Light Phone 3 ಸ್ಮಾರ್ಟ್ಫೋನ್ Snapdragon 4450 ಪವರ್ಫುಲ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

Updated on 29-Mar-2025
HIGHLIGHTS

ಅಮೇರಿಕಾದಲ್ಲಿ ಜನಪ್ರಿಯ ಬೇಸಿಕ್ Light Phone 3 ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆ.

Light Phone 3 ಸ್ಮಾರ್ಟ್ಫೋನ್ Snapdragon 4450 ಪವರ್ಫುಲ್ ಪ್ರೊಸೆಸರ್‌ನೊಂದಿಗೆ ಪರಿಚಯ.

Light Phone 3 ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ.

ಅಮೆರಿಕದಲ್ಲಿ Light Phone 3 ಮಿನಿಮಲಿಸ್ಟ್ ಸ್ಮಾರ್ಟ್ಫೋನ್ ಇತ್ತೀಚಿನ ಸಣ್ಣದಾದ ಹ್ಯಾಂಡ್‌ಸೆಟ್ ಅನ್ನು ಬಿಡುಗಡೆಯಾಗಿದೆ. ಬ್ರ್ಯಾಂಡ್‌ ಇದನ್ನು ಬಳಕೆದಾರರು ಸೋಶಿಯಲ್ ಮೀಡಿಯಾ, ಜಾಹಿರಾತು ಮತ್ತು ಇತರ ಗೊಂದಲಗಳಿಂದ ದೂರವಿಡಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ Light Phone 3 ಸ್ಮಾರ್ಟ್ಫೋನ್ ವಾಯ್ಸ್ ಕರೆಗಳು, ಮೆಸೇಜ್, ನೇವಿಗೇಶನ್, ಅಲಾರಂಗಳು ಸೇರಿ ಮುಖ್ಯ ಫೀಚರ್ಗಳೊಂದಿಗೆ ಬರುತ್ತದೆ. ಫೋನ್ 3.92 ಇಂಚಿನ AMOLED ಡಿಸ್ಪ್ಲೇಯನ್ನು ಮತ್ತು ಕ್ವಾಲ್ಕಾಮ್ Snapdragon 4450 ಪವರ್ಫುಲ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. Light Phone 3 ಮೆನು ಇಂಟರ್ಫೇಸ್ ಹಳೆಯ ನೋಕಿಯಾ ಫೋನ್ಗಳಂತೆ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಬರುತ್ತದೆ.

ಅಮೆರಿಕದಲ್ಲಿ Light Phone 3 ಸ್ಮಾರ್ಟ್ಫೋನ್ ಬೆಲೆ

ಪ್ರಸ್ತುತ ಕೇವಲ ಅಮೆರಿಕದಲ್ಲಿ (US) ಮಾತ್ರ ಬಿಡುಗಡೆಯಾಗಿರುವ ಈ ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾರೆ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಮಾದರಿಯ ಬೆಲೆಯನ್ನು ಸುಮಾರು $799 (ಸುಮಾರು ರೂ. 68,000) ಎಂದು ನಿಗದಿಪಡಿಸಲಾಗಿದೆ. ಆದರೆ Light Phone 3 ಸ್ಮಾರ್ಟ್ಫೋನ್ ಬಿಡುಗಡೆಯ ಆಫರ್ ಅಡಿಯಲ್ಲಿ ಕಂಪನಿ ಇದನ್ನು ಲಿಮಿಟೆಡ್ ಸಮಯಕ್ಕಾಗಿ ಆಸಕ್ತರು ಬರೋಬ್ಬರಿ $200 (ಸುಮಾರು ರೂ. 16,000) ಡಿಸ್ಕೌಂಟ್‌ನೊಂದಿಗೆ ಕಡಿಮೆ ದರದಲ್ಲಿ ಅಂದ್ರೆ ಕೇವಲ $599 (ಸುಮಾರು ರೂ. 52,000) ರಿಯಾಯಿತಿ ದರದಲ್ಲಿ ಖರೀದಿಸಬಹುದು. Light Phone 3 ಸ್ಮಾರ್ಟ್ಫೋನ್ ಕಂಪನಿಯು ಈ ವಾರದಿಂದ ಮೊದಲ ಪೂರ್ವ-ಆರ್ಡರ್‌ಗಳಿಗೆ ಫೋನ್ ಅನ್ನು ರವಾನಿಸುತ್ತದೆ.

Light Phone 3 Launched

Light Phone 3 ಸ್ಮಾರ್ಟ್ಫೋನ್ ವಿಶೇಷಣಗಳು

Light Phone 3 ಸ್ಮಾರ್ಟ್ಫೋನ್ ಡ್ಯುಯಲ್ ಸಿಮ್ (Nano+eSIM) ಜೊತೆಗೆ ತನ್ನದೇಯಾದ Light 3 ಆಪರೇಟಿಂಗ್ ಸಿಸ್ಟಂ ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಮತ್ತು 3.92 ಇಂಚಿನ (1,080×1,240 ಪಿಕ್ಸೆಲ್ಗಳು) AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಸರಳ ಕಪ್ಪು ಮತ್ತು ಬಿಳಿ ಡಿಸ್ಪ್ಲೇಯನ್ನು ಹೊಂದಿದೆ. ಆದರೆ ಕ್ಯಾಮೆರಾದಿಂದ ತೆಗೆದ ಫೋಟೋಗಳನ್ನು ಬಣ್ಣದಲ್ಲಿ ತೋರಿಸಲಾಗಿದೆ.

Also Read: Reliance Jio ಈ ಬೆಲೆಗೆ ಬೇರೆ ಯಾರು ನೀಡಿದ ಪ್ರಯೋಜನಗಳನ್ನು ನೀಡುತ್ತಿದೆ! ಕರೆ ಮತ್ತು ಡೇಟಾದೊಂದಿಗೆ 90 ದಿನಕ್ಕೆ OTT ಲಭ್ಯ!

ಫೋನ್ ಕ್ವಾಲ್ಕಾಮ್ SM 4450 ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸುತ್ತದೆ ಜೊತೆಗೆ 6GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಹಿಂಭಾಗದ ಸೆನ್ಸರ್ ಹೊಂದಿದ್ದು ಅದು 12MP ಮೆಗಾಪಿಕ್ಸೆಲ್ ಡೀಫಾಲ್ಟ್ ಇಮೇಜ್ ಔಟ್ಪುಟ್ ನೀಡುತ್ತದೆ. ಇದು ಬದಿಯಲ್ಲಿ ಎರಡು-ಹಂತದ ಶಟರ್ ಬಟನ್ ಅನ್ನು ಸಹ ಪಡೆಯುತ್ತದೆ. ಮುಂಭಾಗದಲ್ಲಿ, ಇದು 8-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ.

Light Phone 3 ಸ್ಮಾರ್ಟ್ಫೋನ್ ಏನೇನು ಹೊಂದಿದೆ?

ಲೈಟ್ ಫೋನ್ 3 ಕರೆಗಳು, ಮೆಸೇಜ್, ನಿರ್ದೇಶನಗಳು, ಅಲಾರಾಂ, ಕ್ಯಾಲೆಂಡರ್, ಕ್ಯಾಲ್ಕುಲೇಟರ್, ಹಾಟ್‌ಸ್ಪಾಟ್, ಮ್ಯೂಸಿಕ್, ನೋಟ್, ಪಾಡ್‌ಕ್ಯಾಸ್ಟ್ ಮತ್ತು ಟೈಮರ್ ಅನ್ನು ಬೆಂಬಲಿಸುತ್ತದೆ. ಇದು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಒಳಗೊಂಡಿಲ್ಲ. ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ.

ಇದು 5G ಸಂಪರ್ಕ, ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಮತ್ತು ನೋಯಿಸ್ ಕ್ಯಾನ್ಸಲೇಷನ್ ಡ್ಯುಯಲ್ ಮೈಕ್ರೊಫೋನ್‌ಗಳನ್ನು ಹೊಂದಿದೆ. ಇತರ ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ 5, GPS, NFC ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು ದೃಢೀಕರಣಕ್ಕಾಗಿ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ 1,800mAh ಬ್ಯಾಟರಿಯನ್ನು ಹೊಂದಿದೆ. ಈ ಬ್ರ್ಯಾಂಡ್ ಸೋನಿ ಸೋರ್ಪ್ಲಾಸ್ ಮರುಬಳಕೆಯ ಪ್ಲಾಸ್ಟಿಕ್ ಅನ್ನು ಫೋನ್‌ನ ಬ್ಯಾಟರಿ ಕವರ್ ಮತ್ತು ಸ್ಪೀಕರ್ ಗ್ರಿಲ್‌ಗಾಗಿ ಬಳಸಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :