ಮೈಕ್ರೋಮ್ಯಾಕ್ಸ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ Micromax IN 1b ಇಂದು ನವೆಂಬರ್ 26 ರಂದು ಮೊದಲ ಮಾರಾಟವಾಗಿದೆ. ಈ ಫ್ಲ್ಯಾಷ್ ಸೆಲ್ ಶಾಪಿಂಗ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದೆ ಮತ್ತು ಗ್ರಾಹಕರು ಈ ಹ್ಯಾಂಡ್‌ಸೆಟ್ ಖರೀದಿಸಿದಾಗ ಆಕರ್ಷಕ ಕೊಡುಗೆಗಳನ್ನು ಪಡೆಯುತ್ತಾರೆ. ಮುಖ್ಯ ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದರೆ Micromax IN 1b ಸ್ಮಾರ್ಟ್ಪೋನ್ 5000 ಎಮ್ಎಹೆಚ್ ಬ್ಯಾಟರಿಯನ್ನು ಹೊಂದಿದೆ. ಇದು 10 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ನೊಂದಿಗೆ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಈ ಸಾಧನವು ಒಟ್ಟು ಮೂರು ಕ್ಯಾಮೆರಾಗಳನ್ನು ಪಡೆದುಕೊಂಡಿದೆ.
Micromax IN 1b ಸ್ಮಾರ್ಟ್‌ಫೋನ್‌ನ 2GB RAM + 32GB ಸ್ಟೋರೇಜ್ ಬೆಲೆ 6,999 ರೂಗಳಾಗದರೆ 4GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ 7,999 ರೂಗಳು. ಈ ಸ್ಮಾರ್ಟ್‌ಫೋನ್ ಅನ್ನು ಹಸಿರು, ನೀಲಿ ಮತ್ತು ನೇರಳೆ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಆಕ್ಸಿಸ್ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಐದು ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದ್ದರೆ 5% ಪ್ರತಿಶತ ರಿಯಾಯಿತಿಯನ್ನು ಆಕ್ಸಿಸ್ ಬ್ಯಾಂಕ್ ನೀಡುತ್ತಿದೆ. ಇದಲ್ಲದೆ Micromax IN 1b ಸ್ಮಾರ್ಟ್ಫೋನ್ ಅನ್ನು 778 ರೂಗಳ ಯಾವುದೇ ವೆಚ್ಚವಿಲ್ಲದ ಇಎಂಐನಲ್ಲಿ ಖರೀದಿಸಬಹುದು.
Micromax IN 1b ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ 6.52 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ ಫೋನ್‌ನಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್ ನೀಡಲಾಗಿದೆ. ಇದಲ್ಲದೆ ಈ ಹ್ಯಾಂಡ್‌ಸೆಟ್‌ಗೆ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ನ ಬೆಂಬಲ ಸಿಕ್ಕಿದೆ.
ಕಂಪನಿಯು Micromax IN 1b ಅಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಿದೆ. ಇದು 13MP ಪ್ರಾಥಮಿಕ ಸಂವೇದಕ ಮತ್ತು 2MP ಆಳ ಸಂವೇದಕವನ್ನು ಹೊಂದಿದೆ. ಅಲ್ಲದೆ ಫೋನ್‌ನ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. Micromax IN 1b ಸ್ಮಾರ್ಟ್ಫೋನ್ 5,000 ಎಮ್ಎಹೆಚ್ ಬ್ಯಾಟರಿಯನ್ನು ಹೊಂದಿದೆ ಇದು 10 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ನೊಂದಿಗೆ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಈ ಹ್ಯಾಂಡ್‌ಸೆಟ್‌ನಲ್ಲಿ ಕನೆಕ್ಟಿವಿಟಿ ವೈಶಿಷ್ಟ್ಯಗಳಾದ 4 ಜಿ ವೋಲ್ಟಿಇ, ವೈ-ಫೈ, ಜಿಪಿಎಸ್, ಬ್ಲೂಟೂತ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒದಗಿಸಲಾಗಿದೆ.