digit zero1 awards

Mi Fan Festival 2022: ಜನಪ್ರಿಯ Xiaomi ಫೋನ್‌ಗಳ ಮೇಲೆ ಭಾರಿ ಆಫರ್ ಮತ್ತು ಡಿಸ್ಕೌಂಟ್‌ಗಳು!

Mi Fan Festival 2022: ಜನಪ್ರಿಯ Xiaomi ಫೋನ್‌ಗಳ ಮೇಲೆ ಭಾರಿ ಆಫರ್ ಮತ್ತು ಡಿಸ್ಕೌಂಟ್‌ಗಳು!
HIGHLIGHTS

Xiaomi ಇಂಡಿಯಾ ಅಧಿಕೃತವಾಗಿ Mi ಫ್ಯಾನ್ ಫೆಸ್ಟಿವಲ್ 2022 ದಿನಾಂಕಗಳನ್ನು ಘೋಷಿಸಿದೆ.

ಇದು ಏಪ್ರಿಲ್ 6 ರಿಂದ ಏಪ್ರಿಲ್ 18 ರವರೆಗೆ ನಡೆಯಲಿದೆ

ಈ ಅವಧಿಯಲ್ಲಿ ಬಳಕೆದಾರರು Mi.com ಮತ್ತು Mi Home ನಲ್ಲಿ Xiaomi ಮತ್ತು Redmi ಉತ್ಪನ್ನಗಳ ಮೇಲೆ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆಯಬಹುದು.

Xiaomi ಇಂಡಿಯಾ ಅಧಿಕೃತವಾಗಿ Mi ಫ್ಯಾನ್ ಫೆಸ್ಟಿವಲ್ 2022 ದಿನಾಂಕಗಳನ್ನು ಘೋಷಿಸಿದೆ. ಇದು ಏಪ್ರಿಲ್ 6 ರಿಂದ ಏಪ್ರಿಲ್ 18 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಬಳಕೆದಾರರು Mi.com ಮತ್ತು Mi Home ನಲ್ಲಿ Xiaomi ಮತ್ತು Redmi ಉತ್ಪನ್ನಗಳ ಮೇಲೆ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆಯಬಹುದು. Mi ಫ್ಯಾನ್ ಫೆಸ್ಟಿವಲ್ 2022 ರ ಸಮಯದಲ್ಲಿ ಕಂಪನಿಯು ಉಡುಗೊರೆ ರೂಪದಲ್ಲಿ ವೋಚರ್‌ಗಳನ್ನು ನೀಡಲಿದೆ. Mi ಸ್ಟೋರ್ ಅಪ್ಲಿಕೇಶನ್‌ನಲ್ಲಿ ಶಾಪಿಂಗ್ ಮಾಡುವವರಿಗೆ 80,000. ಹೆಚ್ಚುವರಿಯಾಗಿ Mi ಹೋಮ್ಸ್‌ನಲ್ಲಿ ಶಾಪಿಂಗ್ ಮಾಡುವ ಬಳಕೆದಾರರು ರೂ.10,000 ಗಳ ಅಥವಾ ಹೆಚ್ಚು ಗಿಫ್ಟ್ ವೋಚರ್ ಅನ್ನು ಗೆಲ್ಲಲು ಅರ್ಹರಾಗಿರುತ್ತಾರೆ.

Mi ಫ್ಯಾನ್ ಫೆಸ್ಟಿವಲ್ 2022 

ಇನ್ನು ಈ ಸೇಲ್ ಲೈವ್ ನಡೆಯುವ ಸಂದರ್ಭದಲ್ಲಿ ಎಂಐ ಸ್ಟೋರ್ ಮತ್ತು ಅಪ್ಲಿಕೇಶನ್‌ಗೆ ಭೇಟಿ ನೀಡುವ ಮತ್ತು ಶಾಪಿಂಗ್ ಮಾಡುವವರು 15,000 ರೂ. ವರೆಗಿನ ಕೂಪನ್‌ಗಳು, ಎರಡು ಚಿನ್ನದ ನಾಣ್ಯಗಳು (2 ಗ್ರಾಂ), 80,000 ರೂ.ವರೆಗಿನ ಗಿಫ್ಟ್ ಹ್ಯಾಂಪರ್‌ಗಳು, ರೆಡ್ ಮಿ X42 ಟಿವಿ ಮತ್ತು 100% ಪ್ರತಿಶತ ಕ್ಯಾಶ್‌ಬ್ಯಾಕ್ ಅನ್ನು ಸಹ ಗೆಲ್ಲುವ ಅವಕಾಶ ಹೊಂದಿದ್ದಾರೆಂದು ಸಂಸ್ಥೆ ತಿಳಿಸಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಗ್ರಾಹಕರು ತಮ್ಮ ಅದೃಷ್ಟವನ್ನು ಜಾಕ್‌ಬಾಟ್ ಡೀಲ್‌ಗಳ ಮೂಲಕ ಪ್ರಯತ್ನಿಸಬಹುದು. ಮಧ್ಯಾಹ್ನ 12 ಗಂಟೆಗೆ ಆಡಿಯೋ ಉತ್ಪನ್ನಗಳು, ಪವರ್ ಬ್ಯಾಂಕ್‌ಗಳು, ಟ್ರಿಮ್ಮರ್‌ಗಳು ಮತ್ತು ಇತರ ಉತ್ಪನ್ನಗಳ ಮೇಲೆ ದೈನಂದಿನ ಆಶ್ಚರ್ಯಕರ ದರಗಳು ಇರುತ್ತವೆ.

Xiaomi 11i ಹೈಪರ್‌ಚಾರ್ಜ್ 5G ಅನ್ನು ಕೇವಲ 8,999 ರೂ. ಗಳಲ್ಲಿ ರೆಡ್ಮಿ ಸ್ಮಾರ್ಟ್ ಟಿವಿಯನ್ನು 6999 ರೂ. ಗಳಲ್ಲಿ Mi ರೋಬೋಟ್ ವ್ಯಾಕ್ಯೂಮ್ – ಮಾಪ್ P ಅನ್ನು 9,999 ರೂ. ಗಳ ವಿಶೇಷ ಬೆಲೆಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ Xiaomi 11i 5G ಮಾರುಕಟ್ಟೆ ಬೆಲೆ 29,999 ರೂ. ನೀವು ಇದನ್ನು ಫ್ಲಿಪ್​ಕಾರ್ಟ್​ನಿಂದ ಖರೀದಿಸಿದರೆ ಈ ಸ್ಮಾರ್ಟ್​ಫೋನ್ ಅನ್ನು 16% ರಿಯಾಯಿತಿಯ ನಂತರ ರೂ 24,999 ಗೆ ಪಡೆಯುತ್ತೀರಿ. ಇದನ್ನು ಖರೀದಿಸುವಾಗ ಅದನ್ನು ಐಸಿಐಸಿಐ ಬ್ಯಾಂಕ್​ನ  ಕ್ರೆಡಿಟ್ ಕಾರ್ಡ್​ನೊಂದಿಗೆ ಪಾವತಿಸಿದರೆ ಎರಡು ಸಾವಿರ ರೂಪಾಯಿಗಳ ತ್ವರಿತ ರಿಯಾಯಿತಿ ಸಿಗುತ್ತದೆ. ಒಟ್ಟಾರೆ 22,999 ರೂ.ಗೆ ಖರೀದಿಸಬಹುದಾಗಿದೆ. 

ಎಕ್ಸ್​ಚೇಂಜ್ ಆಫರ್ ಅನ್ನು ಸಹ ನೀಡಲಾಗುತ್ತಿದ್ದು ನಿಮ್ಮ ಹಳೆಯ ಸ್ಮಾರ್ಟ್​ಫೋನ್​ಗೆ ಬದಲಾಗಿ ಈ 5G ಫೋನ್ ಅನ್ನು ಖರೀದಿಸುವ ಮೂಲಕ 13 ಸಾವಿರ ರೂಪಾಯಿಗಳವರೆಗೆ ಉಳಿಸಬಹುದು. ಈ ಎಕ್ಸ್​ಚೇಂಜ್ ಆಫರ್​ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ ನೀವು ಈ ಸ್ಮಾರ್ಟ್ಫೋನ್ ಅನ್ನು ರೂ 22,999 ಬದಲಿಗೆ ಕೇವಲ 9,999 ರೂಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಪ್ರತಿದಿನ ರಾತ್ರಿ 8 ಗಂಟೆಗೆ ಗ್ರಾಹಕರು ತಮಗಾಗಿ ವೈಯಕ್ತೀಕರಿಸಬಹುದಾದ ಒಂದಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಹೆಚ್ಚುವರಿ ರಿಯಾಯಿತಿ ದರಗಳಲ್ಲಿ ಪಡೆಯಲು ಪಿಕ್ ಎನ್ ಚೂಸ್ ಅನ್ನು ಬಳಸಬಹುದು. ಈ ಉತ್ಸವದ ಸಂದರ್ಭದಲ್ಲಿ ದಿನದ ವಿವಿಧ ಸಮಯಗಳನ್ನು ವಿಶೇಷ ಕೊಡುಗೆಗಳಡಿಯಲ್ಲಿ ವಿಭಾಗಿಸಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo