ಭಾರತದಲ್ಲಿ ಹೆಚ್ಚು ಸದ್ದಿಲ್ಲದೇ LG ಇಂಡಿಯಾ 26ನೇ ಜೂನ್ ಬುಧವಾರ ರಂದು ಹೊಸ W ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿಲಾಯಿತು. ಅದು ವಿಶೇಷವಾಗಿ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿದೆ. ಹೊಸದಾಗಿ ಬಿಡುಗಡೆಯಾದ ಈ W ಸೀರಿಸ್ ಸ್ಮಾರ್ಟ್‌ಫೋನ್‌ಗಳು ಮೂರು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿವೆ. ಅವೆಂದರೆ LG W10, LG W30 ಮತ್ತು LG W30 Pro ಸ್ಮಾರ್ಟ್‌ಫೋನ್‌ಗಳು. LG W ಸರಣಿ ಸ್ಮಾರ್ಟ್‌ಫೋನ್‌ಗಳ ಕುತೂಹಲಕಾರಿ ಸಂಗತಿಯೆಂದರೆ ಇದನ್ನು ಭಾರತದಲ್ಲಿ ಸಂಪೂರ್ಣವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿ ತಯಾರಿಸಲಾಗಿದೆ. ಅಲ್ಲದೆ ಹೊಸದಾಗಿ ಪ್ರಾರಂಭಿಸಲಾದ ಈ ಸರಣಿಯನ್ನು ಎಲ್ಜಿ ಉತ್ತರ ನೋಯ್ಡಾ ಮೂಲದ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ.
ಇದರ ಆರಂಭಿಕ ಫೋನ್ LG W10 ಸ್ಮಾರ್ಟ್ಫೋನಿನ ಬೆಲೆ ಕೇವಲ 8,999 ರೂಗಳು. ಇದರ ನಂತರದ LG W30 ಸ್ಮಾರ್ಟ್ಫೋನ್ ಬೆಲೆ 9,999 ರೂಗಳಾದರೆ LG W30 Pro ಸರಣಿಯ ಬೆಲೆಯನ್ನು ಸುಮಾರು 15,000 ರೂಗಳಂತೆ ನಿರೀಕ್ಷಿಸಲಾಗಿದೆ. ಎಲ್ಲಿ ನಾವು ಕೇವಲ LG W30 ಸ್ಮಾರ್ಟ್ಫೋನ್ ಬಗ್ಗೆ ಮಾತನಾಡುತ್ತಿದ್ದೇವೆ. ಹೊಸದಾಗಿ ಬಿಡುಗಡೆಯಾದ ಈ ಸರಣಿಯು ಅಮೆಜಾನ್ ಇಂಡಿಯಾ ಮೂಲಕ ದೇಶದಲ್ಲಿ ಪ್ರತ್ಯೇಕವಾಗಿ ಲಭ್ಯವಾಗಲಿದೆ. LG W30 ಮತ್ತು W10 ಮುಂದಿನ ತಿಂಗಳು ಅಂದ್ರೆ ಜುಲೈ 3 ರಂದು ಮೊದಲ ಫ್ಲ್ಯಾಷ್ ಮಾರಾಟದಲ್ಲಿ ಲಭ್ಯವಾಗಲಿದೆ. ಮತ್ತೊಂದೆಡೆ LG W30 Pro ನಂತರದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಲಾಂಚ್ ಆಫರ್‌ನ ಭಾಗವಾಗಿ 4,950 ರೂಗಳ ಕ್ಯಾಶ್‌ಬ್ಯಾಕ್ ಅನ್ನು ಜಿಯೋ ಬಳಕೆದಾರರಿಗೆ ನೀಡುತ್ತಿದೆ. ಆದಾಗ್ಯೂ ಈ ಕೊಡುಗೆ 299 ರೂಗಳ ಪ್ಲಾನ್ ಹೊಂದಿರುವ ಬಳಕೆದಾರರಿಗೆ ಮಾನ್ಯವಾಗಿರುತ್ತದೆ.
ಈ ಹೊಸ LG W30 ಸ್ಮಾರ್ಟ್ಫೋನ್ 6.22 ಇಂಚಿನ HD+ ಡಾಟ್ ಫುಲ್ ವಿಷನ್ ಡಿಸ್ಪ್ಲೇಯನ್ನು 19: 9 ಸ್ಕ್ರೀನ್ ಅಸ್ಪೆಟ್ ರೇಷುವಿನೊಂದಿಗೆ ಬರುತ್ತದೆ. ಇದು ಆಕ್ಟಾ ಕೋರ್ ಹೆಲಿಯೊ P22 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಮತ್ತು ಇದು 32GB ಯ ಇಂಟರ್ನಲ್ ಸ್ಟೋರೇಜ್ ಮೆಮೊರಿಯೊಂದಿಗೆ 3GB ಯ RAM ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 9.0 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ. LG ಬ್ರಾಂಡ್ ಈ W ಸರಣಿ ಸ್ಮಾರ್ಟ್‌ಫೋನ್‌ಗಳ ಹೈಲೈಟ್ಗಳೆಂದರೆ ಇದರ ಹಿಂದಿನ ಕ್ಯಾಮೆರಾ ಸೆಟಪ್ ಆಗಿದೆ. ಏಕೆಂದರೆ LG W30 ಸ್ಮಾರ್ಟ್ಫೋನಲ್ಲಿ ನಿಮಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾದೊಂದಿಗೆ ಬರುತ್ತದೆ.
ಇದರಲ್ಲಿ 12MP ಯ ಸ್ಟ್ಯಾಂಡರ್ಡ್ ಲೆನ್ಸ್ ಮತ್ತೋಂದು 13MP ವೈಡ್ ಆಂಗಲ್ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಅದೇ ರೀತಿಯಲ್ಲಿ ಈ ಫೋನಿನ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದು ದೈತ್ಯಾಕಾರದ 4000mAh ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು ಆಂಡ್ರಾಯ್ಡ್ 9.0 ಪೈ ಆಧಾರಿತವಾಗಿದ್ದು ಮೀಡಿಯಾಟೆಕ್ ಹೆಲಿಯೋ P22 ಪ್ರೊಸೆಸರೊಂದಿಗೆ 2.0 GHz ಓಕ್ಟಾ ಕೋರ್ ಮೂಲಕ ನಡೆಯುತ್ತದೆ. LG W30 ಸ್ಮಾರ್ಟ್ಫೋನ್ ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಅವೆಂದರೆ ಥಂಡರ್ ಬ್ಲೂ, ಪ್ಲಾಟಿನಂ ಗ್ರೇ ಮತ್ತು ಅರೋರಾ ಗ್ರೀನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. 3.5ಎಂಎಂ ಆಡಿಯೋ ಜಾಕ್ ಜೊತೆಗೆ ಮೈಕ್ರೋ USB ಪೋರ್ಟ್ ಒಳಗೊಂಡಿದೆ.