಯವಾದರೆ ಇದರ 3GB RAM 32GB ಯ ಸ್ಟೋರೇಜ್ ಫೋನ್ 9499 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ಗಳು ಈಗಾಗ್ಲೇ ಭಾರತದಲ್ಲಿ ಬಿಡುಗಡೆಯಾಗಿವೆ. ಇವು ಕೇವಲ ಆಫ್ ಲೈನಲ್ಲಿ ಮಾತ್ರ ಸದ್ಯಕ್ಕೆ ಲಭ್ಯವಿದೆ. ಇದು Mobiistar X1 Notch ಫೋನಿನ ಅನ್ಬಾಕ್ಸಿಂಗ್ ಮತ್ತು ಫಸ್ಟ್ ಇಂಪ್ರೆಷನ್ ಇದರ ಬಗ್ಗೆ ನಿಮ್ಮ ಮಾತುಗಳೇನು ಕಾಮೆಂಟ್ ಮಾಡಿ ತಿಳಿಸಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo