LG V40 ThinQ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಒಟ್ಟು ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

LG V40 ThinQ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಒಟ್ಟು ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.
HIGHLIGHTS

LG V40 ThinQ ಬ್ಯಾಕ್ ಲುಕ್ ಅಂತೂ ಅದ್ದೂರಿಯಾಗಿ ಡಿಸೆಂಟ್ ಮತ್ತು ಕ್ಲಾಸಿ ಲುಕ್ ಕೊಡೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ಇಂದು CES 2019 ರ ಎರಡನೇ ದಿನ Most Expected ಸ್ಮಾರ್ಟ್ಫೋನ್ ಆಗಿರುವ LG V40 ThinQ ಬಗ್ಗೆ ಸ್ವಲ್ಪ ಮಾಹಿತಿ ಪಡ್ಕೊಳ್ಳೋಣ. ಇದರ ಮೊದಲ ವಿಶೇಷತೆ ಅಂದ್ರೆ ಈ ಸ್ಮಾಟ್ಫೋನ್ CES 2019 ರ ಇನ್ನೋವೇಶನ್ ಅವಾರ್ಡ್ ಅನ್ನು ಸಹ ಪಡೆದುಕೊಂಡಿದೆ. ನಿಮಗಿಗಲೇ ತಿಳಿದಿರುವಂತೆ ಭಾರತದಲ್ಲಿ G ಸರಣಿಯ G6, G7 ಮತ್ತು V30 ಬಗ್ಗೆ ತಿಳಿದಿದೆ. ಅವೆಲ್ಲ ಒಂದೇ ರೀತಿಯ ವಿನ್ಯಾಸ ಹೊಂದಿವೆ. ಆದರೆ ಈ ಫೋನ್ ಆಗಲ್ಲ. ಹೇಗಪ್ಪಾ ಅಂದ್ರೆ ಇದರ ಬ್ಯಾಕ್ ಕಡೆಯಿಂದ ಶುರು ಮಾಡೋಣ. ಇದರ ಬ್ಯಾಕ್ ಗ್ಲಾಸ್ ಮ್ಯಾಟ್ ಫಿನಿಶಿಂಗ್ ಲುಕ್ ಹೊಂದಿದೆ. ಇದು ನಾರ್ಮಲಾಗಿ ನಾವು ನೋಡಿರುವ ಫೋನ್ಗಳಂತಿಲ್ಲ. 

ಇದರ ಬ್ಯಾಕ್ ಲುಕ್ ಅಂತೂ ಅದ್ದೂರಿಯಾಗಿ ಡಿಸೆಂಟ್ ಮತ್ತು ಕ್ಲಾಸಿ ಲುಕ್ ಕೊಡೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಇದರ ಬ್ಯಾಕಲ್ಲಿ ನಿಮಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಿದ್ದು ಇದರ ಕ್ಯಾಮೆರಾಗಳು ಸೂಪರ್ ವೈಡ್ ಆಂಗಲ್, ಸ್ಟ್ಯಾಂಡರ್ ವೈಡ್ ಆಂಗಲ್ ಮತ್ತು ಟೆಲಿಫೋಟೋ ಶಾಟ್ಗಳನ್ನು ನೀಡುತ್ತಿದೆ. ಇದರ ರೆಸೊಲ್ಯೂಷನ್ ಬಗ್ಗೆ ಹೇಳಬೇಕೆಂದರೆ ಸೂಪರ್ ವೈಡ್ ಆಂಗಲ್ 16MP ಕ್ಯಾಮೆರಾ ಮತ್ತು , ಸ್ಟ್ಯಾಂಡರ್ ವೈಡ್ ಆಂಗಲ್ ಮತ್ತು ಟೆಲಿಫೋಟೋ 12MP ಹೊಂದಿದೆ. 

ಇದರ ಡಿಸೈನ್ ಬಗ್ಗೆ ಹೇಳಬೇಕೇದರೆ ಅಲ್ಮೊಡ್ 6.4  ಇಂಚಿನ Dolby Vision HDR10 ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ Qualcomm Snapdragon 845 ಪ್ರೊಸೆಸರ್ 64/128GB ಯ 6GB RAMನೊಂದಿಗೆ 3300mAh ಬರುತ್ತದೆ. ಇದರ ಫ್ರಂಟ್ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ 8MP ಕ್ಯಾಮೆರಾ ಮತ್ತು ವೈಡ್ ಆಂಗಲ್ 5MP ಕ್ಯಾಮೆರಾ ನೀಡಿದೆ. ಇದರಲ್ಲೂ ಸಹ LG IP68 ಸ್ಪೆಸಿಫಿಕೇಷನ್ಗಳೆಲ್ಲ ಲಭ್ಯವಿವೆ. ಕೊನೆಯ ವರ್ಷ LG ಹಲವಾರು ಫೋನ್ಗಳನ್ನು ಹೊರ ತಂದರು ಅಷ್ಟಾಗಿ ಸಕ್ಸಸ್ ಆಗಿಲ್ಲ. ಆದರೆ ನೋಡೋಣ ಈ LG V40 ThinQ ಯಾವ ರೀತಿ ನಿಲ್ಲಲಿದೆ. 

ಈ ಫೋನ್ ಭಾರತದಲ್ಲಿ ಯಾವಾಗ ಸಿಗುತ್ತೆ ಅದರ ಬಗ್ಗೆ ಇನ್ನು ಡೇಟ್ ಫಿಕ್ಸ್ ಆಗಿಲ್ಲ ನೋಡೋಣ ಎಷ್ಟು ಬೇಗ ಬರುತ್ತೆ ಅಂತ. ಈ ಸ್ಮಾರ್ಟ್ಫೋನ್ ಒಟ್ಟು ಐದು ಕಲರ್ಗಳಲ್ಲಿ ಬರಲಿದೆ New Platinum Gray, Carmine Red, New Aurora Black, New Moroccan Blue ಇಲ್ಲಿ ಮತ್ತು ಬೇರೆ ಕಲರ್ ಇಲ್ಲಿವೆ ನೋಡಿ ಅದು New Aurora Black ಆದರೂ ಇವೇಲ್ಲ ಫೋನ್ಗಳಲ್ಲಿ Carmine Red ತುಂಬ ಸುಂದರ ಮತ್ತು ಆಕರ್ಷಕವಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo