Lenovo Z5 Pro GT ಲೆನೊವೊ ಕಂಪನಿಯ ಮೊಟ್ಟ ಮೊದಲ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 855 ಪ್ರೊಸೆಸರ್ ಹೊಂದಿರುವ ಫೋನಾಗಿದೆ. ಇದು ಕೆಲವೇ ವಾರಗಳ ಹಿಂದೆ ಚೀನದಲ್ಲಿ ಬಿಡುಗಡೆಯಾಗಿದ್ದು ಈಗ CES 2019 ರಲ್ಲಿ ನನ್ನ ಕೈ ಸೇರಿದೆ. ಇದು ZUI 10.0 ವಿನೊಂದಿಗೆ ಆಂಡ್ರಾಯ್ಡ್ 9.0 Pie ಯಲ್ಲಿ ರನ್ ಆಗುತ್ತದೆ.
ಇದರ ಡಿಸ್ಪ್ಲೇ ಬಗ್ಗೆ ಹೇಳಬೇಕೆಂದರೆ ಇದು 6.39 FHD+ ಸೂಪರ್ ಅಮುಲೆಡ್ ಡಿಸ್ಪ್ಲೇಯೊಂದಿಗೆ 19:9 ಆಸ್ಪೆಕ್ಟ ರೇಷು ಜೋತೆಗೆ ಕಾರ್ನಿಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ. Lenovo Z5 Pro GT ನಿಮಗೆ ಡ್ಯೂಯಲ್ ರೇರ್ ಕ್ಯಾಮೆರಾ ಸೆಟಪಿನೊಂದಿಗೆ ಅಂದ್ರೆ 16MP ಮತ್ತು 24MP ಕ್ಯಾಮೆರಾ ಸೆನ್ಸರ್ಗಳೊಂದಿಗೆ LED ಫ್ಲಾಶನ್ನು ಒಳಗೊಂಡಿದೆ. ಈಗಾಗಲೇ ಈ ರೀತಿಯ ಕಾರ್ಬನ್ ಫೈಬರ್ ಫಿನಿಷಿನೊಂದಿಗಿನ ಫೋನನ್ನು ಅಂದ್ರೆ POCO F1 ಆರ್ಮರ್ಡ್ ಎಡಿಷನ್ ಬ್ಯಾಕ್ ಲುಕ್ ಇದು ನೆನಪಿಸುತ್ತದೆ.
ಇದರ ಫ್ರಂಟ್ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಇದರ ಫ್ರಂಟಲ್ಲು ಸಹ ನಿಮಗೆ ಡುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು ಸೆಲ್ಫಿಗಾಗಿ 16MP ಮೆಗಾಪಿಕ್ಸೆಲ್ ಮತ್ತು ಫೇಸ್ ಅನ್ಲಾಕ್ ಫೀಚರ್ಗಾಗಿ 8MP IR ಮೆಗಾಪಿಕ್ಸೆಲ್ ಸೆನ್ಸರ್ ನೀಡಿದೆ. ಅಲ್ಲದೆ ಇದರಲ್ಲಿ ನಿಮಗೆ ಅಂಬಿಯನ್ ಲೈಟ್ ಮತ್ತು ಇಯಾರ್ ಪೀಸ್ ಸೆನ್ಸರ್ಗಳನ್ನು ನೀಡಲಾಗಿದೆ.
ಈ Lenovo Z5 Pro GT ನಿಮಗೆ 3350mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಸದ್ಯಕ್ಕೆ ಈಗಾಗ್ಲೇ ಮೇಲೆ ನಿಮಗೆ ತೋರಿಸಿದಂತೆ ಸದ್ಯಕ್ಕೆ ಚೀನದಲ್ಲಿ ಮಾತ್ರ ಲಭ್ಯವಿದೆ. ಇಲ್ಲಿ ಇದು ಒಟ್ಟು ನಾಲ್ಕು ವೇರಿಯೆಂಟ್ಗಳಲ್ಲಿ ಅಂದ್ರೆ 6GB/128GB, 8GB/128GB, 8GB/256GB ಮತ್ತು 12GB/512GB ಆದರೆ ಸದ್ಯೆಕ್ಕೆ ಇದರ ಬೆಲೆ ಬಹೀರಂಗವಾಗಿಲ್ಲ. ಅಲ್ಲದೆ ಭಾರತದಲ್ಲಿ ಇದರ ಬಿಡುಗಡೆಯ ಬಗ್ಗೆಯು ಸಹ ಇನ್ನು ಯಾವುದೇ ಮಾಹಿತಿಗಳಿಲ್ಲ.